Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಅಧಿವೇಶನದಲ್ಲಿ ಅಸಭ್ಯವಾಗಿ ವರ್ತಿಸಿದ ಜನಪ್ರತಿನಿಧಿಗಳ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಾಯ ಗಣೇಶ್ ಕೆ ನೆಲ್ಲಿಬೆಟ್ಟು

ದಿನಾಂಕ 19 ರಂದು ಬುಧವಾರ ವಿಧಾನಸಭಾ ಅಧಿವೇಶನದಲ್ಲಿ ಕೆಲವರು ಜನಪ್ರತಿನಿಧಿಗಳು ಉಪ ಸಭಾಪತಿಗಳಾದ “ರುದ್ರಪ್ಪ ಲಮಾಣಿ ” ಅವರ ಮೇಲೆ ಪೇಪರ್ ಗಳನ್ನು ಎಸೆದು ಅಸಭ್ಯವಾಗಿ ವರ್ತಿಸಿರುವುದು ಇದೊಂದು ಸಂವಿಧಾನಕ್ಕೆ ಅವಮಾನ ಮಾಡಿದ ಘೋರ ದುರಂತ,

ಕರ್ನಾಟಕ ರಾಜ್ಯದ ಗೌರವಾನ್ವಿತ ರಾಜ್ಯಪಾಲರು ಮತ್ತು ಸಭಾಪತಿಗಳಾದ” ಯು. ಟಿ ಖಾದರ್” ಅವರು ಅಸಭ್ಯತೆ ನಡತೆ ತೋರಿರುವ ಜನಪ್ರತಿನಿಧಿಗಳ ಮೇಲೆ ಉಗ್ರವಾದ ಕ್ರಮ ಕೈಗೊಂಡು ಕರ್ನಾಟಕ ರಾಜ್ಯದ ವಿಧಾನಸಭಾ ಅಧಿವೇಶನಕ್ಕೆ ಗೌರವ ನೀಡಬೇಕು, ಇಂತಹ ಪ್ರಕರಣಗಳು ಇನ್ನೊಮ್ಮೆ ನಡೆದಂತೆ ಕ್ರಮ ಕಠಿಣ ಕ್ರಮ ಕೈಗೊಳ್ಳಬೇಕು.

ಬಿಜೆಪಿ ಶಾಸಕರು ಪರಿಶಿಷ್ಟ ಜಾತಿಯ ಸಮುದಾಯಕ್ಕೆ ಮಾಡಿದ ದೊಡ್ಡ ಅವಮಾನವಿದೆ, ಸರಕಾರದ ಗಣ್ಯ ಉಪಸಭಾಪತಿಗಳ ಮೇಲೆ ಇವರು ಅಕ್ರಮನ ಮಾಡುತ್ತಾರೆಂದರೆ ಹಾಗಾದರೆ ಸಾಮಾನ್ಯ ಶಾಸಕರು ಮತ್ತು ಜನಸಾಮಾನ್ಯರನ್ನು ಇವರು ಯಾವ ರೀತಿ ನಡೆಸಿಕೊಳ್ಳಬಹುದು ಎಂದು ಉಡುಪಿ ಜಿಲ್ಲಾ ಯಂಗ್ ಬಿಗ್ರೇಡ್ ಕಾಂಗ್ರೆಸ್ ಸೇವಾದಳ ಜಿಲ್ಲಾಧ್ಯಕ್ಷರಾದ ಗಣೇಶ್ ಕೆ ನೆಲ್ಲಿಬೆಟ್ಟು ಅವರು ಖಂಡಿಸಿದ್ದಾರೆ.

Leave a Reply

Your email address will not be published. Required fields are marked *