ಕೋಟ: ಕೋಟ ಗ್ರಾಮ ಪಂಚಾಯತ್ ,ಬಾಳೆಬೆಟ್ಟು ಫ್ರೆಂಡ್ಸ್ ಬಾಳೆಬೆಟ್ಟು, ಭಗತ್ ಸಿಂಗ್ ಯುವ ವೇದಿಕೆ ಕೋಟ, ಗೀತಾನಂದ ಫೌಂಡೇಶನ್ ಮಣೂರು ಪಡುಕರೆ, ಗಿಳಿಯಾರು ಯುವಕ ಮಂಡಲ ಗಿಳಿಯಾರು ,ರೈತ ಧ್ವನಿ ಸಂಘಟನೆ ಕೋಟ ಸಹಯೋಗದಲ್ಲಿ ಮಣೂರು ಬಾಳೆಬೆಟ್ಟು ಪರಿಸರ ಮತ್ತು ಮಣೂರು ರಾಷ್ಟ್ರೀಯ ಹೆದ್ದಾರಿಯಿಂದ – ಮಣೂರು ಪಡುಕರೆ ಸಂಪರ್ಕಿಸುವ ರಸ್ತೆಯ ಬದಿಯಲ್ಲಿ ಗಿಡ ನೆಡುವ ಕಾರ್ಯಕ್ರಮ ಹಸಿರೇ ಹೊನ್ನು ಎನ್ನುವ ಹೆಸರಿನಲ್ಲಿ ನಡೆಸಲಾಯಿತು.
ಕಾರ್ಯಕ್ರಮಕ್ಕೆ ಸಾಂಕೇತಿಕವಾಗಿ ಗಿಡ ನೆಡುವ ಮೂಲಕ ಉಪ ವಲಯ ಅರಣ್ಯಾಧಿಕಾರಿ ನಾಗೇಶ್ ಬಿಲ್ಲವ ಚಾಲನೆ ನೀಡಿ ಪರಿಸರ ನಾಶದಿಂದ ಮಾನವ ಸಂಪನ್ಮೂಲಕ್ಕೆ ಆಗುವ ತೊಡಕುಗಳು ಮತ್ತು ಪರಿಸರ ನಾಶದ ದುಷ್ಪರಿಣಾಮ ಕುರಿತಾಗಿ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಕೋಟ ಗ್ರಾಮ ಪಂಚಾಯತ್ ಅಧ್ಯಕ್ಷ ಅಜಿತ್ ದೇವಾಡಿಗ , ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಹರೀಶ್ ಕುಮಾರ್ ಶೆಟ್ಟಿ ಮತ್ತು ವಿವೇಕ್ ಅಮಿನ್ , ಜನತಾ ಫಿಶ್ ಮಿಲ್ ವ್ಯವಸ್ಥಾಪಕ ಶ್ರೀನಿವಾಸ ಕುಂದರ್, ಬಾಳೆಬೆಟ್ಟು ಫ್ರೆಂಡ್ಸ್ ಅಧ್ಯಕ್ಷ ರತ್ನಾಕರ ಪೂಜಾರಿ, ಭಗತ್ ಸಿಂಗ್ ಯುವವೇದಿಕೆ ಅಧ್ಯಕ್ಷ ಪ್ರಸಾದ್ ಬಿಲ್ಲವ , ಗಿಳಿಯಾರು ಯುವಕ ಮಂಡಲದ ಅಧ್ಯಕ್ಷ ಶೇಖರ್ .ಜಿ ಮತ್ತು ರೈತ ಧ್ವನಿ ಸಂಘಟನೆ ಕೋಟ ಅಧ್ಯಕ್ಷ ಜಯರಾಮ ಶೆಟ್ಟಿ,ವಾಹಿನಿ ಯುವಕ ಮಂಡಲದ ಹಿರಿಯ ಸದಸ್ಯರಾದ ಪ್ರಭಾಕರ ಕುಂದರ್ ಉಪಸ್ಥಿತರಿದ್ದರು. ಟೀಮ್ ಸ್ಪರ್ಶದ ಸದಸ್ಯರು , ಬಾಳೆಬೆಟ್ಟು ಮಣೂರು ಪರಿಸರದ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ನಂತರ ಸುಮಾರು ನೂರೈವತ್ತು ಸಸಿಗಳನ್ನು ರಸ್ತೆಯ ಎರಡು ಬದಿಯಲ್ಲಿ ನೆಡಲಾಯಿತು.
ಕೋಟ ಗ್ರಾಮ ಪಂಚಾಯತ್ ,ಬಾಳೆಬೆಟ್ಟು ಫ್ರೆಂಡ್ಸ್ ಬಾಳೆಬೆಟ್ಟು, ಭಗತ್ ಸಿಂಗ್ ಯುವ ವೇದಿಕೆ ಕೋಟ, ಗೀತಾನಂದ ಫೌಂಡೇಶನ್ ಮಣೂರು ಪಡುಕರೆ, ಗಿಳಿಯಾರು ಯುವಕ ಮಂಡಲ ಗಿಳಿಯಾರು , ರೈತ ಧ್ವನಿ ಸಂಘಟನೆ ಕೋಟ ಸಹಯೋಗದಲ್ಲಿ ಮಣೂರು ಪರಿಸರದಲ್ಲಿ ಸಾಂಕೇತಿಕವಾಗಿ ಗಿಡ ನೆಡುವ ಮೂಲಕ ಉಪ ವಲಯ ಅರಣ್ಯಾಧಿಕಾರಿ ನಾಗೇಶ್ ಬಿಲ್ಲವ ಚಾಲನೆ ನೀಡಿದರು.
















Leave a Reply