
ತೆಕ್ಕಟ್ಟೆ-ಪಂಚವರ್ಣದ ಸಾಮಾಜಿಕ ಕಳಕಳಿಯ ಕಾರ್ಯಕ್ರಮ ಮನೆಮಾತಾಗಿದೆ- ಗೋಪಾಲ್ ಪೂಜಾರಿ
ಕೋಟ: ಪಂಚವರ್ಣ ಸಂಸ್ಥೆಯ ಸಾಮಾಜಿಕ ಬದ್ಧತೆ ಅದರ ಕಳಕಳಿಯ ಕಾರ್ಯಕ್ರಮ ಮನೆಮಾತಾಗಿ ಬೆಳೆದು ನಿಂತಿದೆ ಎಂದು ಕೊಮೆ ವಿವಿಧೋದ್ದೇಶ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಗೋಪಾಲ್ ಪೂಜಾರಿ ಹೇಳಿದರು.
ಭಾನುವಾರ ಪಂಚವರ್ಣ ಯುವಕ ಮಂಡಲ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ನೇತ್ರತ್ವದಲ್ಲಿ ಮಣೂರು ಫ್ರೆಂಡ್ಸ್,ವಿಪ್ರ ಮಹಿಳಾ ಬಳಗ ಸಾಲಿಗ್ರಾಮ, ಹಂದಟ್ಟು ಮಹಿಳಾ ಬಳಗ ಸಹಯೋಗದೊಂದಿಗೆ ಪರಿಸರಸ್ನೇಹಿ ಕಾರ್ಯಕ್ರಮಕ್ಕೆ 172ನೇ ವಾರದ ಸಂಭ್ರಮ ಆ ಪ್ರಯುಕ್ತ ತೆಕ್ಕಟ್ಟೆ ಪರಿಸರದ ಕೊಮೆ ಹಾಲು ಉತ್ಪಾದಕರ ಸಹಕಾರಿ ಸಂಘದ ಸಂಯೋಜನೆಯೊಂದಿಗೆ ಜೂನ್‍ನಿಂದ ಅಗಸ್ಟ್‍ವರೆಗೆ ಹಮ್ಮಿಕೊಂಡ ವನಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ ಪರಿಸರಸ್ನೇಹಿ ಕಾರ್ಯಕ್ರಮಗಳ ಮೂಲಕ ಹೊಸ ಭಾಷ್ಯ ಬರೆಯುತ್ತಿರುವ ಈ ಸಂಸ್ಥೆ ಪರಿಸರಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ನೀಡುತ್ತಿದೆ ಇದು ಪ್ರಶಂಸನೀಯ ಕಾರ್ಯ,ಪ್ರತಿವಾರ ಗಲ್ಲಿ ಗಲ್ಲಿಗೆ ತೆರಳಿ ಗಿಡ ವಿತರಿಸಿ ನೆಟ್ಟು ಆರೈಕೆಯ ವಿಧಾನ ತಿಳಿಸುವ ಕಾರ್ಯ ಊರಿನ ಇತರ ಸಂಘಗಳಿಗೆ ಮಾದರಿಯಾಗಿದೆ.ಪರಿಸರವನ್ನು ಉಳಿಸಿ ಬೆಳೆಸುವ ಕಾರ್ಯ ಪ್ರತಿಯೊಬ್ಬರ ಮನೆ ಮನದಲ್ಲಿ ಪಸರಿಸಿಕೊಳ್ಳಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಪರಿಸರದ ಸಾರ್ವಜನಿಕರಿಗೆ ಗಿಡ ವಿತರಿಸಲಾಯಿತು. ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅಭ್ಯಾಗತರಾಗಿ ತೆಕ್ಕಟ್ಟೆ ಗ್ರಾಮಪಂಚಾಯತ್ ಮಾಜಿ ಅಧ್ಯಕ್ಷ ಶೇಖರ್ ಕಾಂಚನ್, ಕೊಮೆ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ರಾಜು ಪೂಜಾರಿ, ನಿರ್ದೇಶಕ ಮಹಾಬಲ ಶೆಟ್ಟಿ, ಕೋಟ ಕರ್ಣಾಟಕ ಬ್ಯಾಂಕ್ ಸಿಬ್ಬಂದಿ ನಾಗೇಶ್ ಮಯ್ಯ, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಕಲಾವತಿ ಅಶೋಕ್, ಕಾರ್ಯದರ್ಶಿ ಲಲಿತಾ ಗಿಳಿಯಾರ್, ಪಂಚವರ್ಣ ಸಂಸ್ಥೆಯ ಕಾರ್ಯದರ್ಶಿ ಸುಧೀಂದ್ರ ಜೋಗಿ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಪಂಚವರ್ಣದ ಸದಸ್ಯೆ ಸುಜಾತ ಬಾಯರಿ ಸ್ಚಾಗತಿಸಿ ನಿರೂಪಿಸಿದರು.ಕೊಮೆ ಹಾಲು ಉತ್ಪಾದಕರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಘವೇಂದ್ರ ವಾದಿಸಿದರು. ಪಂಚವರ್ಣದ ಕಾರ್ಯಾಧ್ಯಕ್ಷ ರವೀಂದ್ರ ಕೋಟ ಕಾರ್ಯಕ್ರಮ ಸಂಯೋಜಿಸಿದರು. ಜಯಂಟ್ಸ್ ಗ್ರೂಪ್ ಬ್ರಹ್ಮಾವರ ಹಾಗೂ ಗೀತಾನಂದ ಫೌಂಡೇಶನ್ ಮಣೂರು ಗಿಡದ ವ್ಯವಸ್ಥೆ ಕಲ್ಪಿಸಿತು.
ಪಂಚವರ್ಣ ಯುವಕ ಮಂಡಲ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ನೇತ್ರತ್ವದಲ್ಲಿ ಮಣೂರು ಫ್ರೆಂಡ್ಸ್,ವಿಪ್ರ ಮಹಿಳಾ ಬಳಗ ಸಾಲಿಗ್ರಾಮ,ಹಂದಟ್ಟು ಮಹಿಳಾ ಬಳಗ ಸಹಯೋಗದೊಂದಿಗೆ ಪರಿಸರಸ್ನೇಹಿ ಕಾರ್ಯಕ್ರಮಕ್ಕೆ 172ನೇ ವಾರದ ಸಂಭ್ರಮ ಆ ಪ್ರಯುಕ್ತ ತೆಕ್ಕಟ್ಟೆ ಪರಿಸರದ ಕೊಮೆ ಹಾಲು ಉತ್ಪಾದಕರ ಸಹಕಾರಿ ಸಂಘದ ಸಂಯೋಜನೆಯೊಂದಿಗೆ ಜೂನ್‍ನಿಂದ ಅಗಸ್ಟ್‍ವರೆಗೆ ಹಮ್ಮಿಕೊಂಡ ವನಮಹೋತ್ಸವ ಕಾರ್ಯಕ್ರಮ ಜರಗಿತು.
Leave a Reply