Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇವಸ್ಥಾನ ಸನ್ನಿಧಿಯಲ್ಲಿ ಮುದ್ದುಕೃಷ್ಣ ಮುದ್ದು ರಾಧೆ ಸ್ಪರ್ಧೆ ಕಾರ್ಯಕ್ರಮ

ಕೋಟ: ಶ್ರೀ ಗುರು ನರಸಿಂಹ ದೇವಸ್ಥಾನ ಸಾಲಿಗ್ರಾಮ ಇವರ ಆಶ್ರಯದಲ್ಲಿ ಯುವ ವೇದಿಕೆ ಕೂಟ ಮಹಾ ಜಗತ್ತು ಸಾಲಿಗ್ರಾಮ ಸಾಲಿಗ್ರಾಮ ಅಂಗ ಸಂಸ್ಥೆ ಇವರ ನೇತೃತ್ವದಲ್ಲಿ ಕೂಟಮಹಾ ಜಗತ್ತು ಸಾಲಿಗ್ರಾಮ ಸಾಲಿಗ್ರಾಮ ಅಂಗಸಂಸ್ಥೆ, ಮಹಿಳಾ ವೇದಿಕೆ ಕೂಟ ಮಹಾ ಜಗತ್ತು ಸಾಲಿಗ್ರಾಮ ಅಂಗ ಸಂಸ್ಥೆ, ವಿಪ್ರ ಮಹಿಳಾ ಬಳಗ ಸಾಲಿಗ್ರಾಮ ಗೆಳೆಯರ ಬಳಗ ಕಾರ್ಕಡ- ಸಾಲಿಗ್ರಾಮ್ರ, ಶ್ರೀ ಕೃಷ್ಣ ಇಂಡಸ್ಟ್ರಿಯಲ್ ಕೋ ಆಪರೇಟಿವ್ ಸೊಸೈಟಿ ಉಡುಪಿ, ಎಪಿ ಅಡಿಗ ಅಸೋಸಿಯೇಟ್ಸ್ ಉಳ್ತೂರು, ಜೀನಿ ಮಿಲೆಟ್ ಹೆಲ್ತ್‍ಮಿಕ್ಸ್,ದಿ.ಇಂದಿರಾ ಮಧ್ಯಸ್ಥ ಅವರ ಸ್ಮರಣಾರ್ಥ ಅವರ ಮಕ್ಕಳು ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಮುದ್ದುಕೃಷ್ಣ ಮುದ್ದು ರಾಧೆ ಸ್ಪರ್ಧೆ ಶ್ರೀ ಗುರುನರಸಿಂಹ ಜ್ಞಾನ ಮಂದಿರದಲ್ಲಿ ಭಾನುವಾರ ಜರಗಿತು.

