Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ತೆಕ್ಕಟ್ಟೆ: ಜಲಕ್ಷಾಮ ನೀಗಿಸಲು ಮಳೆಗಾಗಿ ‘ಎಳನೀರು ಅಭಿಷೇಕ’ದ ಮೂಲಕ ಮಹಾಲಿಂಗೇಶ್ವರನಲ್ಲಿ ಪ್ರಾರ್ಥನೆ ಸಲ್ಲಿಸಿಕೊಂಡ ಸಾರ್ವಜನಿಕರು

ಕೋಟ: ಸರಾಸರಿ ಮಳೆಯ ಪ್ರಮಾಣ ಪ್ರಸಕ್ತ ಕಾಲದಲ್ಲಿ ಕಡಿಮೆಯಾಗಿ ಪೈರುಗಳಲ್ಲಿ ನೀರು ಇಂಗಿ ಹೋಗಿ ಸಾರ್ವಜನಿಕರು ಭೀತಿಗೊಳಗಾಗಿದ್ದಾರೆ. ಹಿಂದೆ ಹಲವಾರು ಸಂದರ್ಭಗಳಲ್ಲಿ ತೆಕ್ಕಟ್ಟೆ ಮಹಾಲಿಂಗೇಶ್ವರ ದೇಗುಲದಲ್ಲಿ ಮಳೆಗಾಗಿ ಪ್ರಾರ್ಥಿಸಿಕೊಂಡು ಸೀಯಾಖ ಅಭಿಷೇಕ ಮಾಡಿ ಪ್ರಾರ್ಥನೆ ಮಾಡಿಕೊಂಡಾಗ ದೇವತಾನುಗ್ರಹ ಪ್ರಾಪ್ತಿಯಾಗಿ ಧಾರಾಕಾರ ಮಳೆ ಆದಂತಹ ಪವಾಡಗಳು ಬಹಳಷ್ಟಿದೆ ಎಂದು ತೆಕ್ಕಟ್ಟೆ ಮಹಾಲಿಂಗೇಶ್ವರ ದೇಗುಲದ ಆಡಳಿತ ನಿರ್ದೇಶಕ ರಾಮಮೂರ್ತಿ ಪುರಾಣಿಕ ಭಕ್ತರನ್ನು ಉದ್ದೇಶಿಸಿ ಮಾತನಾಡಿದರು.

ತೆಕ್ಕಟ್ಟೆ ಶ್ರೀ ಮಹಾಲಿಂಗೇಶ್ವರ ದೇಗುಲದಲ್ಲಿ ಉತ್ತಮ ಮಳೆಗಾಗಿ ಸೀಯಾಳ ಅಭಿಷೇಕ ಮಾಡಿ ಪ್ರಾರ್ಥನೆ ಸಲುವಾಗಿ ನಡೆದ ಧಾರ್ಮಿಕ ಕಾರ್ಯದಲ್ಲಿ ಮಾತನಾಡಿ ಈ ಭಾರಿಯೂ ಜಲಕ್ಷಾಮ ನೀಗಿಸಲು ಮಳೆಗಾಗಿ ಸಾರ್ವಜನಿಕರೆಲ್ಲಾ ಸೇರಿ ಈ ಅಭಿಷೇಕ ಮಾಡಬೇಕೆಂದು ಸಂಕಲ್ಪಿಸಿದ್ದೇವೆ ನಿರೀಕ್ಷೆಗೂ ಮೀರಿದ ಜನಸ್ಪಂದನೆ ದೊರಕಿದೆ ಎಂದರು

ಈ ಸಂದರ್ಭದಲ್ಲಿ ಕೊಮೆ-ಕೊರವಡಿ ವಿವಿದೋದ್ಧೇಶ ಸಹಕಾರಿ ಸಂಘದ ಕಾರ್ಯನಿರ್ವಹಣಾಧಿಕಾರಿ ಗೋಪಾಲ ಪೂಜಾರಿ, ತೆಕ್ಕಟ್ಟೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಶೇಖರ ಕಾಂಚನ್, ಕೃಷಿಕ ವಿಠ್ಠಲ ದೇವಾಡಿಗ, ಉದ್ಯಮಿ ಶ್ರೀನಿವಾಸ ವೈದ್ಯ ದೇಗುಲದ ಅರ್ಚಕ ಬಳಗ ಭಕ್ತಾಧಿಗಳು ಉಪಸ್ಥಿತರಿದ್ದರು.

ತೆಕ್ಕಟ್ಟೆ ಮಹಾಲಿಂಗೇಶ್ವರ ದೇಗುಲದಲ್ಲಿ ಮಳೆಗಾಗಿ ಪ್ರಾರ್ಥಿಸಿಕೊಂಡು ಸೀಯಾಳ ಅಭಿಷೇಕ ಶ್ರೀ ದೇವರಿಗೆ ಸಮರ್ಪಿಸಿದರು.

Leave a Reply

Your email address will not be published. Required fields are marked *