
ಜನ್ನಾಡಿ ಪರಿಸರದ ಪ್ರತಿ ಮನೆ ಮನೆಯಲ್ಲಿ ಭಜನಾದೀಪ ಪ್ರಜ್ವಲಿಸಲಿ ಎನ್ನುವ ಉದ್ದೇಶವನ್ನು ಹೊತ್ತು ಭಜನಾ ಒಕ್ಕೂಟದ ಮಾದರಿ ಹಾಗೂ ಪ್ರೇರಣ ಕಾರ್ಯಕ್ರಮವಾದ ಮನೆ ಮನೆ ಅಂಗಳದಿ ಭಜನೆ ಕಾರ್ಯಕ್ರಮವನ್ನು ಹಾಲಾಡಿ ವಲಯದ ಶ್ರೀ ಜಟ್ಟಿಗೇಶ್ವರ ಭಜನಾ ಮಂಡಳಿ ಜನ್ನಾಡಿ ಇವರು ಹಮ್ಮಿಕೊಂಡಿದ್ದು . ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರ ಮೂಲಕ ತಂಡದ ಭಜನಾ ಗುರುಗಳಾದ ಆನಂದ್ ಶೆಟ್ಟಿ ಉದ್ಘಾಟಿಸಿದರು. ರಾಘವೇಂದ್ರ ಹಾಲಾಡಿ ಭಜನಾ ಗುರುಗಳು, ಅತುಲ್ ಕುಮಾರ್ ಶೆಟ್ಟಿ ಮಾಜಿ ಗ್ರಾಮ ಪಂಚಾಯತ್ ಸದಸ್ಯರು ಹಾರ್ದಳ್ಳಿ ಮಂಡಳ್ಳಿ. . ಶ್ರೀಮತಿ ಸುಶೀಲಾ ಎ ಶೆಟ್ಟಿ ಅಧ್ಯಕ್ಷರು ಭಜನಾ ಒಕ್ಕೂಟ ಹಾಲಾಡಿ ವಲಯ, ಶ್ರೀಮತಿ ಪಲ್ಲವಿ ಪ್ರಶಾಂತ್ ಕಾರ್ಯದರ್ಶಿ ಜಟ್ಟಿಗೇಶ್ವರ ಭಜನಾ ಮಂಡಳಿ ಜನ್ನಾಡಿ, ಶ್ರೀ ದಿವಾಕರ ಆಚಾರ್ಯ ಕೋಶಾಧಿಕಾರಿ ಜಟ್ಟಿಗೇಶ್ವರ ಭಜನಾ ಮಂಡಳಿ ಜನ್ನಾಡಿ. ಪೋಷಕರು ಹಾಗೂ ಭಜನಾ ಮಂಡಳಿಯ ಎಲ್ಲ ಸದಸ್ಯರು ಉಪಸ್ಥಿತಿ ಇದ್ದರು. ಮನೆಮನೆ ಅಂಗಳದಿ ಭಜನೆಯ ಮೊದಲನೆಯ ಮನೆಯಾಗಿ ಶ್ರೀ ಗಣಪ ಮೊಗವೀರ ರಾಜನ್ ಬೆಟ್ಟು ಇವರ ಮನೆಯಲ್ಲಿ ಭಜನಾ ಸೇವೆ ನೆರವೇರಿಸಲಾಯಿತು.














Leave a Reply