
ಬೆಂಗಳೂರಿನ ಮಲ್ಲೇಶ್ವರದ ಶ್ರೀಕಾಶೀಮಠದಲ್ಲಿ ಚಾತುರ್ಮಾಸ ವೃತ ಕೈಗೊಂಡಿರುವ ಶ್ರೀಕಾಶೀ ಮಠಾಧೀಶರಾದ ಶ್ರೀಶ್ರೀಶ್ರೀ ಸಂಯಮೀಂದ್ರ ತೀರ್ಥ ಶ್ರೀ ಪಾದಂಗಳವರು ಅಧಿಕಮಾಸ ಭಜನಾ ಮಹೋತ್ಸವಕ್ಕೆ ದೀಪ ಪ್ರಜ್ವಲನೆ ಮಾಡುವುದರ ಮೂಲಕ ಚಾಲನೆ ನೀಡಿದರು.

ಈ ಭಜನಾ ಮಹೋತ್ಸವವು 18-07-2023 ರಿಂದ 17-08-2023ರ ವರೆಗೆ ಪ್ರತಿದಿನ ಬೆಳಿಗ್ಗೆ 8:00 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ನಿರಂತರವಾಗಿ ನಡೆಯಲಿದೆ. ಶ್ರೀಗಳಿಂದ ಚಾಲನೆ ದೊರೆತ ನಂತರ ಪುತ್ತೂರು ನರಸಿಂಹ ನಾಯಕ್ ರವರಿಂದ ಭಜನಾ ಮಹೋತ್ಸವ ಪ್ರಾರಂಭವಾಯಿತು. ಈ ಸಂದರ್ಭದಲ್ಲಿ ಸಮಸ್ತ ಭಕ್ತಾದಿಗಳು ಉಪಸ್ಥಿತರಿದ್ದರು.

Leave a Reply