
ಕೋಟ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೋಟದಲ್ಲಿ ಪೋಷಕರೊಂದಿಗೆ ಸಂವಾದ ಕಾರ್ಯಕ್ರಮ ಇತ್ತೀಚಿಗೆ ಶಾಲಾ ಸಭಾಂಗಣದಲ್ಲಿ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಉಡುಪಿ ಎ.ವಿ ಬಾಳಿಗ ಸ್ಮಾರಕ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಮನೋವೈದ್ಯ ಪಿ.ವಿ ಭಂಡಾರಿ ಅವರು ಮಗುವಿನ ದೈಹಿಕ ಮಾನಸಿಕ ಭಾವನಾತ್ಮಕ ಬೆಳವಣಿಗೆಗೆ ಪೂರಕವಾಗಿ ಪೋಷಕರು ತೆಗೆದುಕೊಳ್ಳಬೇಕಾದ ಮುಂಜಾಗ್ರತೆಯ ಕುರಿತು ಉಪಯುಕ್ತ ಮಾಹಿತಿಯನ್ನು ನೀಡಿದರು.
ಪೋಷಕರು ಕೇಳಿದ ಹತ್ತು ಹಲವು ಪ್ರಶ್ನೆಗಳಿಗೆ ತಾಳ್ಮೆಯಿಂದ ಉತ್ತರಿಸಿಕರಾದ ಪ್ರೋ. ಸಿ ಉಪೇಂದ್ರ ಸೋಮಯಾಜಿಯವರು ಶಾಲೆಯ ಪರವಾಗಿ ಡಾ ಪಿ ವಿ ಭಂಡಾರಿ ಅವರನ್ನು ಗೌರವಿಸಿದರು. ಶಾಲೆಯ ಪ್ರತಿಭಾವಂತ ಹಳೆ ವಿದ್ಯಾರ್ಥಿ ನಾಗೇಶ್ ಆಚಾರ್ಯ ತಾನು ಅರಳಿ ಎಲೆ ರೂಪಿಸಿದ ಡಾ. ಭಂಡಾರಿ ಅವರ ಭಾವಚಿತ್ರವನ್ನು ಸ್ಮರಣಕ್ಕೆ ಆಗಿ ನೀಡಿದರು. ಶಾಲಾ ಎಸ್‍ಡಿಎಂಸಿ ಅಧ್ಯಕ್ಷೆ ಮಹಾಲಕ್ಷ್ಮಿಎಂ.ಪಿ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕಿ ಪುಷ್ಪಾವತಿ.ಎಚ್ ವಂದಿಸಿದರು. ಶಿಕ್ಷಕಿ ರಂಜಿತ ಸಹಕರಿಸಿದರು. ಮಕ್ಕಳ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೋಟದಲ್ಲಿ ಪೋಷಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಉಡುಪಿ ಎ.ವಿ ಬಾಳಿಗ ಸ್ಮಾರಕ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಮನೋವೈದ್ಯ ಪಿ.ವಿ ಭಂಡಾರಿ ಭಾಗವಹಿಸಿದರು.
Leave a Reply