ಮುದ್ದುಕೃಷ್ಣ ಮುದ್ದು ರಾಧೆ ಸ್ಪರ್ಧೆಯಲ್ಲಿ ದಾಖಲೆಯ 200 ಕ್ಕೂ ಅಧಿಕ ಮಕ್ಕಳು ಭಾಗವಹಿಸಿದ್ದು ವಿಶೇಷವಾಗಿತ್ತು. ಕಾರ್ಯಕ್ರಮವನ್ನು ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಳದ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಕೆ ಎಸ್ ಕಾರಂತ್ ಉದ್ಘಾಟಿಸಿದರು. ಸಭೆಯ ಅಧ್ಯಕ್ಷತೆಯನ್ನು ಯುವ ವೇದಿಕೆ ಕೂಟ ಮಹಾಜಗತ್ತು ಸಾಲಿಗ್ರಾಮ ಅಧ್ಯಕ್ಷ ಗಿರೀಶ್ ಮಯ್ಯ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಳದ ಆಡಳಿತ ಮಂಡಳಿಯ ಟ್ರಸ್ಟಿ ಕೆ. ಅನಂತ ಪದ್ಮನಾಭ ಐತಾಳ್ ಸಮುದಾಯದ ಹಿರಿಯರಾದ ಪಿ.ರಘು ಮಧ್ಯಸ್ಥ ,ಕೂಟ ಮಹಾಜಗತ್ತು ಅಂಗಸಂಸ್ಥೆ ಸಾಲಿಗ್ರಾಮ ಅಧ್ಯಕ್ಷ ಶ್ರೀಪತಿ ಅಧಿಕಾರಿ, ಮಹಿಳಾ ವೇದಿಕೆ ಕೂಟ ಮಹಾ ಜಗತ್ತು ಸಾಲಿಗ್ರಾಮ ಅಂಗ ಸಂಸ್ಥೆ ಅಧ್ಯಕ್ಷೆ ಯಶೋಧ ಹೊಳ್ಳ,ವಿಪ್ರ ಮಹಿಳಾ ಬಳಗ ಸಾಲಿಗ್ರಾಮ
ಸಂಚಾಲಕಿ ವನಿತಾ ಉಪಾಧ್ಯ, ಎಪಿ ಅಡಿಗ ಅಸೋಸಿಯೇಟ್ಸ್ ಉಳ್ತೂರು ಮಾಲಿಕ ಗಣೇಶ್ ಅಡಿಗ, ಶ್ರೀ ಕೃಷ್ಣ ಇಂಡಸ್ಟ್ರಿಯಲ್ ಕೋ ಆಪರೇಟಿವ್ ಸೊಸೈಟಿ ಉಡುಪಿ ಸಿಇಓ ಶಶಿಧರ ಮಯ್ಯ, ಗೆಳೆಯರ ಬಳಗ ಕಾರ್ಕಡ ಕಾರ್ಯದರ್ಶಿ ಶೀನ ಕೆ ಜೀನಿ ಮಿಲೆಟ್ ಹೆಲ್ತ್‍ಮಿಕ್ಸ್ ಸಂಸ್ಥೆಯ ಸಂಯೋಜಕ ಸುದೇಶ್, ಯುವ ವೇದಿಕೆ ಗೌರವಾಧ್ಯಕ್ಷ ಪಿ. ವೈ ಕೃಷ್ಣಪ್ರಸಾದ್ ಹೇರ್ಳೆ ಉಪಸ್ಥಿತರಿದ್ದರು.

ಸ್ಪರ್ಧೆಯ ತೀರ್ಪುಗಾರರಾಗಿ ಸುದರ್ಶನ್ ಉರಾಳ,ಶುಭ ಭಾಗವತ್,ಅಮೃತ ವೆಂಕಟೇಶ್ ಮಯ್ಯ, ನಾಗರಾಜ್ ಐತಾಳ್, ಪಿ ಮಂಜುನಾಥ್ ಉಪಾಧ್ಯ, ಶ್ರೀನಿವಾಸ ಉಪಾಧ್ಯ, ಅರುಣ್ ಅಡಿಗ, ಗಣೇಶ್ ಭಟ್ , ಪ್ರಸನ್ನ ತುಂಗ, ಶಶಿಪ್ರಭಾ ಅಲ್ಸೆ, ಸಚಿನ್ ಹೇರ್ಳೆ, ವೆಂಕಟೇಶ್ ಮಯ್ಯ, ಪನ್ನಗ ನಾವುಡ , ರವಿರಾಜ್ ಉಪಾಧ್ಯ, ಪ್ರಶಾಂತ್ ಹೇರ್ಳೆ, ವೆಂಕಟೇಶ್ ಐತಾಳ್, ದರ್ಶನ್ ಅಡಿಗ, ಮಹಾಬಲ ಹೇರ್ಳೆ, ಚಿದಾನಂದ ತುಂಗ, ಅಮರ್ ಹಂದೆ ಭಾಗವಹಿಸಿದರು.ಕಾರ್ಯಕ್ರವನ್ನು ಸುಜಾತಾ ಎಂ.ಬಾಯಿರಿ ನಿರೂಪಿಸಿದರು

