
ಕೋಟ: ವಿಧಾನ ಸಭಾ ಸ್ಪೀಕರ್ ಆಗಿ ರಾಜಧರ್ಮವನ್ನೆ ಪಾಲನೆ ಮಾಡಬೇಕೆ ವಿನಹ ಕಾಂಗ್ರೆಸ್ ಏಜಂಟ್ ಅಂತೆ ವರ್ತಿಸಬಾರದು, ಯು.ಟಿ ಖಾದರ್ ರಾಜ್ಯ ಸರಕಾರದ ಋಣ ತೀರಿಸಲು ಸ್ಪೀಕರ್ ಸ್ಥಾನ ಅಲಂಕರಿಸಿದ್ದಾರೆ.
ನಮ್ಮ ಸರಕಾರದ ಅವಧಿಯಲ್ಲಿ ಕಾಂಗ್ರೆಸ್ ವಿಪಕ್ಷ ಸ್ಥಾನದಲ್ಲಿ ಕುಳಿತು ವಿಧಾನ ಸಭೆಗೆ ಹಲವು ಬಾರಿ ಚುತಿ ತಂದ ಉದಾಹರಣೆ ಸಾಕಷ್ಟಿವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸ್ಪೀಕರ್ ನಡೆ ಹೀನ ರಾಜಕೀಯವನ್ನು ತೋರ್ಪಡಿಸಿದೆ, ಶಾಸಕರನ್ನು ಅಮಾನತುಗೊಳಿಸಿದ ಆದೇಶವನ್ಮು ಹಿಂಪಡೆಯಬೇಕು. ಈ ಮೂಲಕ ವಿಧಾನಸೌಧದ ಘನತೆಯನ್ನು ಎತ್ತಿಹಿಡಿಯುವ ಕಾರ್ಯ ಮಾಡಲಿ ಎಂದು ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ಮೊರ್ಚಾ ಕಾರ್ಯದರ್ಶಿ ಐರೋಡಿ ವಿಠ್ಠಲ್ ಪೂಜಾರಿ ತಮ್ಮ ಹೇಳಿಕೆಯಲ್ಲಿ ವ್ಯಕ್ತಪಡಿಸಿದ್ದಾರೆ.
Leave a Reply