Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಗುಂಡ್ಮಿ -ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ – ಐರೋಡಿ
ವಿದ್ಯಾರ್ಥಿಗಳ ಅವಿಸ್ಮರಣೀಯ ಸಮಾವೇಶ

ಕೋಟ: ಕಳೆದ ಐವತ್ತು ವರ್ಷಗಳಿಂದ ಯಕ್ಷಗಾನ ಕ್ಷೇತ್ರಕ್ಕೆ ಸುಮಾರು 3000 ಕಲಾವಿದರನ್ನು ಅರ್ಪಿಸಿದ ಸಂಸ್ಥೆ ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ-ಐರೋಡಿ. ಉಡುಪಿ ಜಿಲ್ಲೆಯ ಕೋಟದ ಹಿರೇಮಹಾಲಿಂಗೇಶ್ವರ ದೇವಸ್ಥಾನದಲ್ಲಿ 1972 ರಲ್ಲಿ ಪ್ರಾರಂಭವಾದ ಸಂಸ್ಥೆಯು ಇದೀಗ ಸಾಲಿಗ್ರಾಮದ ಗುಂಡ್ಮಿಯಲ್ಲಿ ಸ್ವಂತ ಕಟ್ಟಡವನ್ನು ಹೊಂದಿದ್ದು ಇಲ್ಲಿ ನಿರಂತರವಾಗಿ ಉಚಿತ ಯಕ್ಷಗಾನ ತರಗತಿ ನಡೆಯುತ್ತಿದೆ.

ರಾಷ್ಟ್ರಪ್ರಶಸ್ತಿ ಪುರಸ್ಕೃತ ಮುಖ್ಯೋಪಾಧ್ಯಾಯ ಐರೋಡಿ ಸದಾನಂದ ಹೆಬ್ಬಾರರು ಸ್ಥಾಪಿಸಿದ, ಶ್ರೇಷ್ಠ ಪ್ರಾಚಾರ್ಯರೆನಿಸಿಕೊಂಡ ನಾರ್ಣಪ್ಪ ಉಪ್ಪೂರರ ಗುರುತನದಲ್ಲಿ ನಡೆದ ಈ ಶಾಲೆಯ ವಿದ್ಯಾರ್ಥಿಗಳ ಸಮಾವೇಶವನ್ನು ಸಪ್ಪೆಂಬರ್.2 ಮತ್ತು 3 ರಂದು ಸಾಲಿಗ್ರಾಮದ ಸದಾನಂದ ರಂಗಮಂಟಪದಲ್ಲಿ ಏರ್ಪಡಿಸಲಾಗಿದೆ.

ವಿದ್ಯಾರ್ಥಿಗಳೇ ಆಯೋಜಿಸುತ್ತಿರುವ ಈ ಸಮಾವೇಶದಲ್ಲಿ ವಿದ್ಯಾರ್ಥಿಗಳಿಂದಲೆ ತಾಳಮದ್ದಲೆ, ಯಕ್ಷಗಾನ, ಗಾನಾಮೃತ, ಯಕ್ಷಸಂಜೀವ ಯಕ್ಷಗಾನ ಕೇಂದ್ರದಿಂದ ಪೂರ್ವರಂಗ ಪ್ರಾತ್ಯಕ್ಷಿಕೆ, ವಿದ್ಯಾರ್ಥಿಗಳ ಅವಿಸ್ಮರಣೀಯ ನೆನಪುಗಳ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಕಲಾಕೇಂದ್ರದ ಕಾರ್ಯದರ್ಶಿ ರಾಜಶೇಖರ ಹೆಬ್ಬಾರರು ಮಾಧ್ಯಮಕ್ಕೆ ತಿಳಿಸಿರುತ್ತಾರೆ.

Leave a Reply

Your email address will not be published. Required fields are marked *