ಯುವ ವೇದಿಕೆಯ ಶ್ರೀಕಾಂತ್ ಐತಾಳ್ ವಂದಿಸಿದರು.
ಸ್ಪರ್ಧೆಯಲ್ಲಿ ವಿವಿಧ ವಿಭಾಗದಲ್ಲಿ ಶ್ರೀಪನ್ನಗ ಅಡಿಗ, ದ್ವಿತೀಯ ಅನುಷಲ್ ಪಿ ಆಚಾರ್ಯ, ತೃತೀಯ ಆರುಷಿ ಎಸ್ ಮೊಗವೀರ, ರಾಧೆ ಮನಸ್ವಿನಿ ಪ್ರಥಮ , ದೃತಿ ದ್ವಿತೀಯ , ಆರಾಧ್ಯ ಮಯ್ಯ ತೃತೀಯ, ಯುಗಾಂತ್ ಮಧ್ಯಸ್ಥ ಪ್ರಥಮ, ಭವಿನ್ ದ್ವಿತೀಯ,ಆರ್ಯನ್ ಎನ್ ತೃತೀಯ ಪೂಜಾರಿ, ಪ್ರಥಮ ಶಿವಿಕಾ, ದ್ವಿತೀಯ ಲಾಸ್ಯ ವಿ,ತೃತೀಯ ಅಶ್ವಿತಾ ಸೋಮಯಾಜಿ ಪ್ರಥಮ ಧನ್ವಿ ಕೆ,ದ್ವಿತೀಯ, ನಿಯಾಂಶ್‍ತೃತೀಯ ಸ್ತುತಿ, ಪ್ರಥಮ ವೈಷ್ಣವಿ ಪೂಜಾರಿ, ದ್ವಿತೀಯ ಅಯಾನ್ ಸಂದೇಶ ತೃತೀಯ ಆದ್ರಿತಾ ಬಹುಮಾನ ಪಡೆದುಕೊಂಡರು.

ಶ್ರೀ ಗುರು ನರಸಿಂಹ ದೇವಸ್ಥಾನ ಸಾಲಿಗ್ರಾಮ ಇವರ ಆಶ್ರಯದಲ್ಲಿ ಯುವ ವೇದಿಕೆ ಕೂಟ ಮಹಾ ಜಗತ್ತು ಸಾಲಿಗ್ರಾಮ ಸಾಲಿಗ್ರಾಮ ಅಂಗ ಸಂಸ್ಥೆ ಇವರ ನೇತೃತ್ವದಲಿ ವಿವಿಧ ಸಂಘಸಂಸ್ಥೆಗಳ ಸಹಭಾಗಿತ್ವದಲ್ಲಿ ಮುದ್ದುಕೃಷ್ಣ ಮುದ್ದು ರಾಧೆ ಸ್ಪರ್ಧಾ ಕಾರ್ಯಕ್ರಮವನ್ನು ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಳದ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಕೆ ಎಸ್ ಕಾರಂತ್ ಉದ್ಘಾಟಿಸಿದರು. ಯುವ ವೇದಿಕೆ ಕೂಟ ಮಹಾಜಗತ್ತು ಸಾಲಿಗ್ರಾಮ ಅಧ್ಯಕ್ಷ ಗಿರೀಶ್ ಮಯ್ಯ,ಯುವ ವೇದಿಕೆ ಗೌರವಾಧ್ಯಕ್ಷ ಪಿ. ವೈ ಕೃಷ್ಣಪ್ರಸಾದ್ ಹೇರ್ಳೆ, ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಳದ ಆಡಳಿತ ಮಂಡಳಿಯ ಟ್ರಸ್ಟಿ ಕೆ. ಅನಂತ ಪದ್ಮನಾಭ ಐತಾಳ್ ಸಮುದಾಯದ ಹಿರಿಯರಾದ ಪಿ.ರಘು ಮಧ್ಯಸ್ಥ ,ಕೂಟ ಮಹಾಜಗತ್ತು ಅಂಗಸಂಸ್ಥೆ ಸಾಲಿಗ್ರಾಮ ಅಧ್ಯಕ್ಷ ಶ್ರೀಪತಿ ಅಧಿಕಾರಿ ಇದ್ದರು.

Leave a Reply

Your email address will not be published. Required fields are marked *