Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ತೆಕ್ಕಟ್ಟೆ: ‘ಡಾನ್ಸ್ ಕೊರಿಯೋಗ್ರಾಫಿ’ ತರಗತಿ ಉದ್ಘಾಟನೆ:
ಸಂಸ್ಕಾರವನ್ನು ತಮ್ಮ ಮಕ್ಕಳಲ್ಲಿ ರೂಢಿಸುವಲ್ಲಿ ಪೋಷಕರ ಪಾತ್ರ ಹಿರಿದು: ಯಕ್ಷಗುರು ಲಂಬೋದರ ಹೆಗಡೆ ನಿಟ್ಟೂರು

ಕೋಟ: ಸಾಂಸ್ಕøತಿಕ ಚಟುವಟಿಕೆಗಳ ಅಭ್ಯಾಸಕ್ಕೆ ಹೆಸರಾದ ಕೈಲಾಸ ಕಲಾಕ್ಷೇತ್ರ ತೆಕ್ಕಟ್ಟೆ ಯಶಸ್ವೀ ತರಗತಿ ಕೇಂದ್ರವಾಗಿ ಮನೆ ಮಾತಾಗಿದ್ದು, ಹಲವಾರು ಪ್ರತಿಭೆಗಳು ತೆಕ್ಕಟ್ಟೆಯ ಹಯಗ್ರೀವದ ಆಶ್ರಯದಲ್ಲಿ ಬೆಳೆದು ಪ್ರಜ್ವಲಿಸಿದೆ. ಏಕ ಕಾಲಕ್ಕೆ ಪ್ರತಿಭೆಯ ಅನಾವರಣಕ್ಕೆ ಹಾತೊರೆದು ಮುಗ್ಗರಿಸಿದರೆ ಏಳ್ಗೆ ಸಿಗದು. ವಾಹಿನಿಯ ರಿಯಾಲಿಟಿ ಶೋ ಗಳಿಗೆ ಮಾರು ಹೋಗಿ ತಮ್ಮ ಮಕ್ಕಳನ್ನು ಅಣಿಗೊಳಿಸುವುದು ಸಲ್ಲ. ಶೃದ್ಧೆ, ಭಕ್ತಿಯಿಂದ ಕಲಿಕೆ ಆರಂಭಿಸಿದರೆ ಖಂಡಿತಾ ಜಯ ಎನ್ನುವುದು ಲಭಿಸುತ್ತದೆ. ಸಂಸ್ಕಾರ ಎನ್ನುವುದನ್ನು ತಮ್ಮ ಮಕ್ಕಳಲ್ಲಿ ರೂಢಿಸಿಕೊಡುವಲ್ಲಿ ಪೋಷಕರ ಪಾತ್ರ ಹಿರಿದಾದುದು. ಜೊತೆಗೆ ಗುರು ಹಿರಿಯರು ಸಂಸ್ಕಾರಕ್ಕೆ ಒತ್ತು ನೀಡಬೇಕು. ಆವಾಗಲೇ ಪರಿಸರದಲ್ಲಿ ಮಕ್ಕಳು ಪ್ರತಿಬಿಂಬಿಸಲು ಸಾಧ್ಯ ಎಂದು ಡಾನ್ಸ್ ಕೊರಿಯೋಗ್ರಾಫಿ ತರಬೇತಿಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಯಕ್ಷ ಗುರು ಲಂಬೋದರ ಹೆಗಡೆ ನಿಟ್ಟೂರು ಮಾತನ್ನಾಡಿದರು.

ತೆಕ್ಕಟ್ಟೆ ಹಯಗೀವದಲ್ಲಿ ಆಗಸ್ಟ್ 27ರಂದು ಶ್ರೀ ಕೈಲಾಸ ಕಲಾಕ್ಷೇತ್ರ ತೆಕ್ಕಟ್ಟೆ ಆಶ್ರಯದಲ್ಲಿ ಸುಧೀರ್ ತಲ್ಲೂರು ನಡೆಸುವ ‘ಡಾನ್ಸ್ ಕೊರಿಯೋಗ್ರಾಫಿ’ ಕಾರ್ಯಕ್ರಮವನ್ನು ಉದ್ಘಾಟಿಸಿ ಹೆಗಡೆಯವರು ಮಾತನ್ನಾಡಿದರು.
ಪ್ರಾಚಾರ್ಯ ದೇವದಾಸ ರಾವ್ ಕೂಡ್ಲಿ, ಡಾ. ಗಣೇಶ್ ಯು. ಶಾರದ ಹೊಳ್ಳ, ಯೋಗೀಶ್ ಭಟ್, ಉಲ್ಲಾಸ ನಾಯಕ್ ಮಂಕಿ, ಕಾವಡಿ ಹರೀಶ್ ಪೂಜಾರಿ, ಡಾನ್ಸ್ ಶಿಕ್ಷಕ ಸುಧೀರ್ ತಲ್ಲೂರು ಉಪಸ್ಥಿತರಿದ್ದರು. ಉಪನ್ಯಾಸಕ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ಕಾರ್ಯಕ್ರಮ ನಿರೂಪಿಸಿದರು.

ತೆಕ್ಕಟ್ಟೆ ಹಯಗೀವದಲ್ಲಿ ಆಗಸ್ಟ್ 27ರಂದು ಶ್ರೀ ಕೈಲಾಸ ಕಲಾಕ್ಷೇತ್ರ ತೆಕ್ಕಟ್ಟೆ ಆಶ್ರಯದಲ್ಲಿ ಸುಧೀರ್ ತಲ್ಲೂರು ನಡೆಸುವ ‘ಡಾನ್ಸ್ ಕೊರಿಯೋಗ್ರಾಫಿ’ ಕಾರ್ಯಕ್ರಮವನ್ನು ಯಕ್ಷ ಗುರು ಲಂಬೋದರ ಹೆಗಡೆ ನಿಟ್ಟೂರು ಉದ್ಘಾಟಿಸಿದರು. ಪ್ರಾಚಾರ್ಯ ದೇವದಾಸ ರಾವ್ ಕೂಡ್ಲಿ, ಡಾ. ಗಣೇಶ್ ಯು. ಶಾರದ ಹೊಳ್ಳ, ಯೋಗೀಶ್ ಭಟ್, ಉಲ್ಲಾಸ ನಾಯಕ್ ಮಂಕಿ ಇದ್ದರು.

Leave a Reply

Your email address will not be published. Required fields are marked *