
ಕೋಟ: ಪ್ರತಿವರ್ಷ ಜುಲಾಯಿ ಅಥವಾ ಅಗಸ್ಟ್ ತಿಂಗಳಲ್ಲಿ ಆಟಿ ಅಮವಾಸ್ಯೆ ಬರುತ್ತದೆ .ಜನಸಾಮಾನ್ಯರು ಹಿಂದಿನ ಪರಂಪರೆಯಂತೆ ತಮ್ಮ ಸಂಕಷ್ಟ ತೊಳೆಯಲೆಂದು ಸಮುದ್ರ ಸ್ನಾನ ಗೈದು ಸ್ಥಳೀಯ ದೇವಸ್ಥಾನ ಸಂದರ್ಶಿಸುತ್ತಾರೆ.
ಆದರೆ ಈ ವರ್ಷ ಕೋಟ, ಸಾಲಿಗ್ರಾಮ, ಕೋಡಿ, ಕೊಮೆ, ಕೊರವಡಿ ಇತರ ಭಾಗಗಳಲ್ಲಿ ಜನಸಾಮಾನ್ಯರಲ್ಲಿ ಗೊಂದಲಮಯ ವಾತಾವರಣ ಸೃಷ್ಠಿಯಾಗಿ ಬೆರಳೆಣಿಕೆಯಷ್ಟು ಜನ ಕಡಲಿಗಿಳಿದು ಸ್ನಾನಗೈದು ಹಿಂತಿರುಗಿದರು. ಸಾಮಾನ್ಯವಾಗಿ ಮರವಂತೆ ವರಹ ಸ್ವಾಮಿ ದೇವಸ್ಥಾನದ ಆಚರಣೆ ನೋಡಿ ಅಥವಾ ಆಷಾಡ ಮಾಸ ಆರಂಭದ ನಂತರ ಅಮವಾಸ್ಯೆ ನೋಡಿ ಈ ಸಮಯದ್ರ ಸ್ನಾನಗೈಯುತ್ತಾರೆ.ಅದರಂತೆ ಈ ಬಾರಿ ಅಧಿಕ ಮಾಸದ ಹಿನ್ನಲ್ಲೆಯಲ್ಲಿ ಜನಸಾಮಾನ್ಯರಲ್ಲಿ ಗೊಂದಲ ಉಂಟಾವಾಗಿ ಆಟಿ ಅಮಾವಾಸ್ಯೆ ಮುಂದಿನ ತಿಂಗಳು ಆಚರಿಸಿಕೊಳ್ಳುತ್ತಿದ್ದಾರೆ.
ಬಾರಿ ಪ್ರಮಾಣದ ಸಮುದ್ರ ಅಲೆಗಳ ನಡುವೆ ಸಮುದ್ರಸ್ನಾನ ಸಮುದ್ರದ ನೀರು ಏರುಗತಿಯ,ಸೆಳೆತದ ನಡುವೆಯೂ ಸಮುದ್ರಕ್ಕೆ ಇಳಿದ ಬೆರಳೆಣಿಕೆಯಷ್ಟ ಜನ ಜಾಗೃತಿಯಿಂದ ಸ್ನಾನಗೈದರು.ಸಾಕಷ್ಟು ಭಾಗದಲ್ಲಿ ಕಡಲ್ಕೊರೆತಗಿಡಾಗಿದ್ದು ಅಲ್ಲಿಅಳವಡಿಸಲಾದ ಕಲ್ಲುಗಳಿಗೆ ನೀರು ಅಬ್ಬರಿಸುತ್ತಿದ್ದು ಸ್ನಾನಗೈಯುವರಲ್ಲಿ ಆತಂಕ ಸೃಷ್ಠಿಸಿತು.
ಕೋಟ ಪಡುಕರೆ ಕಡಲ ಕಿನಾರೆಯಲ್ಲಿ ಬೆರಳೆಣಿಕೆಯಷ್ಟು ಜನ ಸಮುದ್ರ ಸ್ನಾನಗೈದರು.
Leave a Reply