Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಸತತ 13ನೇ ವರ್ಷದ ಉಡುಪಿಯಿಂದ ತಿರುಪತಿ ಪಾದಯಾತ್ರೆ

ಕೋಟ: ವೆಂಕಟೇಶ್ವರ ಸ್ವೀಟ್ಸ್ ಉಡುಪಿ ಇದರ ಮಾಲಕರದ ಪಿ.ಲಕ್ಷ್ಮಿ ನಾರಾಯಣ ರಾವ್ ಅವರ ಮುಂದಾಳತ್ವದಲ್ಲಿ ಸತತ 13ನೇ ವರ್ಷದ ಸಾಸ್ತಾನದಿಂದ ತಿರುಪತಿ ಪಾದಯಾತ್ರೆಯು ಆ. 22 ರಿಂದ (ಪ್ರತಿ ವರ್ಷದಂತೆ ನಾಗರ ಪಂಚಮಿಯ ಮರುದಿನ) ಆರಂಭ ಗೊಂಡಿದೆ. ನಿರಂತರ 18 ದಿನ ಈ ಪಾದಯಾತ್ರೆಯು ಕ್ರಮಿಸಲಿದೆ.ಮೊದಲ ದಿನ ಹಿರಿಯಡಕ ನಾರಾಯಣಗುರು ಸಭಾಭವನದಲ್ಲಿ ತಂಗಲಿದ್ದು, ಹಾಗೆಯೇ ಒಂದೊಂದು ದಿನ ಒಂದೊಂದು ಸ್ಥಳದಲ್ಲಿ ಉಳಿದು, ಹೊಸ್ಮಾರು, ಧರ್ಮಸ್ಥಳ, ಗುಂಡ್ಯ, ಸಕಲೇಶಪುರ, ಹಾಸನ, ಚೆನ್ನಾರಾಯಪಟ್ಟಣ, ಬೆಳ್ಳೂರು ಕ್ರಾಸ್, ಕುದೂರು, ಚಿಕ್ಕಬೆಲವಂಗಲ, ನಂದಿಗ್ರಾಮ, ಕೈವಾರ, ರಾಯಲ್ಪಡು ಶಾಲೆ, ಚಿಂತಪರ್ತಿ ಹಾಲ್, ಬಾಕ್ರಪೇಟೆ ಶಾಲೆ, ಶ್ರೀನಿವಾಸ ಮಂಗಾಪುರ, ಶ್ರೀನಿವಾಸ ಮಂಗಾಪುರ ದಿಂದ ತಿರುಪತಿ ತಲುಪಿ, ತಿರುಪತಿ ವೆಂಕಟೇಶ್ವರನ ದರ್ಶನ ಪಡೆಯುವುದು ಎಂದು ಯೋಜನೆ ರೂಪಿಸಲಾಗಿದೆ.

ಪಾದಯಾತ್ರೆಗೆ ತೆರಳುವವರು ಲಕ್ಷ್ಮೀ ನಾರಾಯಣ್ ರಾವ್ ಅವರ ಮನೆಯಲ್ಲಿ, ಅವರಿಂದ ಬಟ್ಟೆಗಳನ್ನು ಸ್ವೀಕರಿಸಿ ಅಲ್ಲಿಂದ ಒಟ್ಟಿಗೆ ಹೊರಟಿದ್ದಾರೆ. ಈ ಪಾದಯಾತ್ರೆಯಲ್ಲಿ ಸರಿಸುಮಾರು 200 ಪಾದಯಾತ್ರಿಗಳಿದ್ದು ತಿರುಪತಿ ತಲುಪುವ ತನಕ 18 ದಿನದ ಎಲ್ಲಾ ಖರ್ಚು ಊಟ, ತಿಂಡಿ, ಕುಡಿಯುವ ನೀರಿನ ವ್ಯವಸ್ಥೆ, ಉಳಿಯುವ ವ್ಯವಸ್ಥೆಯನ್ನು ವೆಂಕಟೇಶ್ವರ ಸ್ವೀಟ್ಸ್ ವತಿಯಿಂದ ಮಾಡಲಾಗುತ್ತಿದೆ.

ವೆಂಕಟೇಶ್ವರ ಸ್ವೀಟ್ಸ್ ಉಡುಪಿ ಇದರ ಮಾಲಕರದ ಪಿ.ಲಕ್ಷ್ಮಿ ನಾರಾಯಣ ರಾವ್ ಅವರ ಮುಂದಾಳತ್ವದಲ್ಲಿ ಸತತ 13ನೇ ವರ್ಷದ ಉಡುಪಿದಿಂದ ತಿರುಪತಿ ಪಾದಯಾತ್ರೆ ಆರಂಭಗೊಂಡಿತು.

Leave a Reply

Your email address will not be published. Required fields are marked *