Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ರಸರಂಗ ಕೋಟ ಇವರ ಆಶ್ರಯದಲ್ಲಿಯಕ್ಷಗಾನ ಪ್ರಸಂಗ ಅಧ್ಯಯನ ಕಮ್ಮಟ
ಯಕ್ಷಗಾನದ ಶ್ರೇಷ್ಠತೆ ಅರಿತು ಅದರ ಮೌಲ್ಯಗಳನ್ನು ಉಳಿಸುವಂತ್ತಾಗಲಿ- ಆನಂದ್ ಸಿ ಕುಂದರ್

ಕೋಟ: ಯಕ್ಷಗಾನದ ಮೌಲ್ಯ ಹಾಗೂ ಅದರ ಪರಂಪರೆಯನ್ನು ಉಳಿಸಿ ಬೆಳೆಸುವ ಕಾರ್ಯ ಸಂಘಸಂಸ್ಥೆಗಳು ಮಾಡಬೇಕು ಎಂದು ಕೋಟ ಅಮೃತೇಶ್ವರಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಆನಂದ್ ಸಿ ಕುಂದರ್ ಹೇಳಿದರು.

ಶನಿವಾರ ಕೋಟದ ಮಹಿಳಾ ಮಂಡಳದ ಸಭಾಂಗಣದಲ್ಲಿ ರಸರಂಗ ಕೋಟ ಇವರ ಆಶ್ರಯದಲ್ಲಿ ಯಕ್ಷಗಾನ ಪ್ರಸಂಗ ಅಧ್ಯಯನ ಕಮ್ಮಟದ ಸಮಾರೋಪ ಕಾರ್ಯಕ್ರಮದಲ್ಲಿ ಚಂಡೆ ಬಾರಿಸಿ ಮಾತನಾಡಿ ಯಕ್ಷಗಾನದ ಹಿನ್ನಲ್ಲೆ ಇರುವ ಸುಧಾ ಮಣೂರರ ಕುಟುಂಬ ಅದನ್ನು ನಿರಂತರ ಉಳಿಸಬೇಕೆಂಬ ತುಡಿತದೊಂದಿಗೆ ಮುಂದಿನ ತಲೆಮಾರಿಗೆ ರಂಗವೇದಿಕೆಯನ್ನು ಬಳುವಳಿಯಾಗಿ ನೀಡುತ್ತಿದೆ ಇದು ಸಾಗತಾರ್ಹ ಬೆಳವಣಿಗೆಯಾಗಿದೆ.ಇಂತಹ ಕಾರ್ಯಗಳು ಪ್ರತಿಯೊಂದು ಸಂಸ್ಥೆಗಳಿಂದ ಆಗಲಿ ಎಂದು ಆಶಿಸಿದರು.
ಸಭೆಯ ಅಧ್ಯಕ್ಷತೆಯನ್ನು ರಸರಂಗ ಕೋಟ ಅಧ್ಯಕ್ಷೆ ಸುಧಾ ಮಣೂರು ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಗೀತಾನಂದ ಫೌಂಡೇಶನ್ ನಿರ್ದೇಶಕಿ ಗೀತಾ ಎ ಕುಂದರ್,ಸಾಂಸ್ಕೃತಿಕ ಚಿಂತಕ ಚಂದ್ರ ಆಚಾರ್, ಕೋಟ ಮಹಿಳಾ ಮಂಡಳದ ಅಧ್ಯಕ್ಷೆ ಸುಶೀಲಸೋಮಶೇಖರ್ ಇದ್ದರು. ಕಾರ್ಯಕ್ರಮವನ್ನು ವಸಂತಿ ಹಂದಟ್ಟು ನಿರೂಪಿಸಿ ವಂದಿಸಿದರು. ನಂತರ ರಸರಂಗ ಕೋಟದ ಸದಸ್ಯರಿಂದ ಶ್ರೀರಾಮ ಕಾರುಣ್ಯ ಯಕ್ಷಗಾನ ಪ್ರದರ್ಶನಗೊಂಡಿತು.

ಕೋಟದ ಮಹಿಳಾ ಮಂಡಳದ ಸಭಾಂಗಣದಲ್ಲಿ ರಸರಂಗ ಕೋಟ ಇವರ ಆಶ್ರಯದಲ್ಲಿ ಯಕ್ಷಗಾನ ಪ್ರಸಂಗ ಅಧ್ಯಯನ ಕಮ್ಮಟದ ಸಮಾರೋಪ ಕಾರ್ಯಕ್ರಮದಲ್ಲಿ ಅಮೃತೇಶ್ವರಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಆನಂದ್ ಸಿ ಕುಂದರ್ ಚಂಡೆ ಬಾರಿಸಿ ಚಾಲನೆ ನೀಡಿದರು. ಗೀತಾನಂದ ಫೌಂಡೇಶನ್ ನಿರ್ದೇಶಕಿ ಗೀತಾ ಎ ಕುಂದರ್, ಸಾಂಸ್ಕೃತಿಕ ಚಿಂತಕ ಚಂದ್ರ ಆಚಾರ್, ಕೋಟ ಮಹಿಳಾ ಮಂಡಳದ ಅಧ್ಯಕ್ಷೆ ಸುಶೀಲಸೋಮಶೇಖರ್ ಇದ್ದರು.

Leave a Reply

Your email address will not be published. Required fields are marked *