ಕೋಟ: ಮೊಗವೀರ ಯುವ ಸಂಘಟನೆ ಉಡುಪಿ ಜಿಲ್ಲೆ,ಸಾಲಿಗ್ರಾಮ ಘಟಕ,ಮಹಿಳಾ ಸಂಘಟನೆ ಸಾಲಿಗ್ರಾಮದ ಆಶ್ರಯದಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಮಂಗಳವಾರ ಕರಾವಳಿ ಮೊಗವೀರ ಸಭಾಭವನ ಸಾಲಿಗ್ರಾಮ-ಗುಂಡ್ಮಿಯಲ್ಲಿ ಹಮ್ಮಿಕೊಂಡಿತು.
ಈ ಸಂದರ್ಭದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಚಿತ್ರಪಾಡಿ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಸತೀಶಚಂದ್ರ ಶೆಟ್ಟಿ ಇವರನ್ನು ಗುರುತಿಸಿ,ಗೌರವಿಸಿ,ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೋ.ಯು.ಸಂ. ಸಾಲಿಗ್ರಾಮ ಘಟಕದ ಅಧ್ಯಕ್ಷ ಕಿರಣ್ ಕುಂದರ್ ವಹಿಸಿದ್ದರು. ಸಂಘದ ನಿಕಟ ಪೂರ್ವ ಅಧ್ಯಕ್ಷ ಚಂದ್ರ ಬಂಗೇರ, ಸಂಘದ ಮಾಜಿ ಅಧ್ಯಕ್ಷಗಳಾದ ಶೇಖರ ಮರಕಾಲ,ಅಧ್ಯಕ್ಷ ಕೃಷ್ಣಮೂರ್ತಿ ಮರಕಾಲ,ಸುರೇಶ ಮರಕಾಲ,ಸತೀಶ ಮರಕಾಲ,ಪಟ್ಟಣ ಪಂಚಾಯತ್ ಸದಸ್ಯ ಶ್ರೀನಿವಾಸ ಅಮೀನ್,ಮಹಿಳಾ ಘಟಕದ ಅಧ್ಯಕ್ಷೆ ಶಾಲಿನಿ ವಿಜಯ ಕಾಂಚನ್, ಕರಾವಳಿ ಮೊಗವೀರ ಸಭಾಭವನ ಗುಂಡ್ಮಿಯ ವ್ಯವಸ್ಥಾಪಕ ರಾಮ ಬಂಗೇರ,ಮಹಿಳಾ ಘಟಕದ ಮಾಜಿ ಅಧ್ಯಕರಾದ ಗಿರಿಜಾ ಸುವರ್ಣ, ರೇವತಿ ರಾಜ್,ಗೌರವ ಸಲಹೆಗಾರರದ ಸಂಜೀವ ಕೆಮ್ಮಣ್ಣುಕೆರೆ ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ಜಗ್ನನಾಥ್ ಅಮೀನ್ ಸ್ವಾಗತಿಸಿ ನಿರೂಪಣೆಗೈದು ವಂದಿಸಿದರು.
ಮೊಗವೀರ ಯುವ ಸಂಘಟನೆ ಉಡುಪಿ ಜಿಲ್ಲೆ, ಸಾಲಿಗ್ರಾಮ ಘಟಕ,ಮಹಿಳಾ ಸಂಘಟನೆ ಸಾಲಿಗ್ರಾಮದ ಆಶ್ರಯದಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ್ಲ ಸರಕಾರಿ ಹಿರಿಯ ಪ್ರಾಥಮಿಕ ಚಿತ್ರಪಾಡಿ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಸತೀಶಚಂದ್ರ ಶೆಟ್ಟಿ ಇವರನ್ನು ಗುರುತಿಸಿ, ಗೌರವಿಸಿ, ಸನ್ಮಾನಿಸಲಾಯಿತು. ಮೋ.ಯು.ಸಂ. ಸಾಲಿಗ್ರಾಮ ಘಟಕದ ಅಧ್ಯಕ್ಷ ಕಿರಣ್ ಕುಂದರ್, ಸಂಘದ ನಿಕಟ ಪೂರ್ವ ಅಧ್ಯಕ್ಷ ಚಂದ್ರ ಬಂಗೇರ, ಸಂಘದ ಮಾಜಿ ಅಧ್ಯಕ್ಷಗಳಾದ ಶೇಖರ ಮರಕಾಲ,ಅಧ್ಯಕ್ಷ ಕೃಷ್ಣಮೂರ್ತಿ ಮರಕಾಲ ಇದ್ದರು.














Leave a Reply