
ಸಾವಳಗಿ ತಾಲೂಕು ಹೋರಾಟ ಸಮಿತಿಯಿಂದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಅವರಿಗೆ ಮನವಿ
ಅಥಣಿ: ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಕೊಕಟನೂರ ಗ್ರಾಮದಲ್ಲಿ ನಡೆದ ವಿವಿಧ ಇಲಾಖೆಯ ಕಾಮಗಾರಿಗಳ ಉದ್ಘಾಟನೆ ಹಾಗೂ ಅಡಿಗಲ್ಲು ಸಮಾರಂಭಕ್ಕೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರಿಗೆ ಸಾವಳಗಿ ತಾಲ್ಲೂಕು ಸಮಿತಿ ನಿಯೋಗವೂ ಸಾವಳಗಿಯನ್ನು ನೂತನ ತಾಲ್ಲೂಕು ಘೋಷಣೆ ಮಾಡುವಂತೆ ಮನವಿ ಸಲ್ಲಿಸಿದರು.
ನಂತರ ಮಾತನಾಡಿದ ಸಾವಳಗಿ ತಾಲೂಕು ಹೋರಾಟ ಸಮಿತಿಯ ಮುಖಂಡರಾದ ರಾಜು ಮೇಲಿನಕೇರಿಯವರು ಸಾವಳಗಿಯ ಭೌಗಳಿಕ, ಶೈಕ್ಷಣಿಕತೆಯ ಹಾಗೂ ಆರ್ಥಿಕತೆಯ ಬಗ್ಗೆ ವಿವರಿಸುವದಲ್ಲದೇ ತಾಲೂಕ ರಚನೆಗಾಗಿ ಸಮಿತಿ ವತಿಯಿಂದ ಈ ಹಿಂದೆ ಅನೇಕ ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸುವದಲ್ಲದೇ, ಕಳೆದ ೪೦ ವರ್ಷಗಳಿಂದ ಸರ್ವಪಕ್ಷಗಳ ಮುಖಂಡರಿಗೆ ಕಾಲ ಕಾಲಕ್ಕೆ ಮನವಿ ಮಾಡುತ್ತಾ ಬಂದಿದ್ದು. ೧೯೯೭ರಲ್ಲಿ ೫ ದಿನಗಳ ಅಹೋರಾತ್ರಿ ಉಪವಾಸ, ಸುಮಾರು ೨೫ ದಿನಗಳ ಕಾಲ ಸರದಿ ಉಪವಾಸ ಸತ್ಯಾಗ್ರಹ, ೧೦೦ ದಿನ ಧರಣಿ ಸತ್ಯಾಗ್ರಹ, ೨ ದಿನ ಆಮರಣ ಉಪವಾಸ ಸತ್ಯಾಗ್ರಹ, ರಸ್ತಾ ರೋಖೋ ಚಳುವಳಿ, ೨೦೨೦ ರಿಂದ ೩ ಬಾರಿ ಗ್ರಾಮ ಪಂಚಾಯತ ಚುನಾವಣೆಯನ್ನು ಬಹಿಷ್ಕರಿಸುತ್ತಾ ಅನೇಕ ಹೋರಾಟಗಳನ್ನು ಮಾಡುತ್ತಾ ಬಂದಿರುತ್ತೆವೆ ಎಂದು ಸವಿವರವಾಗಿ ಹೋರಾಟದ ಬಗ್ಗೆ ತಿಳಿಸಿದರು.

