Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ತೆಕ್ಕಟ್ಟೆಯಲ್ಲಿ ಕುಂದಾಪುರ ಕನ್ನಡ ದಿನಾಚರಣೆಯಲ್ಲಿ ಯಕ್ಷಗಾನ “ಗ್ವಲ್ ಗ್ವಲ್ಲಿ”

ಕೋಟ: ಕಳೆದ ಹಲವಾರು ವರ್ಷಗಳಿಂದ ಸಾಹಿತಿ ಪ್ರಸಾದ್ ಕುಮಾರ್ ಮೊಗೆಬೆಟ್ಟು ನೆರವಿನಿಂದ ಕುಂದಾಪುರ ಕನ್ನಡ ದಿನವನ್ನು ಅದ್ಧೂರಿಯಾಗಿ ಆಚರಿಸುತ್ತಿರುವ ಯಶಸ್ವಿ ಕಲಾವೃಂದ ಈ ಬಾರಿ ಜುಲೈ 16ರಂದು ತೆಕ್ಕಟ್ಟೆ ಹಯಗ್ರೀವದಲ್ಲಿ ಅಪರಾಹ್ನ 3ಗ, ರಿಂದ ರಾಮಾಯಣದ ಕೆಲವು ಭಾಗಗಳನ್ನು ಆಯ್ದುಕೊಂಡು ಮೊಗೆಬೆಟ್ಟು ವಿರಚಿತ ಕಥಾನಕವನ್ನು ಯಕ್ಷಗಾನ ಪ್ರದರ್ಶನವಾಗಿ “ಗ್ವಲ್ ಗ್ವಲ್ಲಿ” ಎಂಬ ಹೆಸರಿನಿಂದ ಆಯ್ದ ಕಲಾವಿದರನ್ನು ಕೂಡಿಸಿಕೊಂಡು ಸಂಯೋಜಿಸಿದ್ದಾರೆ.

ಇದೇ ಸಂದರ್ಭದಲ್ಲಿ ಸಂಸ್ಥೆಗೆ ‘ಪ್ರಸಾಧನ’ ನೂತನ ಯಕ್ಷಗಾನ ವೇಷಭೂಷಣವನ್ನು ಆನಂದ ಸಿ. ಕುಂದರ್ ನೆರವಿನಿಂದ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮವನ್ನು ಮಾಜಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಲಿದ್ದಾರೆ. ಪ್ರಸ್ತಾವನೆಯನ್ನು ಪ್ರಸಂಗಕರ್ತ ಪ್ರಸಾದ್ ಕುಮಾರ್ ಮೊಗೆಬೆಟ್ಟು ನೆರವೇರಿಸಲಿರುವ ಕಾರ್ಯಕ್ರಮದಲ್ಲಿ ತೆಕ್ಕಟ್ಟೆ ರೋಟರಿ ಕ್ಲಬ್ ನೂತನ ಅಧ್ಯಕ್ಷ ಸುಧಾಕರ ಶೆಟ್ಟಿ ಹಾಗೂ ಯಕ್ಷಾಭರಣ ತಯಾರಕರಾದ ಜನ್ನಾಡಿ ಗಣೇಶ್ ಬಳೆಗಾರ ಇವರನ್ನು ಅಭಿನಂದಿಸಲಾಗುವುದು.

ಮುಖ್ಯ ಅಭ್ಯಾಗತರಾದ ಮಾಜಿ ವಿಧಾನ ಪರಿಷತ್ ಸದಸ್ಯರಾದ ಜಯಪ್ರಕಾಶ್ ಹೆಗ್ಡೆ, ಖ್ಯಾತ ವಕೀಲರಾದ ಎ.ಎಸ್.ಎನ್. ಹೆಬ್ಬಾರ್, ಸಾಂಸ್ಕøತಿಕ ಚಿಂತಕರಾದ ಉದಯ್ ಶೆಟ್ಟಿ ಪಡುಕೆರೆ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಗಣಪತಿ ಟಿ. ಶ್ರೀಯಾನ್ ಉಪಸ್ಥಿತರಿರುವರು. ಸಭಾಧ್ಯಕ್ಷರಾಗಿ ಮಲ್ಯಾಡಿ ಶಿವರಾಮ ಶೆಟ್ಟಿ ಉಪಸ್ಥಿತಿಯಲ್ಲಿರುವರು.

ಬಳಿಕ ರಂಗದಲ್ಲಿ ಯಕ್ಷಗಾನ ಪ್ರದರ್ಶನವಾಗಿ “ಗ್ವಲ್ ಗ್ವಲ್ಲಿ” ರಂಗ ಪ್ರಸ್ತುತಿ. ವಿದ್ವಾನ್ ಗಣಪತಿ ಭಟ್, ಕೂಡ್ಲಿ ದೇವದಾಸ್ ರಾವ್, ಹೆರೆಂಜಾಲು ಗೋಪಾಲ ಗಾಣಿಗ, ಪ್ರಸಾದ್ ಕುಮಾರ್ ಮೊಗೆಬೆಟ್ಟು, ರಾಘವೇಂದ್ರ ಹೆಗ್ಡೆ ಯಲ್ಲಾಪುರ, ರಾಹುಲ್ ಕುಂದರ್, ಭರತ್ ಚಂದನ್, ಸುಜಯೀಂದ್ರ ಹಂದೆ ಕೋಟ, ಹೊಸಂಗಡಿ ರಾಜೀವ ಶೆಟ್ಟಿ, ಶಿವಾನಂದ ಕೋಟ, ಸ್ಪೂರ್ತಿ ಭಟ್, ರಾಘವೇಂದ್ರ ತುಂಗ, ಸುಹಾಸ ಕರಬ, ಹರ್ಷಿತಾ, ರಚಿತ್, ಆರಭಿ, ಪರಿಣಿತ ಪ್ರದರ್ಶನದಲ್ಲಿ ರಂಗದಲ್ಲಿ ಕಲಾವಿದರಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಮಲ್ಯಾಡಿ ಸೀತಾರಾಮ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *