
ಕೋಟ: ಸಾಲಿಗ್ರಾಮ ಶ್ರೀಗುರು ನರಸಿಂಹ ದೇವಸ್ಥಾನದಲ್ಲಿ ಅಧಿಕ ಶ್ರಾವಣ ಮಾಸದ ಶನಿವಾರಗಳಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದ ಪ್ರಥಮ ಶನಿವಾರ ಜು.22.ರಂದು ಸ್ನೇಹ ಕೂಟ ಮಣೂರು ಇದರ ಸದಸ್ಯೆಯರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮವನ್ನು ಸಾಲಿಗ್ರಾಮ ಶ್ರೀಗುರು ನರಸಿಂಹ ದೇವಸ್ಥಾನ ದೇವಸ್ಥಾನದ ಅಧ್ಯಕ್ಷ ಡಾ. ಕೆ.ಎಸ್.ಕಾರಂತ ದೀಪ ಬೆಳಗಿ ಉದ್ಘಾಟಿಸಿ ಭಕ್ತಾದಿಗಳಿಗೆ ಶ್ರಾವಣ ಮಾಸದ ಶುಭ ಹಾರೈಸಿದರು. ದೇವಳದ ಆಡಳಿತ ಮಂಡಳಿ ಕೋಶಾಧಿಕಾರಿ ಪರುಶುರಾಮ ಭಟ್ಟ ಶಾಸ್ತ್ರೋಕ್ತವಾಗಿ ಮಂತ್ರಪಠಣದೊಂದಿಗೆ ಸ್ನೇಹಕೂಟದ ಸಂಘಟಕಿ ಸಂಚಾಲಕಿ ಭಾರತಿ ಮಯ್ಯ ಇವರಿಗೆ ಫಲ ಪುಷ್ಪ ಕಾಣಿಕೆ ನೀಡಿ ಸನ್ಮಾನಿಸಿದರು.ನಂತರ ಸ್ನೇಹಕೂಟದ ಸದಸ್ಯೆಯರಿಂದ ಭರತನಾಟ್ಯ,ನ್ರತ್ಯನಾಟಕ,ನಗೆ ಪ್ರಹಸನ,ಜಾನಪದ ಹಾಡು ಹಾಗೂ ನೃತ್ಯ ಕಾರ್ಯಕ್ರಮ ಜರಗಿತು. ಸಮಾಜಸೇವಕ ಪಾರಂಪಳ್ಳಿ ಶ್ರೀನಿವಾಸ ಉಪಾಧ್ಯ, ದೇವಳದ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.
ಸಾಲಿಗ್ರಾಮ ಶ್ರೀಗುರು ನರಸಿಂಹ ದೇವಸ್ಥಾನದಲ್ಲಿಶ್ರಾವಣ ಮಾಸದ ಸಾಂಸ್ಕೃತಿಕ ವೈಭವದಲ್ಲಿ ಸ್ನೇಹಕೂಟದ ಸಂಘಟಕಿ ಸಂಚಾಲಕಿ ಭಾರತಿ ಮಯ್ಯ ಇವರಿಗೆ ಫಲ ಪುಷ್ಪ ಕಾಣಿಕೆ ನೀಡಿ ಸನ್ಮಾನಿಸಲಾಯಿತು.
Leave a Reply