ಸಾವಳಗಿ ಗ್ರಾಮವು ಹೋಬಳಿ ಕೇಂದ್ರವಾಗಿ ಸಾವಳಗಿಯೂ ೨೪ ಹಳ್ಳಿಗಳ ಕೇಂದ್ರ ಸ್ಥಾನವಾಗಿದೆ. ಜಮಖಂಡಿಯಿಂದ ೪೦ಕಿ.ಮೀ, ವಿಜಯಪುರದಿಂದ ೬೦ಕಿ.ಮೀ, ಅಥಣಿಯಿಂದ ೩೦ ಕಿ.ಮೀ ದೂರದಲ್ಲಿದ್ದು. ಸುಮಾರು ೧ ಲಕ್ಷ ೫೦ ಸಾವಿರ ಜನಸಂಖೆಯನ್ನು ಹೋಬಳಿ ಹೊಂದಿದ್ದು, ಈ ನಾಡ ಕಾರ್ಯಲಯ (ಉಪತಹಶಿಲ್ದಾರ), ಪೋಲಿಸ್ ಠಾಣೆ, ಸಮುದಾಯ ಆರೋಗ್ಯ ಕೇಂದ್ರ, , ಪದವಿ ಪೂರ್ವ, ಕೈಗಾರಿಕ ತರಬೇತಿ ಕೇಂದ್ರ ಹಾಗೂ ಪ್ರಥಮ ದರ್ಜೆ ಕಾಲೇಜುಗಳನ್ನು ಮತ್ತು ಅನೇಕ ಶಿಕ್ಷಣ ಸಂಸ್ಥೆಗಳು ಹೊಂದಿದ್ದು ಹಾಗೂ ಸುಸಜ್ಜಿತವಾದ ಪ್ರವಾಸಿ ಮಂದಿರ ಮತ್ತು ಇನ್ನು ಅನೇಕ ವಾಣಿಜ್ಯ ಕೇಂದ್ರಗಳು ಹಾಗೂ ೨೦ ಕಿ.ಮೀ ವ್ತಾಪ್ತಿಯಲ್ಲಿ ಒಟ್ಟು ೩ ಸಕ್ಕರೆ ಕಾರ್ಖಾನೆಗಳನ್ನು ಹೊಂದಿದ್ದೆ.
ವಾಣಿಜ್ಯ ಹಾಗೂ ಆರ್ಥಿಕವಾಗಿ ಬೆಳೆಯುತ್ತಿರುವ ಪಟ್ಟಣವಾಗಿದ್ದು ಸರ್ಕಾರಿ ಕಚೇರಿಗಳನ್ನು ನಡೆಸಲು ಸಾವಳಗಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ೪೫ ಕ್ಕೂ ಅಧಿಕ ಪುನರವಸತಿಯ ಸರ್ಕಾರಿ ಕಟ್ಟಡಗಳು ಲಭ್ಯವಿದ್ದಾವೆ ಹಾಗೂ ಮಾಜಿ ಶಾಸಕರಾದ ಆನಂದ ನ್ಯಾಮಗೌಡ ಅನೇಕ ಬಾರಿ ಸದನದಲ್ಲಿ ಈ ಬಗ್ಗೆ ಧ್ವನಿ ಎತ್ತಿದ್ದು ಗಮನಾರ್ಹ ವಿಷಯ ಹಾಗೂ ಕಳೆದ ಅಧಿವೇಶನದಲ್ಲಿ ಹಾಲಿ ಶಾಸಕರಾದ ಜಗದೀಶ ಗುಡಗುಂಟಿಯವರು ಕೂಡಾ ಸದನದಲ್ಲಿ ವಿಷಯ ಪ್ರಸ್ತಾಪಿಸಿದ್ದಾರೆ ಎಂದು ತಿಳಿಸಿದರು, ಸಮಿತಿಯ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುಂದಿನ ಬಾರಿ ತಾಲ್ಲೂಕು ಪುನರ ರಚನೆ ಮಾಡುವ ಸಂದರ್ಭದಲ್ಲಿ ಸಾವಳಗಿ ಪಟ್ಟಣವನ್ನು ತಾಲ್ಲೂಕು ಕೇಂದ್ರವನ್ನಾಗಿ ಘೋಷಣೆ ಮಾಡುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ತಾಲ್ಲೂಕಾ ಸಮಿತಿಯ ಮುಖಂಡರಾದ ಸುಭಾಸ ಪಾಟೋಳಿ, ಬಸುಗೌಡ ಪರಮಗೊಂಡ, ರಾಜುಗೌಡ ಪಾಟೀಲ, ಸಿದ್ದುಬಾ ಬಂಡಿವಡ್ಡರ, ಸುಜೀತಗೌಡ ಪಾಟೀಲ, ಆಧಿನಾಥ ಸಕಳೆ, ತುಕಾರಾಮ ಬಾಪಕರ, ಅನೀಲ ಬಡಿಗೇರ, ರಾಜು ಕರಾಬೇ, ಲಕ್ಷö್ಮಣ ಪುಂಡೇ, ವಿಠ್ಠಲ ಉಮರಾಣಿ, ಆಜೀಂ ಆಲಗೂರ, ಪಾರೀಶ ಸಕಳೆ, ಬಸವರಾಜ ಮಾಳಿ ಹಾಗೂ ಮುಂತಾದವರು ಉಪಸ್ಥಿತರಿದ್ದರು


















Leave a Reply