ಶ್ರೀ ವಿಧ್ಯೇಶ ವಿದ್ಯಾಮಾನ್ಯ ನೇಷನಲ್ ಆಂಗ್ಲ ಮಾಧ್ಯಮ ಶಾಲೆ ಹೇರಾಡಿ – ಬಾರಕೂರು ಇದರ ಸಂಯೋಜನೆ ಯಲ್ಲಿ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಬಾರಕೂರಿನ ಆಸುಪಾಸಿನ 12 ಅಂಗನವಾಡಿ ವಿದ್ಯಾರ್ಥಿಗಳಿಗೋಸ್ಕರ ಮುದ್ದು ಕೃಷ್ಣ ಸ್ಪರ್ಧೆಯನ್ನು ಏರ್ಪಡಿಸಲಾಯಿತು.
ಮುದ್ದು ಕೃಷ್ಣ ಸ್ಪರ್ಧೆಯ,ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಹೆಚ್. ಶೇಡಿಕೊಡ್ಲು ವಿಠ್ಠಲ್ ಶೆಟ್ಟಿ , ಉಪಾಧ್ಯಕ್ಷರು, ಬಾರಕೂರು ವಿದ್ಯಾಭಿವರ್ದಿನಿ ಸಂಘ ( ರಿ ) ಬಾರಕೂರು ಇವರು ವಹಿಸಿದ್ದರು. ಈ ಕಾರ್ಯಕ್ರಮ ದ ಉದ್ಘಾಟನೆ ಯನ್ನು Ln ಶುಭಕರ್ ಶೆಟ್ಟಿ. ಲಯನ್ಸ್ ಕ್ಲಬ್ ಬ್ರಹ್ಮಾವರ ರವರು ದೀಪ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಿದರು , ಈ ಕಾರ್ಯಕ್ರಮ ದಲ್ಲಿ ಗೌರವ ಉಪಸ್ಥಿ ಯನ್ನು ಬಿ. ಶಾಂತರಾಮ್ ಶೆಟ್ಟಿ, ಅಧ್ಯಕ್ಷರು ಬಾರಕೂರು ವಿದ್ಯಾಭಿವರ್ದಿನಿ ಸಂಘ (ರಿ )ಬಾರಕೂರು, ಕೃಷ್ಣ ಹೆಬ್ಬಾರ್, ಶಂಕರ ಶೆಟ್ಟಿ, ರೋ. ಸೀತಾರಾಮ್, ಎಸ್. ರಾಜ ಗೋಪಾಲ ನಂಬಿಯಾರ್, ln ಸಂತೋಷ್ ಶೆಟ್ಟಿ, ಶಾಲಾ ಮುಖ್ಯ ಶಿಕ್ಷಕಿ ಲಿಖಿತಾ ಕೊಠಾರಿ ರವರು ಉಪಸ್ಥಿತರಿದ್ದರು.
ಈ ಮುದ್ದು ಕೃಷ್ಣ ಸ್ಪರ್ಧೆ ಗೆ ಸಹಕರಿಸಿದ ದಾನಿಗಳಿಗೆ ಮತ್ತು ಆಸು ಪಾಸಿನ ಅಂಗನವಾಡಿ ಶಾಲೆಯ ಶಿಕ್ಷಕಿಯರನ್ನು ಗುರುತಿಸಿ ಕೊಳ್ಳಲಾಯಿತು. ಈ ಕಾರ್ಯಕ್ರಮವನ್ನು ಶಿಕ್ಷಕಿಯರಾದ ಪವಿತ್ರ ಮತ್ತು ರೇಣುಕಾ ನಿರೂಪಿಸಿದರು. ಶಿಕ್ಷಕಿ ಬ್ರಿಜಿತ ಗೋನ್ಸಾಲ್ವಿಸ್ ಸ್ವಾಗತಿಸಿ, ದೈಹಿಕ ಶಿಕ್ಷಣ ಶಿಕ್ಷಕಿ ಜ್ಯೋತಿರವರು ವಂದಿಸಿದರು. ಶಿಕ್ಷಕ -ಶಿಕ್ಷೇತರರು ಸಹಕರಿಸಿದರು.
ಮುದ್ದು ಕೃಷ್ಣ ಸ್ಪರ್ಧೆ ಯ ಸಮಾರೋಪ ಸಮಾರಂಭದ ಅಧ್ಯಕ್ಷತೆ ಯನ್ನು ನೇಷನಲ್ ಜೂನಿಯರ್ ಕಾಲೇಜು ಬಾರಕೂರಿನ ಅಮೃತ ಮಹೋತ್ಸವದ ಅಧ್ಯಕ್ಷರಾದ ರಾಜಾರಾಮ್ ಶೆಟ್ಟಿರವರು ವಹಿಸಿದ್ದರು. ವೇದಿಕೆಯಲ್ಲಿ ಬಿ. ಶಾಂತರಾಮ್ ಶೆಟ್ಟಿ,ಅಧ್ಯಕ್ಷರು ಬಾರಕೂರು ವಿದ್ಯಾಭಿ ವರ್ದಿನಿ ಸಂಘ (ರಿ ) ಬಾರಕೂರು, ರಾಜಗೋಪಾಲ್ ನಂಬಿಯಾರ್, ತೀರ್ಪುಗಾರರಾದ ವನಿತಾ ಉಪಾಧ್ಯ, ಭಾಗೀರಥಿ, ಸುಜಾತಾ ಅಂದ್ರದೆ, ಲಿಖಿತಾ ಕೊಠಾರಿರವರು ಉಪಸ್ಥಿತರಿದ್ದರು,
ಈ ಕಾರ್ಯಕ್ರಮವನ್ನು ಸುಜಾತಾ ಶೆಟ್ಟಿ ಮತ್ತು ಮಧುಶ್ರೀ ರವರು ನಿರೂಪಿಸಿ, ಶಿಕ್ಷಕಿಯರಾದ ಸುಜಾತಾ ಎಲ್. ರೈ ರವರು ಸ್ವಾಗತಿಸಿ, ಅಪರ್ಣ ವಂದಿಸಿದರು,
ಮುದ್ದು ಕೃಷ್ಣ ಸ್ಪರ್ಧೆ ಯನ್ನು ಶಿಕ್ಷಕಿ ಯರಾದ ಸಬಿತಾ ಮಾಸ್ಕರೇನಸ್ ಮತ್ತು ನಾಗರತ್ನ ಹೆಬ್ಬಾರ್, ಶಿಕ್ಷಕ ಪೂರ್ಣೇಶ್ ರವರು ನೆಡೆಸಿ ಕೊಟ್ಟರು. ಈ ಕಾರ್ಯಕ್ರಮ ವನ್ನು ಶಿಕ್ಷಕಿಯರಾದ ಚಂದ್ರಕಲಾ, ಶುಭ ರಾವ್, ಕುಸುಮರವರು ಸಂಯೋಜನೆ ಮಾಡಿದರು, ಶಾಲಾ ಶಿಕ್ಷಕ – ಶಿಕ್ಷಕೇತರರು ಸಹಕರಿಸಿದರು.














Leave a Reply