Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕೋಟ ಪಡುಕರೆ-ಕಾನೂನು ಮಾಹಿತಿ ಕಾರ್ಯಾಗಾರ

ಕೋಟ:ಕಾನೂನಿನ ಬಗ್ಗೆ ಪ್ರತಿಯೊಬ್ಬರಿಗೂ ಅರಿವು ಅಗತ್ಯ ಈ ದಿಸೆಯಲ್ಲಿ ವಿದ್ಯಾರ್ಥಿಗಳು ಅದರ ಬಗ್ಗೆ ಸಮರ್ಪಕವಾಗಿ ತಿಳಿದುಕೊಳ್ಳವ ಅಗತ್ಯತೆ ಇದೆ ಎಂದು ಕೋಟ ಆರಕ್ಷಕ ಠಾಣೆಯ ಠಾಣಾಧಿಕಾರಿ ಶಂಭುಲಿಂಗಯ್ಯ ಹೇಳಿದರು

ಸೆ.4ರಂದು ಸರಕಾರಿ ಪದವಿ ಪೂರ್ವ ಕಾಲೇಜು ಮಣೂರು ಪಡುಕರೆ ಇಲ್ಲಿನ ವಿದ್ಯಾರ್ಥಿಗಳಿಗೆ ಗೀತಾನಂದ ಪೌಂಡೇಶನ್ ಮುಖ್ಯಸ್ಥ ಆನಂದ ಸಿ ಕುಂದರ್ ಅವರ ಮಾರ್ಗದರ್ಶನದಲ್ಲಿ ಒಂದು ದಿನದ ಕಾನೂನು ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿ ಯಾವುದೇ ಸಂದರ್ಭದಲ್ಲೂ ಸಮಸ್ಯೆಗಳು ಸೃಷ್ಠಿಯಾದಾಗ ಆರಕ್ಷಕರ ಸಂಪರ್ಕ ಮಾಡಿಕೊಳ್ಳಿ ಆ ಮೂಲಕ ಕಾನೂನನ್ನು ಕೈಗೆತ್ತಿಕೊಳ್ಳದಂತೆ ಸಲಹೆ ನೀಡಿದರಲ್ಲದೆ, ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲ ಡೆನ್ನಿಸ್ ಬಾಂಜಿ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಗೀತಾನಂದ ಸಂಸ್ಥೆಯ ವಿಶ್ವಸ್ಥರಾದ ದಿವ್ಯಲಕ್ಮೀ ಪ್ರಶಾಂತ ಕುಂದರ್, ವ್ಯೆಷ್ಣವಿ ರಕ್ಷಿತ್ ಕುಂದರ್,ಕಾಲೇಜು ಸ್ಥಾಪನ ಸಮಿತಿಯ ಸದಸ್ಯರಾದ ಜಯರಾಮ ಶೆಟ್ಟಿ ಭಾಗವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಕೋಟ ಆರಕ್ಷಕ ಠಾಣೆಯ ಠಾಣಾಧಿಕಾರಿ ಶಂಭುಲಿಂಗ ಮತ್ತು ನ್ಯಾಯವಾದಿ ಪ್ರಮೋದ ಹಂದೆ ಭಾಗವಹಿಸಿದರು. ಗೀತಾನಂದ ಪೌಂಡೇಶನ ಸಂಯೋಜಕರಾದ ರವಿಕಿರಣ್ ಕೋಟ ನಿರೂಪಿಸಿ ವಂದಿಸಿದರು.

ಸರಕಾರಿ ಪದವಿ ಪೂರ್ವ ಕಾಲೇಜು ಮಣೂರು ಪಡುಕರೆ ಇಲ್ಲಿನ ವಿದ್ಯಾರ್ಥಿಗಳಿಗೆ ಗೀತಾನಂದ ಪೌಂಡೇಶನ್ ಮುಖ್ಯಸ್ಥ ಆನಂದ ಸಿ ಕುಂದರ್ ಅವರ ಮಾರ್ಗದರ್ಶನದಲ್ಲಿ ಒಂದು ದಿನದ ಕಾನೂನು ಮಾಹಿತಿ ಕಾರ್ಯಾಗಾರವನ್ನು ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲ ಡೆನ್ನಿಸ್ ಬಾಂಜಿ ಉದ್ಘಾಟಿಸಿದರು.

Leave a Reply

Your email address will not be published. Required fields are marked *