Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕೋಟ-ಹದಿಹರೆಯದ ಸಮಸ್ಯೆಗಳು ಮತ್ತು ನಿರ್ವಹಣಾ ಉಪಾಯಗಳ ಕಾರ್ಯಾಗಾರ

ಕೋಟ: ವಿವೇಕ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರಿಗೆ ಹದಿಹರೆಯದ ಹೆಣ್ಣು ಮಕ್ಕಳ ಸಮಸ್ಯೆಗಳ ಹಾಗೂ ಅದರ ನಿರ್ವಹಣಾ ಉಪಾಯಗಳ ಕುರಿತಾಗಿ ಮಾಹಿತಿ ಕಾರ್ಯಕ್ರಮವನ್ನು ಇತ್ತೀಚಿಗೆ ವಿದ್ಯಾಸಂಸ್ಥೆಯಲ್ಲಿ ಏರ್ಪಡಿಸಲಾಗಿತ್ತು.

ಸಂಪನ್ಮೂಲ ವ್ಯಕ್ತಿಯಾಗಿ, ಮನೀಷ್ ಆಸ್ಪತ್ರೆ, ಕುಂದಾಪುರ ಇಲ್ಲಿನ ಪ್ರಸಿದ್ಧ ಹೆರಿಗೆ ಮತ್ತು ರೋಗತಜ್ಞೆ ಡಾ| ಪ್ರಮೀಳಾ ನಾಯಕ್ ವಿದ್ಯಾರ್ಥಿನಿಯರನ್ನುದ್ದೇಶಿಸಿ ಮಾತನಾಡಿ, ಹೆಣ್ಣು ಮಕ್ಕಳಿಗೆ ಪ್ರೌಢಾವಸ್ಥೆಯಲ್ಲಿ ಎದುರಾಗುವ ಸಮಸ್ಯೆಗಳಾದ ಭಯ, ಅತಿಯಾದ ಆತಂಕ, ಖಿನ್ನತೆ, ಋತು ಚಕ್ರದ ಸಮಯದಲ್ಲಿ ಆಗುವ ದೈಹಿಕ ಹಾಗೂ ಮಾನಸಿಕ ಬದಲಾವಣೆಗಳ ಬಗ್ಗೆ ವಿವರಿಸಿ, ಸರಿಯಾದ ಅರಿವು ಅಗತ್ಯ ಎಂದರು.

ಸಮಾಜದಲ್ಲಿ ಎಷ್ಟೋ ಹೆಣ್ಣು ಮಕ್ಕಳಿಗೆ ಸರಿಯಾದ ತಿಳುವಳಿಕೆ ಇಲ್ಲದೇ ದುಡುಕುವ ಸಾಧ್ಯತೆ ಇದೆ. ಆದ್ದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಂಡು ಶಿಕ್ಷಣ ಮತ್ತು ಉತ್ತಮ ಆರೋಗ್ಯದಿಂದ ಹೆಣ್ಣು ಮಕ್ಕಳು ಕೂಡಾ ಮಹತ್ ಸಾಧನೆಯನ್ನು ಮಾಡಲು ಸಾಧ್ಯ ಎಂದು ತಿಳಿಸಿದರು. ಕಾಲೇಜಿನ ಪ್ರಾಂಶುಪಾಲ ಕೆ. ಜಗದೀಶ ನಾವಡರು ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು.
ಶಿಕ್ಷಕಿ ಶೋಭಾ ಅವಭೃತ ಕಾರ್ಯಕ್ರಮ ನಿರ್ವಹಿಸಿ, ಯಶವಂತಿ ವಂದಿಸಿದರು.

ವಿವೇಕ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರಿಗೆ ಹದಿಹರೆಯದ ಹೆಣ್ಣು ಮಕ್ಕಳ ಸಮಸ್ಯೆಗಳ ಹಾಗೂ ಅದರ ನಿರ್ವಹಣಾ ಉಪಾಯಗಳ ಕುರಿತಾಗಿ ಮಾಹಿತಿ ಕಾರ್ಯಕ್ರಮದಲ್ಲಿ ಪ್ರಸಿದ್ಧ ಹೆರಿಗೆ ಮತ್ತು ರೋಗತಜ್ಞೆ ಡಾ| ಪ್ರಮೀಳಾ ನಾಯಕ್ ಮಾತನಾಡಿದರು.

Leave a Reply

Your email address will not be published. Required fields are marked *