
ಕೋಟ: ಕನ್ನಡ ಸಾಹಿತ್ಯ ಪರಿಷತ್ತು ಬ್ರಹ್ಮಾವರ ಘಟಕದ ವತಿಯಿಂದ ತಿಂಗಳ ಕಾರ್ಯಕ್ರಮದಲ್ಲಿ ಹಿರಿಯ ಯಕ್ಷಕಲಾವಿದ ಕೊಂಡದಕುಳಿ ರಾಮಚಂದ್ರ ಹೆಗಡೆ ಅವರನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕೊಂಡದಕುಳಿ ರಾಮಚಂದ್ರ ಹೆಗಡೆ ವಿದುರನ ಪಾತ್ರವನ್ನು ಹವ್ಯಕ ಭಾಷೆಯಲ್ಲಿ ಪ್ರಸ್ತುತ ಪಡಿಸಿದರು. ಮರು ಓದು ಮತ್ತು ವಿಮರ್ಶೆಯಲ್ಲಿ ಡಾ. ಶಿವರಾಮ ಕಾರಂತರ ಕಾದಂಬರಿ ಧರ್ಮರಾಯನ ಸಂಸಾರ ಇದನ್ನು ಶಿವಾನಂದ ಮೈಯ್ಯ ಪ್ರಸ್ತುತಪಡಿಸಿದರು.
ಕ.ಸಾ.ಪ ಬ್ರಹ್ಮಾವರ ಘಟಕದ ಅಧ್ಯಕ್ಷ ಜಿ. ರಾಮಚಂದ್ರ ಐತಾಳ್ ಅಧ್ಯಕ್ಷತೆ ವಹಿಸಿ ಸ್ವಾಗತಿಸಿ, ಪ್ರಾಸ್ತಾವನೆಗೈದರು
ಅತಿಥಿಗಳಾಗಿ ಸಂಘಟಕರಾದ ಸೀತಾರಾಮ್ ಸೋಮಯಾಜಿ, ಉಪೇಂದ್ರ ಸೋಮಯಾ ಜಿ, ರಾಜಶೇಖರ್ ಹೆಬ್ಬಾರ್, ಅಚ್ಯುತ ಪೂಜಾರಿ ಉಪಸ್ಥಿತರಿದ್ದರು.
ಕನ್ನಡ ಸಾಹಿತ್ಯ ಪರಿಷತ್ತಿನ ಬ್ರಹ್ಮಾವರ ಘಟಕದ ಗೌರವ ಕಾರ್ಯದರ್ಶಿ ಜ್ಯೋತಿ ಕೃಷ್ಣ ಪೂಜಾರಿ ಧನ್ಯವಾದಗೈದರು. ಸುಮನ ಹೇರಳೆ ಕಾರ್ಯಕ್ರಮವನ್ನು ನಿರೂಪಿಸಿದರು.
ಇತ್ತೀಚಿಗೆ ಕನ್ನಡ ಸಾಹಿತ್ಯ ಪರಿಷತ್ತು ಬ್ರಹ್ಮಾವರ ಘಟಕದ ವತಿಯಿಂದ ನಡೆದ ತಿಂಗಳ ಕಾರ್ಯಕ್ರಮದಲ್ಲಿ ಕೊಂಡದಕುಳಿ ರಾಮಚಂದ್ರ ಹೆಗಡೆ ಅವರನ್ನು ಗೌರವಿಸಲಾಯಿತು. ಕ.ಸಾ.ಪ ಬ್ರಹ್ಮಾವರ ಘಟಕದ ಅಧ್ಯಕ್ಷ ಜಿ. ರಾಮಚಂದ್ರ ಐತಾಳ್, ಸಂಘಟಕರಾದ ಸೀತಾರಾಮ್ ಸೋಮಯಾಜಿ, ಉಪೇಂದ್ರ ಸೋಮಯಾಜಿ ಇದ್ದರು.














Leave a Reply