
ಕೋಟ: ಶ್ರೀ ಅಘೋರೇಶ್ವರ ಕಲಾರಂಗ ಕಾರ್ತಟ್ಟು ಚಿತ್ರಪಾಡಿ ಇವರ ನೇತೃತ್ವದಲ್ಲಿ ರೋಟರಿ ಕ್ಲಬ್ ಕೋಟ ಸಿಟಿ ಮತ್ತು ಗಾಣಿಗ ಯುವ ಸಂಘಟನೆ ಮತ್ತು ಮಹಿಳಾ ಸಂಘಟನೆ ಕೋಟ ಘಟಕ ಇವರ ಸಹಯೋಗದೊಂದಿಗೆ ಮೆ| ಶಕ್ತಿ ಸ್ಟೋನ್ ಕಟ್ಟಿಂಗ್ ಮತ್ತು ಪಾಲಿಷಿಂಗ್ ಕಂ. ಗುಂಡ್ಮಿ ಇವರ ಪ್ರಾಯೋಜಕತ್ವದಲ್ಲಿ ಸೆ.03 ಭಾನುವಾರ ಶ್ರೀ ಅಘೋರೇಶ್ವರ ದೇವಸ್ಥಾನ ಕಾರ್ತಟ್ಟು ಇದರ ಸಭಾವನದಲ್ಲಿ ಮುದ್ದು ಕೃಷ್ಣ ಸ್ಪರ್ಧೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಶ್ರೀ ಅಘೋರೇಶ್ವರ ದೇವಸ್ಥಾನದ ಆಡಳಿತ ಮುಖ್ಯಸ್ಥ ಚಂದ್ರಶೇಖರ ಕಾರಂತ ಉದ್ಘಾಟಿಸಿದರು.
ಶ್ರೀ ಅಘೋರೇಶ್ವರ ಕಲಾರಂಗದ ಉಪಾಧ್ಯಕ್ಷ ಶ್ಯಾಮಾಸುಂದರ ನಾಯರಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ರೋಟರಿ ಕ್ಲಬ್ ಕೋಟ ಸಿಟಿ ಅಧ್ಯಕ್ಷ ವೆಂಕಟೇಶ ಆಚಾರ್ಯ, ಗಾಣಿಗ ಯುವ ಸಂಘಟನೆ ಅಧ್ಯಕ್ಷ ಗಿರೀಶ ಗಾಣಿಗ ಬೆಟ್ಲಕ್ಕಿ, ಮಹಿಳಾ ಸಂಘಟನೆಯ ಅಧ್ಯಕ್ಷೆ ರೇಖಾ ಗಣೇಶ ಚಿತ್ರಪಾಡಿ, ಅಘೋರೇಶ್ವರ ಕಲಾರಂಗದ ಸಾಂಸ್ಕೃತಿಕ ಕಾರ್ಯದರ್ಶಿ ಸಂದೀಪ ನಾಯರಿ, ಕೋಶಾಧಿಕಾರಿ ರವಿರಾಜ್ ನಾಯರಿ , ಕಲಾರಂಗದ ಸದಸ್ಯರಾದ ರಾಘವೇಂದ್ರ ನಾಯರಿ, ಶಿವಾನಂದ ನಾಯರಿ, ಮಂಜುನಾಥ ಸಿ.ಎನ್, ರವಿ ಬನ್ನಾಡಿ , ನವೀನ ನಾಯರಿ, ವೆಂಕಟೇಶ ಬಿ.ಸುಜಿತ್ ನಾಯರಿ, ಅರುಣ ಪೂಜಾರಿ, ರಾಮ ನಾಯರಿ, ಶಂಕರ ನಾಯರಿ, ರಾಘವೇಂದ್ರ ಗಾಣಿಗ, ಶ್ರೀಮತಿ ವಸಂತಿ ನಾಯರ್ತಿ , ರೇವತಿ ಶ್ಯಾಮಾಸುಂದರ ಮುಂತಾದವರು ಉಪಸ್ಥಿತರಿದ್ದರು. ಶ್ರೀ ಅಘೋರೇಶ್ವರ ಕಲಾರಂಗ ಮಾಜಿ ಅಧ್ಯಕ್ಷ ಪ್ರಭಾಕರ ನಾಯರಿ ಸ್ವಾಗತಿಸಿದರು. ರೋಟರಿ ಕ್ಲಬ್ ಕಾರ್ಯದರ್ಶಿ ಸತೀಶ ಪೂಜಾರಿ ಧನ್ಯವಾದಗೈದರು.
