
ಕೋಟ: ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಗೋಳಿಬೆಟ್ಟು, ಐರೋಡಿ ಸಾಸ್ತಾನ ಇಲ್ಲಿ ಪೂರ್ಣಿಮಾ ಶೆಟ್ಟಿ, ಬೆಂಗಳೂರು ಇವರು ತಮ್ಮ ತಂದೆ ಕುಸುಮಾಕರ್ ಬಿ. ಶೆಟ್ಟಿ ಹಾಗೂ ತಾಯಿ ಶ್ಯಾಮಲಾ ಶೆಟ್ಟಿಯವರ ಉಪಸ್ಥಿತಿಯಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಗೋಳಿಬೆಟ್ಟು, ಐರೋಡಿ ಸಾಸ್ತಾನ ಶಾಲೆಯ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ನೋಟ್ ಪುಸ್ತಕಗಳನ್ನು ವಿತರಣೆ ಗೈದರು.
ಶಾಲೆಯ ವಿದ್ಯಾರ್ಥಿಗಳಿಗೆ ಇನ್ನೂ ಹೆಚ್ಚಿನ ನೋಟ್ ಪುಸ್ತಕಗಳ ಅವಶ್ಯಕತೆ ಇದ್ದಲ್ಲಿ ತಿಳಿಸಿ ಹಾಗೇ ಯಾವುದೇ ಬೇಡಿಕೆ ಇದ್ದಲ್ಲಿ ಮುಂದಿನ ದಿನಗಳಲ್ಲಿ ವ್ಯವಸ್ಥೆಗೊಳಿಸುವ ಭರವಸೆಯನ್ನು ಕುಸುಮಾಕರ್ ಬಿ. ಶೆಟ್ಟಿ ನೀಡಿದರು.
ಕಾರ್ಯಕ್ರಮದಲ್ಲಿ ಶಾಲಾ ಎಸ್‍ಡಿಎಂಸಿ ಅಧ್ಯಕ್ಷೆ ಪೂರ್ಣಿಮಾ ಸತೀಶ್, ಉಪಾಧ್ಯಕ್ಷ ವಿಜಯ್ ಪೂಜಾರಿ, ಎಸ್‍ಡಿಎಂಸಿ ಸದಸ್ಯರು, ಮಕ್ಕಳ ಪೋಷಕರು ಉಪಸ್ಥಿತರಿದ್ದರು. ಸಹಶಿಕ್ಷಕಿ ಭವಾನಿ ಮತ್ತು ಗೌರವ ಶಿಕ್ಷಕಿ ಅಕ್ಷತಾ ಸಹಕರಿಸಿದರು.
ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಗೋಳಿಬೆಟ್ಟು, ಐರೋಡಿ ಸಾಸ್ತಾನ ಇಲ್ಲಿನ ವಿದ್ಯಾರ್ಥಿಗಳಿಗೆ ದಾನಿಗಳ ನೆರವಿನಿಂದ ಉಚಿತ ನೋಟಬುಕ್ ವಿತರಣೆ ನಡೆಯಿತು.
Leave a Reply