ಕೋಟ: ಮೂರ್ತೆದಾರರ ಸೇವಾ ಸಹಕಾರಿ ಸಂಘ ಕೋಟ, ಐತಾಳ್ ಆಯುರ್ವೇದಿಕ್ ಕ್ಲಿನಿಕ್ ಕೋಟ, ಗಿರಿಜ ಹೆಲ್ತ್ಕೇರ್ ಮತ್ತು ಸರ್ಜಿಕಲ್ಸ್ ಉಡುಪಿ, ಸಮುದಾಯ ಆರೋಗ್ಯ ಕೇಂದ್ರ ಕೋಟ, ಜೇಸಿಐ ಕಲ್ಯಾಣಪುರ, ಸೀನಿಯರ್ ಛೇಂಬರ್ ಇಂಟರ್ನ್ಯಾಷನಲ್ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಸೆ.8 ರಂದು ಬೆಳಿಗ್ಗೆ 9.00 ರಿಂದ 1.00 ರವರೆಗೆ ಕೋಟ ಮೂರ್ತೆದಾರರ ಸಹಕಾರಿ ಸಂಘದ ಸಭಾಂಗಣದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಜರುಗಲಿದ್ದು ತಜ್ಞ ವೈದ್ಯರಿಂದ ಸಾಮಾನ್ಯ ತಪಾಸಣೆ, ದಂತ ತಪಾಸಣೆ, ಆಯುರ್ವೇದ ಚಿಕಿತ್ಸೆ, ರಕ್ತದೊತ್ತಡ ಪರೀಕ್ಷೆ, ಮಧುಮೇಹ ಹಾಗೂ ಹೀಮೋಗ್ಲೋಬಿನ್ ತಪಾಸಣೆ ನಡೆಸಲಾಗುವುದು ಸಾರ್ವಜನಿಕರು ಉಚಿತ ಆರೋಗ್ಯ ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕಾಗಿ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಸಿಇಓ ಜಗದೀಶ್ ಕೆಮ್ಮಣ್ಣು ತಿಳಿಸಿದ್ದಾರೆ.













Leave a Reply