
ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ನೀತಿ ಖಂಡಿಸಿ ಬೈಂದೂರಿನಲ್ಲಿ ಹಿಂಜಾವೇ ಪ್ರತಿಭಟನೆ
ಹಿಂದು ಜಾಗರಣ ವೇದಿಕೆ ಪ್ರಾಂತ ಸಹ ಸಂಚಾಲಕರನ್ನು ಸುಳ್ಳು ಮೊಕದ್ದಮೆ ದಾಖಲಿಸಿ ಬಂಧಿಸಿದ್ದನ್ನು ಖಂಡಿಸಿ ಹಿಂಜಾವೇ ಬೈಂದೂರು ತಾಲೂಕು ವತಿಯಿಂದ ಬೈಂದೂರು ಅಂಡರ್ ಪಾಸ್ ಬಳಿ ಪ್ರತಿಭಟನೆ ನಡೆಸಿ ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ನೀತಿಯನ್ನು ಖಂಡಿಸಿ ಪ್ರತಿಭಟನೆ ನಡೆಸಿದರು.

ಪ್ರತಿಭಟನಾ ಸಭೆ ಉದ್ದೇಶಿಸಿ ಮಾತನಾಡಿದ ಬೈಂದೂರು ತಾಲೂಕು ಸಹ ಸಂಚಾಲಕ ಹರೀಶ್ ಸೇಳ್ಕೋಡ್
ಇಂದಿನ ಕಾಂಗ್ರೆಸ್ ಸರ್ಕಾರ ಪೊಲೀಸರ ಮೇಲೆ ಒತ್ತಡ ಹೇರಿ ಹಿಂದೂ ಸಂಘಟನೆಗಳ ನಾಯಕರನ್ನು ಸುಳ್ಳು ಮೊಕದ್ದಮೆ ದಾಖಲಿಸಿ ಬಂಧಿಸಿ ಹಿಂದೂ ಸಂಘಟನೆಗಳ ಸಾಮಾಜಿಕ ಚಳವಳಿಗಳನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದು ಇದನ್ನು ಹಿಂದೂ ಜಾಗರಣ ವೇದಿಕೆ ಬಲವಾಗಿ ಖಂಡಿಸುತ್ತದೆ, ಹಿಂದೂ ವಿರೋಧಿ ನೀತಿ ಮುಂದುವರಿಸಿದರೆ ಕಾಂಗ್ರೆಸ್ ಸರ್ಕಾರದ ವಿರುದ್ದ ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರತಿಭಟನೆಗಳು ಹಿಂಜಾವೇ ತಾಲೂಕಿನಾದ್ಯಂತ ಮಾಡುತ್ತೇವೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಹಿಂಜಾವೇ ಜಿಲ್ಲಾ ಸಂಚಾಲಕ -ಶಂಕರ ಕೋಟ, ಜಿಲ್ಲಾ ಸಹ ಸಂಚಾಲಕ -ನವೀನ್ ಗಂಗೊಳ್ಳಿ, ವಾಸುದೇವ ಗಂಗೊಳ್ಳಿ, ಗೋಪಾಲ್ ವಸ್ರೆ, ಮಹೇಶ್ , ರತ್ನಾಕರ ಗಂಗೊಳ್ಳಿ, ತಾಲೂಕು ಸಂಚಾಲಕ -ರಾಜೇಶ್ ಬೈಂದೂರು, ರಾಜೇಶ್ ಮೂಡನಗೆದ್ದೆ, ಮಹೇಶ್ ಬೈಂದೂರು, ವಿಶ್ವ ಹಿಂದೂ ಪರಿಷತ್ತಿನ ಸುಧಾಕರ್ ಶೆಟ್ಟಿ, ಬಿಜೆಪಿ ಪ್ರಮುಖರಾದ ದೀಪಕ್ ಕುಮಾರ್ ಶೆಟ್ಟಿ, ಶರತ್ ಶೆಟ್ಟಿ ಹಾಗೂ ಬೈಂದೂರು ತಾಲೂಕಿನ ಹಿಂಜಾವೇ ಕಾರ್ಯಕರ್ತರು ಉಪಸ್ಥಿತರಿದ್ದರು.














Leave a Reply