
ಕೋಟ: ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದಲ್ಲಿ ನಾಡಿನಲ್ಲಿರುವ ಅನಾವೃಷ್ಟಿಯನ್ನು ಹೋಗಲಾಡಿಸಿ ಸುಭಿಕ್ಷೆಯನ್ನು ಕರುಣಿಸುವಂತೆ ಜಗದೊಡೆಯ ಗುರುನರಸಿಂಹನಲ್ಲಿ ಬುಧವಾರ ಬೆಳಿಗ್ಗೆ 8-00ಕ್ಕೆ ಸಾಮೂಹಿಕ ಪ್ರಾರ್ಥನೆಯನ್ನು ಮಾಡಲಾಯಿತು.
ಶ್ರೀದೇವಳದ ತಂತ್ರಿಗಳಾದ ಕೃಷ್ಣ ಸೋಮಯಾಜಿ, ಅರ್ಚಕರಾದ ಜನಾರ್ಧನ ಅಡಿಗ ಮತ್ತು ಶ್ರೀನಿವಾಸ ಅಡಿಗರ ಉಪಸ್ಥಿತಿಯಲ್ಲಿ ಧಾರ್ಮಿಕ ವಿಧಿವಿಧಾನಗಳು ನೆವೆರಿತು.ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಕೆ. ಎಸ್. ಕಾರಂತ ಕಾರ್ಯದರ್ಶಿ ಲಕ್ಷ್ಮೀನಾರಾಯಣ ತುಂಗ, ಮಾಜಿ ಅಧ್ಯಕ್ಷ ಎ. ಜಗದೀಶ ಕಾರಂತ, ಮಾಜಿ ಸದಸ್ಯರಾದ ಸುಬ್ರಮಣ್ಯ ಹೇರಳೆ, ಕೂ. ಮ. ಜ. ಸಾಲಿಗ್ರಾಮ ಅಂಗಸಂಸ್ಥೆಯ ಕಾರ್ಯದರ್ಶಿ ಮಹಾಬಲ ಹೇರಳೆ ಮತ್ತು ಊರ ಹತ್ತು ಸಮಸ್ತರು ಪಾಲ್ಗೊಂಡರು.
ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದಲ್ಲಿ ನಾಡಿನಲ್ಲಿರುವ ಅನಾವೃಷ್ಟಿಯನ್ನು ಹೋಗಲಾಡಿಸಿ ಸುಭಿಕ್ಷೆಯನ್ನು ಕರುಣಿಸುವಂತೆ ಜಗದೊಡೆಯ ಗುರುನರಸಿಂಹನಲ್ಲಿ ಸಾಮೂಹಿಕ ಪ್ರಾರ್ಥನೆಯನ್ನು ಮಾಡಲಾಯಿತು.














Leave a Reply