Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಯಡ್ತಾಡಿ -ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವನದುರ್ಗಿ ಜ್ಞಾನವಿಕಾಸ ಕೇಂದ್ರದ ಎರಡನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ

ಕೋಟ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ಬ್ರಹ್ಮಾವರ ,ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮದಡಿಯಲ್ಲಿ ಯಡ್ತಾಡಿ ವಲಯದ ಕಾರ್ಯಕ್ಷೇತ್ರದ ವನದುರ್ಗಿ ಜ್ಞಾನವಿಕಾಸ ಕೇಂದ್ರದ ಎರಡನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಇತ್ತೀಚಿಗೆ ಜರಗಿತು. ಕಾರ್ಯಕ್ರಮವನ್ನು ಯಡ್ತಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಉದ್ಘಾಟಿಸಿ ಮಾತನಾಡಿ , ಮಹಿಳೆಯರಿಗೆ ತಮ್ಮಲ್ಲಿರುವ ಪ್ರತಿಭೆಯನ್ನು ವ್ಯಕ್ತಪಡಿಸಲು ಇದು ಒಂದು ಉತ್ತಮ ವೇದಿಕೆಯಾಗಿದೆ. ಈ ಕಾರ್ಯಕ್ರಮದ ಮೂಲಕ ಎಷ್ಟೋ ಮಹಿಳೆಯರು ಸ್ವ- ಉದ್ಯೋಗವನ್ನು ಮಾಡುತ್ತಿದ್ದು ಸಂತೋಷದ ವಿಷಯವಾಗಿದೆ ಹಾಗೂ ತನ್ನನ್ನು ತಾನು ಪರಿವರ್ತಿಸಿಕೊಂಡು ಸಮಾಜದ ಮುಖ್ಯ ವಾಹಿನಿಗೆ ಬಂದಿರುತ್ತಾರೆ ಎಂದು ತಿಳಿಸಿ ಮಾತೃಶ್ರೀ ಹೇಮಾವತಿ ಅಮ್ಮನವರ ಈ ಕಾರ್ಯಕ್ರಮ ಎಷ್ಟೋ ಮಹಿಳೆಯರ ಬಾಳಿಗೆ ಬೆಳಕಾಗಿದೆ ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿನ ಸದಸ್ಯರಾದ ಸುನಿತ ಶೆಟ್ಟಿ ಹಾಗೂ ಕುಡುಬಿ ಸಮುದಾಯ ಭವನದ ಅಧ್ಯಕ್ಷ ಜಯಪ್ರಕಾಶ್, ,ವಲಯದ ಮೇಲ್ವಿಚಾರಕರಾದ ರಾಘವೇಂದ್ರ, ತಾಲ್ಲೂಕು ಸಮನ್ವಯಾಧಿಕಾರಿ ಪುಷ್ಪಲತಾ , ಸೇವಾ ಪ್ರತಿನಿಧಿ ಉಷಾ ಹಾಗೂ ಕೇಂದ್ರದ ಸಂಯೋಜಕೀಯರಾದ ವಿನಯ ಉಪಸ್ಥಿತರಿದ್ದರು. ಕೇಂದ್ರದ ಸದಸ್ಯರು ವಿವಿಧ ರೀತಿಯ ಜನಪದ ಶೈಲಿಯ ನೃತ್ಯ ಹಾಗೂ ಕುಣಿತ ಭಜನೆ ಗಳನ್ನು ಮಾಡುವುದರ ಮೂಲಕ ಮನೋರಂಜನ ಕಾರ್ಯಕ್ರಮ ನೀಡಿದರು. ಈ ಕಾರ್ಯಕ್ರಮದಲ್ಲಿ 60 ಮಂದಿ ಕೇಂದ್ರದ ಸದಸ್ಯರು ಭಾಗವಹಿಸಿದ್ದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ಬ್ರಹ್ಮಾವರ ,ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮದಡಿಯಲ್ಲಿ ಯಡ್ತಾಡಿ ವಲಯದ ಕಾರ್ಯಕ್ಷೇತ್ರದ ವನದುರ್ಗಿ ಜ್ಞಾನವಿಕಾಸ ಕೇಂದ್ರದ ಎರಡನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಯಡ್ತಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಉದ್ಘಾಟಿಸಿದರು.

Leave a Reply

Your email address will not be published. Required fields are marked *