Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ನಳಿನ್ ಕುಮಾರ್ ಕಟೀಲ್ ಕೋಟ ಭೇಟಿ
ರಾಜ್ಯದ ಕಾಂಗ್ರೆಸ್ ಸರಕಾರ ಭಯೋತ್ಪಾದಕರ ವಿರುದ್ಧ ಮೃದು ದೋರಣೆ , ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆ

ಕೋಟ: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪುರಾಣ ಪ್ರಸಿದ್ಧ ಕೋಟ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇವಸ್ಥಾನಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಆನಂದ್ ಸಿ ಕುಂದರ್ ವಿಶೇಷ ಪ್ರಾರ್ಥನೆ ಸಲ್ಲಿಸಿ ಪ್ರಸಾದ ವಿತರಿಸಿ
ಶಾಲು ಹೋದಿಸಿ ಗೌರವಿಸಿದರು.

ಈ ವೇಳೆ ಮಾಧ್ಯವರವರೊಂದಿಗೆ ಮಾತನಾಡಿ ರಾಜ್ಯದಲ್ಲಿ ಭಯೋತ್ಪದಾನೆ ತಾಂಡವ ಆಡುತ್ತಿದೆ ಅವರ ಮೇಲೆ ಸಹಾನುಭೂತಿ ವ್ಯಕ್ತಪಡಿಸಿ ದೇಶಭಕ್ತರ ಮೇಲೆ ಅದು ಕರಾವಳಿ ಜಿಲ್ಲೆಗಳ ಹಿಂದೂ ಸಮುದಾಯದವರ ಮೇಲೆ ಕಾಂಗ್ರೆಸ್ ಸರಕಾರ ದ್ವೇಷದ ರಾಜಕಾರಣ ಮಾಡುತ್ತಿದೆ.
ಐವರು ಭಯೋತ್ಪಾದಕ ಸೆರೆ ಹಿಡಿಯಲಾಗಿದೆ ಅವರನ್ನು ಭಯೋತ್ಪಾದಕರು ಅನ್ನುವುದಕ್ಕೆ ಭಯಪಡುವ ರಾಜ್ಯದ ಗೃಹಸಚಿವರು ಎಂಟಿ ಕಮಿನುಲ್ ಸೃಷ್ಠಿಸಿ ಹಿಂದೂ ಕಾರ್ಯಕರ್ತರನ್ನು ಜಿಲ್ಲೆಯಿಂದ ಹೊರದಬ್ಬುವ ಕಾರ್ಯ ಮಾಡುತ್ತಿದೆ,ಭಯೋತ್ಪಾದನೆಯ ವಿರುದ್ಧ ನಿಯಂತ್ರಣ ಮಾಡುವುದರಲ್ಲಿ ವಿಫಲವಾಗಿದೆ, ಹಿಂದುತ್ವದ ಮೇಲೆ ಸವಾರಿ ಮಾಡಿದರೆ ಜನತೆ ತಕ್ಕ ಉತ್ತರ ನೀಡಲಿದೆ.

ವಿಧಾನಸಭೆ ಅಥವಾ ಪರಿಷತ್ ನಲ್ಲಿ ವಿಪಕ್ಷ ನಾಯಕನ ಆಯ್ಕೆ ಮಾಡುವುದಕ್ಕೆ ಕೇಂದ್ರದ ನಾಯಕರು ತಿರ್ಮಾನಕೈಗೊಳ್ಳಲಿದ್ದಾರೆ. ನಮ್ಮಲ್ಲಿ 66ಜನ ಶಾಸಕರು ಸಮರ್ಥರು ಆದ್ದರಿಂದ ಸಾಮೂಹಿಕ ನಾಯಕತ್ವದಡಿ ಹೊರಟ ನಡೆಸುತ್ತೇವೆ, ರಾಜ್ಯ ಸರಕಾರದ ಜನವಿರೋಧಿ ನೀತಿಯ ವಿರುದ್ಧ ನಮ್ಮ ನಾಯಕರುಗಳು ಯಶಸ್ವಿಯಾಗಿ ಪ್ರತಿಭಟಿಸುತ್ತಿದ್ದಾರೆ.

