
ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ನ ಪಾಠವನ್ನು ಮರು ಸೇರ್ಪಡೆಗೊಳಿಸಲು ಭಗತ್ ಸಿಂಗ್ ಸೇವಾ ಪ್ರತಿಷ್ಠಾನ ಒತ್ತಾಯ
ಕರ್ಣಾಟಕ ರಾಜ್ಯ ಸರ್ಕಾರ ಶಿಕ್ಷಣ ಇಲಾಖೆಯ ಫ್ರೌಡಶಾಲಾ ಮಕ್ಕಳ ಸಮಾಜವಿಜ್ಙಾನ ಪಠ್ಯಪುಸ್ತಕ ದಲ್ಲಿದ್ದ ಭಗತ್ ಸಿಂಗ್, ಸುಖ್ ದೇವ್,ರಾಜ್ ಗುರು ರಂತಹ ಕ್ರಾಂತಿ ಕಾರಿ ಸ್ವಾತಂತ್ರ್ಯ ಹೋರಾಟಗಾರ ರ ಪಾಠವನ್ನು ತೆಗೆದಿರುವ ಸರ್ಕಾರದ ಕ್ರಮದ ವಿರುದ್ಧ ಖಂಡನಾ ನಿರ್ಣಯವನ್ನು ಮತ್ತು ಪಾಠವನ್ನು ಮರು ಸೇರ್ಪಡೆಗೊಳಿಸಲು ಒತ್ತಾಯಿಸಿ ಭಗತ್ ಸಿಂಗ್ ಸೇವಾ ಪ್ರತಿಷ್ಠಾನದ ಅಧ್ಯಕ್ಷರಾದ ಜೀವನ್ ಕುಮಾರ್ ತೊಕ್ಕೊಟು ನೇತೃತ್ವದಲ್ಲಿ, ಮುಖ್ಯಮಂತ್ರಿ ಗಳಿಗೆ ಜಿಲ್ಲಾಧಿಕಾರಿ ಗಳ ಮೂಲಕ ಮನವಿ ಪತ್ರವನ್ನು ಚುನಾವಣಾ ತಹಸೀಲ್ದಾರ್ ರವರಿಗೆ ಸಲ್ಲಿಸಲಾಯಿತು.

ಗೌರವಧ್ಯಕ್ಷರಾದ ರಾಕೇಶ್ ಬೈಪಾಸ್, ಉಪಾಧ್ಯಕ್ಷ ರಾದ ಪ್ರವೀಣ್ ಬಸ್ತಿ, ಪ್ರಧಾನ ಕಾರ್ಯದರ್ಶಿ ಗಣೇಶ್ ಕಾಪಿಕಾಡ್, ಕಾರ್ಯದರ್ಶಿ ಕಿರಣ್ ಕೊಲ್ಯ, ಸಂ.ಕಾರ್ಯದರ್ಶಿ ಮೋಹನ್ ಸಾಲ್ಯಾನ್ ಜತೆಯಲ್ಲಿದ್ದರು.
Leave a Reply