Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಪಾಂಡೇಶ್ವರ ಗ್ರಾಮ ಪಂಚಾಯತ್‍ನಲ್ಲಿ ಗೃಹಲಕ್ಷ್ಮಿ ಯೋಜನೆ ವೀಕ್ಷಣೆ

ಕೋಟ: ಪಾಂಡೇಶ್ವರ ಗ್ರಾಮ ಪಂಚಾಯತ್‍ನಲ್ಲಿ ಗೃಹಲಕ್ಷ್ಮಿ ಯೋಜನೆಯ ಅನುಷ್ಠಾನ ಕಾರ್ಯಕ್ರಮ ನಡೆಯಿತು .
ಪಂಚಾಯತ್ ವ್ಯಾಪ್ತಿಯ ಐನೂಕಕ್ಕೂ ಹೆಚ್ಚು ಪಲಾನುಭವಿಗಳು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು . ಪಂಚಾಯತ್ ಆವರಣದಲ್ಲಿ ಮೂರು ಕಡೆ ದೊಡ್ಡ ಪರದೆಯ ಮೂಲಕ ಕಾರ್ಯಕ್ರಮದ ನೇರ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು.

ಕಾರ್ಯಕ್ರಮಕ್ಕೆ ಪಂಚಾಯತ್ ಸುತ್ತಮುತ್ತ ಮಹಿಳೆಯರು ನಾ ಗೃಹಲಕ್ಷ್ಮಿ ನಾ ನಾಯಕಿ ಎಂಬ ರಂಗೋಲಿ ಹಾಕಿ ಸಿಂಗರಿಸಿದ್ದರು . ಕಾರ್ಯಕ್ರಮದ ವೇಳೆ ಮಹಿಳೆಯರು, ಗಣ್ಯರು ಪ್ರತಿಜ್ಞಾ ವಿಧಿ ಸ್ವೀಕರಿಸಿದರು.

ಪಂಚಾಯತ್ ಅಧ್ಯಕ್ಷೆ ಸುಶೀಲಾ ಪೂಜಾರಿ , ಉಪಾಧ್ಯಕ್ಷ ವೈ.ಬಿ ರಾಘವೇಂದ್ರ , ಪಂಚಾಯತ್ ಅಭಿವೃದ್ಧಿ ಅಧಿಕಾರಿ ಲೋಲಾಕ್ಷಿ , ಕಾರ್ಯದರ್ಶಿ ವಿಜಯಾ , ನೋಡಲ್ ಅಧಿಕಾರಿಯಾಗಿ ಕೋಟ ಕೃಷಿ ಅಧಿಕಾರಿ ಸುರೇಶ್ ಬಂಗೇರಾ , ಪಂಚಾಯತ್ ಸದಸ್ಯರಾದ ಪ್ರತಾಪ್ ಶೆಟ್ಟಿ , ಸಿಲ್ವೆಸ್ಟರ್ ಡಿಸೋಜ , ಚಂದ್ರಮೋಹನ್ , ನಂದಿನಿ ಅಂಗನವಾಡಿ ಕಾರ್ಯಕರ್ತೆಯರು , ಸಿಬ್ಬಂದಿಗಳು ಮೊದಲಾದವರು ಉಪಸ್ಥಿತರಿದ್ದರು .

ಪಾಂಡೇಶ್ವರ ಗ್ರಾಮ ಪಂಚಾಯತ್‍ನಲ್ಲಿ ಗೃಹಲಕ್ಷ್ಮಿ ಯೋಜನೆಯ ಅನುಷ್ಠಾನ ಕಾರ್ಯಕ್ರಮ ನಡೆಯಿತು .
ಪಂಚಾಯತ್ ವ್ಯಾಪ್ತಿಯ ಐನೂಕಕ್ಕೂ ಹೆಚ್ಚು ಪಲಾನುಭವಿಗಳು ಗೃಹಲಕ್ಷ್ಮಿ ಯೋಜನೆ ವೀಕ್ಷಣೆಗೈದರು.

Leave a Reply

Your email address will not be published. Required fields are marked *