Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಸಾಲಿಗ್ರಾಮ- ವಿಪ್ರ ಮಹಿಳಾ ಬಳಗದಿಂದ ಆಷಾಡ ತಿನಿಸುಗಳ ಸ್ಪರ್ಧಾ ಕಾರ್ಯಕ್ರಮ. ಗಮನ ಸೆಳೆದ ವಿವಿಧ ತಿನಿಸುಗಳು

ಸಾಲಿಗ್ರಾಮ- ವಿಪ್ರ ಮಹಿಳಾ ಬಳಗದಿಂದ ಆಷಾಡ ತಿನಿಸುಗಳ ಸ್ಪರ್ಧಾ ಕಾರ್ಯಕ್ರಮ. ಗಮನ ಸೆಳೆದ ವಿವಿಧ ತಿನಿಸುಗಳು

ಕೋಟ: ವಿಪ್ರ ಮಹಿಳಾ ಬಳಗ ಸಾಲಿಗ್ರಾಮ ಇವರ ಆಶ್ರಯದಲ್ಲಿ ಆಷಾಡ ಮಾಸದ ಅಂಗವಾಗಿ ಗ್ರಾಮೀಣ ತಿನಿಸುಗಳ ಸ್ಫರ್ಧಾ ಕಾರ್ಯಕ್ರಮ ಶುಕ್ರವಾರ ಚಿತ್ರಪಾಡಿ ವನೀತಾ ಉಪಾಧ್ಯಾಯರ ಮನೆಯಂಗಳದಲ್ಲಿ ನಡೆಯಿತು. ಸಾಮಾನ್ಯವಾಗಿ ಪ್ರಸ್ತುತ ಕಾಲಘಟ್ಟದಲ್ಲಿಆಧುನಿಕತೆ ನವ ನವೀನವಾದ ತಿಂಡಿ ತಿನಿಸುಗಳ ಸ್ಪರ್ಧಾ ಜಗತ್ತಿನಲ್ಲಿ ಮರೆಯಾಗುತ್ತಿರುವ ಗ್ರಾಮೀಣ ತಿಂಡಿ ತಿನಿಸುಗಳನ್ನು ವಿಪ್ರ ಮಹಿಳೆಯರನ್ನು ಒಗ್ಗೂಡಿಸಿ ಅವರ ಮನೆಯಿಂದಲೇ ತಿಂಡಿ ತಯಾರಿಸಿ ಕಾರ್ಯಕ್ರಮದಲ್ಲಿ ಪ್ರದರ್ಶನಕ್ಕೆ ಇರಿಸಲಾಯಿತು.

ಪ್ರದರ್ಶನವನ್ನು ವಿಪ್ರ ಮಹಿಳಾ ಬಳಗದ ಪ್ರಮುಖರಾದ ವಾಗ್ದೇವಿ ಉಪಾಧ್ಯಾಯ ತಿನಿಸುಗಳನ್ನು ತೆರೆಯುವ ಮೂಲಕ ಉದ್ಘಾಟಿಸಿದರು. ರಾಜ್ಯ ಪ್ರಶಸ್ತಿ ಪುರಸ್ಕೃತ  ನಿವೃತ್ತ ಶಿಕ್ಷಕ ಪಿ.ನರಸಿಂಹ ಐತಾಳ್ ಆಧುನಿಕ ಜಗತ್ತಿನಲ್ಲಿ ಮಹಿಳೆಯರು ತಮ್ಮ ಜೀವನದಲ್ಲಿ ವ್ಯಕ್ತಿತ್ವ ವಿಕಸನಗೊಳ್ಳುವ ಕುರಿತಂತೆ ಸಮಗ್ರ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ವಿಪ್ರ ಮಹಿಳಾ ಬಳಗದ ಅಧ್ಯಕ್ಷೆ ಜ್ಞಾಹ್ನವಿ ಹೇರ್ಳೆ , ಮಣೂರು ಸ್ನೇಹಕೂಟದ ಭಾರತಿ ವಿ. ಮಯ್ಯ ಕಾರ್ಯಕ್ರಮ ಸಂಯೋಜಕಿ ವಿಪ್ರ ಮಹಿಳಾ ಬಳಗದ ಸಂಚಾಲಕಿ ವನೀತಾ ಉಪಾಧ್ಯಾ, ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿಪ್ರ ಮಹಿಳಾ ಬಳಗದ ಸುಜಾತ ಬಾಯಿರಿ ಸ್ವಾಗತಿಸಿ ನಿರೂಪಿಸಿದರು.

ಗಮನ ಸೆಳೆದ ತಿನಿಸುಗಳು

ಗ್ರಾಮೀಣ ಭಾಗದ ತಿನಿಸುಗಳಲ್ಲಿ ಆಗಿನ ಕಾಲದಲ್ಲಿ ಪ್ರಸಿದ್ಧಿ ಪಡೆದ ಪ್ರಮುಖ ತಿನಿಸುಗಳಾದ ಪತ್ರೊಡೆ, ವರ್ಲಿ ಕಡಬು, ಉಡ್ಲಾಕ್ಕ್, ಕೇಸಿನ್ ಸೊಪ್ಪಿನ್ ಗೊಜ್ಜು, ಶಾವಿಗೆ, ವರ್ಲಿ ಸಾರು, ಕೊಚ್ಚಿಕ್ಕಿ ಅನ್ನ, ಕರಿ ಹೆಸರು ಪಾಯಸ, ಚಕ್ಕುಲಿ, ಶಂಕರ ಪೋಳಿ, ಇತರ ತಿನಿಸುಗಳು ಗಮನ ಸೆಳೆಯಿತು. ಪೂರ್ವಾಹ್ನದಿಂದಲೇ ವಿವಿಧ ಸ್ಫರ್ಧೆಗಳು ಮಹಿಳೆಯರಿಗೆ ಬಳಗ ಆಯೋಜಿಸಿತು.

ವಿಪ್ರ ಮಹಿಳಾ ಬಳಗ ಸಾಲಿಗ್ರಾಮ ಇವರ ಆಶ್ರಯದಲ್ಲಿ ಆಷಾಡ ಮಾಸದ ಅಂಗವಾಗಿ ಗ್ರಾಮೀಣ ತಿನಿಸುಗಳ ಸ್ಫರ್ಧಾ ಕಾರ್ಯಕ್ರಮ ಶುಕ್ರವಾರ ಚಿತ್ರಪಾಡಿ ವನೀತಾ ಉಪಾಧ್ಯಾಯರ ಮನೆಯಂಗಳದಲ್ಲಿ ನಡೆಯಿತು.

Leave a Reply

Your email address will not be published. Required fields are marked *