ಜೆಡಿಎಸ್ ಮೈತ್ರಿ ಕುರಿತಂತೆ ಉತ್ತರಿಸಿದ ಕಟೀಲ್ ನಮ್ಮ ಪ್ರತಿ ನ್ಯಾಯಯುತ ಹೋರಾಟಕ್ಕೆ ಜೆಡಿಎಸ್ ಸಂಪೂರ್ಣ ಸಹಕಾರ ನೀಡುತ್ತಿದೆ. ರಾಷ್ಟ್ರೀಯ ನಾಯಕರುಗಳ ಚಿಂತನೆಯೊಂದಿಗೆ ಮೈತ್ರಿ ತಿರ್ಮಾನಗೊಳ್ಳುತ್ತದೆ. ರಾಜ್ಯಾಧ್ಯಕ್ಷರ ಬದಲಾವಣೆ ಕುರಿತಂತೆ ನಮ್ಮ ಅವಧಿ ಈಗಾಗಲೆ ಪೂರ್ಣಗೊಂಡಿದೆ ರಾಷ್ಟ್ರೀಯ ನಾಯಕರು ಸಮರ್ಥ ನಾಯಕರನ್ನು ಆಯ್ಕೆಗೊಳಿಸುತ್ತಾರೆ.

ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ, ಬಿಜೆಪಿ ಮಂಗಳೂರು ಪ್ರಭಾರಿ ಉದಯ್ ಕುಮಾರ್ ಶೆಟ್ಟಿ, ರಾಜ್ಯ ಹಿಂದುಳಿದ ಮೋರ್ಚಾ ಕಾರ್ಯದರ್ಶಿ ವಿಠ್ಠಲ ಪೂಜಾರಿ, ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಪ್ರಧಾನಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು, ಕುಂದಾಪುರ ಮಂಡಲ ಅಧ್ಯಕ್ಷ ಶಂಕರ ಅಂಕದಕಟ್ಟೆ, ಕಾರ್ಯದರ್ಶಿ ಸತೀಶ್ ಪೂಜಾರಿ, ಸುರೇಶ್ ಶೆಟ್ಟಿ, ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಸತೀಶ್ ಕುಂದರ್, ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸುರೇಶ್ ಕುಂದರ್, ಕೋಟ ಗ್ರಾಮಪಂಚಾಯತ್ ಅಧ್ಯಕ್ಷ ಅಜಿತ್ ದೇವಾಡಿಗ, ಸದಸ್ಯರಾದ ಚಂದ್ರ ಪೂಜಾರಿ, ಸಂತೋಷ್ ಪ್ರಭು, ಪಾಂಡು ಪೂಜಾರಿ, ಜ್ಯೋತಿ ಬಿ ಶೆಟ್ಟಿ,ಶಿವರಾಮ ಶೆಟ್ಟಿ, ಕೋಟತಟ್ಟು ಗ್ರಾ.ಪಂ ಅಧ್ಯಕ್ಷೆ ಅಶ್ವಿನಿ ದಿನೇಶ್, ಸದಸ್ಯೆ ಪೂಜಾ ಪೂಜಾರಿ ಸಾಲಿಗ್ರಾಮ ಪ.ಪಂ ಸದಸ್ಯರಾದ ರಾಜು ಪೂಜಾರಿ, ಅನುಸೂಯ ಹೇರ್ಳೆ, ಸಾಲಿಗ್ರಾಮ ಬಿಜೆಪಿ ಶಕ್ತಿಕೇಂದ್ರದ ಅಧ್ಯಕ್ಷ ಜಯೇಂದ್ರ ಪೂಜಾರಿ, ಬೈಂದೂರು ಮಾಜಿ ತಾ.ಪಂ ಅಧ್ಯಕ್ಚ ಮಹೇಂದ್ರ ಪೂಜಾರಿ, ಕೊಲ್ಲೂರು ದೇವಸ್ಥಾನದ ಟ್ರಸ್ಟಿ ಕೆ.ಪಿ ಶೇಖರ್, ಮತ್ತಿತರರು ಇದ್ದರು.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕೋಟ ಅಮೃತೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದರು.

Leave a Reply

Your email address will not be published. Required fields are marked *