
ಕೋಟ: ಶ್ರೀ ಕೋಟಿಲಿಂಗೇಶ್ವರ ಕಲಾಬಳಗ ಕೋಟೇಶ್ವರ ಇವರಿಂದ ಮಕ್ಕಳ ಯಕ್ಷಗಾನ ಜ್ವಾಲಾ ಪ್ರತಾಪವು ಶ್ರಾವಣ ಶನಿವಾರದ ಪ್ರಯುಕ್ತ ಶ್ರೀ ಗುರುನರಸಿಂಹ ದೇವಸ್ಥಾನ ಸಾಲಿಗ್ರಾಮದಲ್ಲಿ ಸಂಭ್ರಮದಿಂದ ನಡೆಯಿತು. ಈ ಸಂದರ್ಭದಲ್ಲಿ ಸಾಲಿಗ್ರಾಮ ಗುರುನರಸಿಂಹ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಕೆ.ಎಸ್.ಕಾರಂತ, ಕಾರ್ಯದರ್ಶಿ ಲಕ್ಷ್ಮೀನಾರಾಯಣ ತುಂಗ ಜೊತೆಯಾಗಿ ಶ್ರೀ ಕೋಟಿಲಿಂಗೇಶ್ವರ ಕಲಾಬಳಗ ಕೋಟೇಶ್ವರದ ಯಕ್ಷಗುರು ಕಡ್ಲೆ ಗಣಪತಿ ಹೆಗಡೆ ಅವರನ್ನು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಶ್ರೀ ಕೋಟಿಲಿಂಗೇಶ್ವರ ಕಲಾಬಳಗ ಕೋಟೇಶ್ವರದ ಪೋಷಕರಾದ ಹಂದಕುಂದ ಅಶೋಕ ಕುಮಾರ್ ಶೆಟ್ಟಿ. ಸಂಸ್ಥೆಯ ಗೌರವಾಧ್ಯಕ್ಷ ಡಾ.ರಾಜೇಶ್ ಶೆಟ್ಟಿ, ಸಮಾಜ ಸೇವಕ ನಾರಾಯಣ ಭಂಡಾರಿ ಬೀಜಾಡಿ ಮೊದಲಾದವರು ಉಪಸ್ಥಿತರಿದ್ದರು.
ಶ್ರೀ ಕೋಟಿಲಿಂಗೇಶ್ವರ ಕಲಾಬಳಗ ಕೋಟೇಶ್ವರ ಇವರಿಂದ ಮಕ್ಕಳ ಯಕ್ಷಗಾನ ಜ್ವಾಲಾ ಪ್ರತಾಪವು ಶ್ರಾವಣ ಶನಿವಾರದ ಪ್ರಯುಕ್ತ ಶ್ರೀ ಗುರುನರಸಿಂಹ ದೇವಸ್ಥಾನ ಸಾಲಿಗ್ರಾಮದಲ್ಲಿ ಕೋಟೇಶ್ವರದ ಯಕ್ಷಗುರು ಕಡ್ಲೆ ಗಣಪತಿ ಹೆಗಡೆ ಅವರನ್ನು ಸನ್ಮಾನಿಸಿ ಗೌರವಿಸಿದರು.













Leave a Reply