ವಿಶ್ವನಾಥ ಗಾಣಿಗ ಕಾರ್ಯಕ್ರಮವನ್ನು ನಿರೂಪಿಸಿದರು.
3 ವಿಭಾಗಗಳಲ್ಲಿ ನಡೆದ ಸ್ಪರ್ಧೆಯಲ್ಲಿ ಬಹುಮಾನ
2ವರ್ಷದ ವಿಭಾಗದಲ್ಲಿ ಪ್ರಥಮ ಲಕ್ಷ ಜೆ.ಕೆ, ದ್ವೀತಿಯ ಅಹನಾ, ತೃತೀಯ ಶ್ರೀಯಾನ್ಶ.
2ರಿಂದ 4 ವರ್ಷದ ವಿಭಾಗ ಪ್ರಥಮ ದಲ್ಲಿ ಆರ್ಯನ್ ಎನ್ ಪೂಜಾರಿ, ದ್ವೀತಿಯ ಶನಾಯ, ತೃತೀಯ ಧನ್ಯ ಎಸ್ ಪೂಜಾರಿ.
4ರಿಂದ6ವರ್ಷ ವಿಭಾಗದಲ್ಲಿ ಪ್ರಥಮ ಅದ್ವಿತಿ, ದ್ವೀತಿಯ ವೈಷವಿ ವಿ ಪೂಜಾರಿ , ತೃತೀಯ ಅದ್ವಿತ್ ಪಿ ಹಂದಟ್ಟು ಬಹುಮಾನವನ್ನು ಪಡೆದರು.
ಶ್ರೀ ಅಘೋರೇಶ್ವರ ಕಲಾರಂಗ ಕಾರ್ತಟ್ಟು ಚಿತ್ರಪಾಡಿ ಇವರ ನೇತೃತ್ವದಲ್ಲಿ ್ಲ ಸೆ.03 ಭಾನುವಾರ ಶ್ರೀ ಅಘೋರೇಶ್ವರ ದೇವಸ್ಥಾನ ಕಾರ್ತಟ್ಟು ಇದರ ಸಭಾವನದಲ್ಲಿ ಮುದ್ದು ಕೃಷ್ಣ ಸ್ಪರ್ಧೆ ಕಾರ್ಯಕ್ರಮವನ್ನು ಶ್ರೀ ಅಘೋರೇಶ್ವರ ದೇವಸ್ಥಾನದ ಆಡಳಿತ ಮುಖ್ಯಸ್ಥ ಚಂದ್ರಶೇಖರ ಕಾರಂತ ಉದ್ಘಾಟಿಸಿದರು. ಶ್ರೀ ಅಘೋರೇಶ್ವರ ಕಲಾರಂಗದ ಉಪಾಧ್ಯಕ್ಷ ಶ್ಯಾಮಾಸುಂದರ ನಾಯರಿ, ರೋಟರಿ ಕ್ಲಬ್ ಕೋಟ ಸಿಟಿ ಅಧ್ಯಕ್ಷ ವೆಂಕಟೇಶ ಆಚಾರ್ಯ, ಗಾಣಿಗ ಯುವ ಸಂಘಟನೆ ಅಧ್ಯಕ್ಷ ಗಿರೀಶ ಗಾಣಿಗ ಬೆಟ್ಲಕ್ಕಿ, ಮಹಿಳಾ ಸಂಘಟನೆಯ ಅಧ್ಯಕ್ಷೆ ರೇಖಾ ಗಣೇಶ ಚಿತ್ರಪಾಡಿ ಮತ್ತಿತರರು ಇದ್ದರು.














Leave a Reply