
ಕೋಟ: ಕೇಂದ್ರ ಸರಕಾರದ ಸಂಸ್ಕøತಿ ಸಚಿವಾಲಯದ ಸಾಂಸ್ಕøತಿಕ ಸಂಪನ್ಮೂಲ ಮತ್ತು ತರಬೇತಿ ಕೇಂದ್ರ ನಡೆಸಿದ 2020-21ರ ಸಾಲಿನ ಭಾರತದ ಯುವ ಪ್ರತಿಭಾ ಶೋಧದಲ್ಲಿ ಜಾನಪದ ರಂಗಭೂಮಿ (ಯಕ್ಷಗಾನ) ಯುವ ಪ್ರತಿಭೆ, ವಿಧ್ಯಾರ್ಥಿ ವೇತನ ಪ್ರಶಸ್ತಿಗೆ ಉಡುಪಿ ಜಿಲ್ಲೆಯಿಂದ ಆಯ್ಕೆಯಾದ ಸುದೀಪ್ ಉರಾಳ ಆಯ್ಕೆಯಾಗಿದ್ದಾರೆ.
ಇವರು ಯಕ್ಷದೇಗುಲದ ಹಂದಟ್ಟು ಸುದರ್ಶನ ಉರಾಳ ಹಾಗೂ ರಾಧಿಕಾ ದಂಪತಿಗಳ ಸುಪುತ್ರರು. ಕೋಟ ಯಕ್ಷ ತರಂಗ ಮತ್ತು ಉಡುಪಿ ಯಕ್ಷಗಾನ ಕೇಂದ್ರದ ಪ್ರಾಕ್ತನ ವಿಧ್ಯಾರ್ಥಿ, ವೇಷಧಾರಿ, ಯಕ್ಷ ಸಂಘಟಕ, ಯಕ್ಷ ದರ್ಶನ ಸಂಸ್ಥೆಯ ರೂವಾರಿ, ಯಕ್ಷದೇಗುಲ ಬೆಂಗಳೂರಿನ ಸಕ್ರಿಯ ಪ್ರಸಾಧನ ಕಲಾವಿದ, ಮದ್ದಳೆವಾದಕ, ಪ್ರದರ್ಶನ ಸಂಯೋಜಕ, ಸಂಘಟಕ, ಬರಹಗಾರ, ಯಕ್ಷ ಜಂಗಮ ಪ್ರಶಸ್ತಿ ಹಾಗೂ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರಾಗಿ ಗುರುತಿಸಿಕೊಂಡ ತಂದೆ ಸುದರ್ಶನ ಉರಾಳ, ಪುತ್ರ ಸುದೀಪ್ ಉರಾಳರು ಯಕ್ಷಗಾನದ ಚಂಡೆ ವಾದನದ ವಿಭಾಗದಲ್ಲಿ ಆಸಕ್ತಿ ತಳೆದು ಏಕಲವ್ಯನಂತೆ ಮನೆಯಲ್ಲಿಯೇ ಅಭ್ಯಾಸ ಪ್ರಾರಂಭಿಸಿದವರು. ಮಾಧವ ಮಣೂರು, ಕೋಟ ಶಿವಾನಂದರವರಿಂದ ಕೆಲವು ಪೆಟ್ಟು, ಉರುಳಿಕೆಗಳನ್ನು ತನ್ನದಾಗಿಸಿಕೊಂಡ ಸುದೀಪ್ ಹವ್ಯಾಸಿ ಕಲಾವಿದನಾಗಿ ಗುರುತಿಸಿಕೊಳ್ಳುತ್ತಾ ಇತ್ತೀಚೆಗೆ ಯಶಸ್ವೀ ಕಲಾವೃಂದದ ಹಲವು ವೇದಿಕೆಯಲ್ಲಿ ಚಂಡೆ ನುಡಿಸುತ್ತಾ ಜನಜನಿತರಾದರು.
ಡೇರೆ ಮೇಳವಾದ ಸಾಲಿಗ್ರಾಮ ಮೇಳದಲ್ಲಿಯೂ ಅತಿಥಿಯಾಗಿ ಚಂಡೆವಾದಕರಾಗಿ ಕಾಣಿಸಿಕೊಂಡದ್ದಲ್ಲದೇ ಅಮೃತೇಶ್ವರಿ ಮೇಳದ ಸ್ಥಳೀಯ ಪ್ರದರ್ಶನಗಳಲ್ಲಿ ಖಾಯಂ ಸದಸ್ಯ. ವೃತ್ತಿ ಕಲಾವಿದರ ಅನುಪಸ್ಥಿತಿಯಲ್ಲಿ ಎಷ್ಟೋ ಮೇಳಗಳಲ್ಲಿ ಪ್ರಧಾನ ಚಂಡೆ ವಾದಕರಾಗಿ ಗುರುತಿಸಿಕೊಂಡಿದ್ದಲ್ಲದೇ ಹೆಜ್ಜೆ ಕಲಿತ ಸಾಲಿಗ್ರಾಮ ಮಕ್ಕಳ ಮೇಳದಲ್ಲಿ ಇತ್ತೀಚಿನ ಖಾಯಂ ಚಂಡೆ ವಾದಕರು. ಎಂ.ಬಿ.ಎ. ಮಾಡುತ್ತಿರುವ ಸುದೀಪ್ ಹವ್ಯಾಸದೊಂದಿಗೆ ಓದಿನ ಕಡೆಗೂ ಲಕ್ಷ್ಯ ಕೊಟ್ಟು ಕಲಾಕುಂಟುಬಗಳ ನೇಕರ ಚಿತ್ತ ಸೆಳೆದಿದ್ದಾರೆ.
ಯಕ್ಷಗಾನದ ಹವ್ಯಾಸದೊಂದಿಗೆ ಹವ್ಯಾಸೀ ಛಾಯಾಚಿತ್ರಗಾರನಾಗಿಯೂ ಗುರುತಿಸಿಕೊಂಡು ಹಲವರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಸರಳ ಸಜ್ಜನ ವಿನಯ ಸಂಪನ್ನ ಈತ ಯಾವ ತಂಟೆ ತಕರಾರಿಲ್ಲದೇ ತಾನಾಯ್ತು, ತನ್ನ ಹವ್ಯಾಸ ಹಾಗೂ ಓದಾಯ್ತು ಎಂಬ ಸಾತ್ವಿಕ ವ್ಯಕ್ತಿ ಸುದೀಪ್. ಇವರು ಯಕ್ಷಗಾನ ಚಂಡೆವಾದನದಲ್ಲಿ ಕರಾವಳಿ ಭಾಗದಲ್ಲಿ ಗುರುತಿಸಿಕೊಂಡಿದ್ದು, ಹಿಂದೆ ಸಾಲಿಗ್ರಾಮ ಮಕ್ಕಳ ಮೇಳದ ಕಲಾವಿದನಾಗಿ ಹಲವಾರು ಪ್ರದರ್ಶನಗಳಲ್ಲಿ ವೇಷ ಧರಿಸಿದ್ದರು.
Leave a Reply