ಕೋಟ: ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಕೊರವಡಿ ಇದರ ಆಡಳಿತ ವರ್ಗದವರ ಸಹಕಾರದಿಂದ ಕುಂಭಾಶಿ ದ್ರಾವಿಡ ಬ್ರಾಹ್ಮಣ ಪರಿಷತ್ ಸೋಣೆ ತಿಂಗಳಲ್ಲಿ ಹೊಸ್ತಿಲು ಪೂಜೆ,
ಭಜನಾ ಸಿರಿ ಕಾರ್ಯಕ್ರಮ ಜರಗಿತು. ಈ ಸಂದರ್ಭದಲ್ಲಿ ವಲಯದ ಅಧ್ಯಕ್ಷ ರಮೇಶ್ ಚಾತ್ರ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಇದೇ ವೇಳೆ ಸಂಗೀತ ಕ್ಷೇತ್ರದ ಯುವ ಪ್ರತಿಭೆ ಶ್ರೀರಕ್ಷಾ ಹತ್ವಾರ ಇವರನ್ನು ಗುರುತಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಕುಂದಾಪುರ ತಾಲೂಕಿನ ಕುಂಭಾಶಿ ದ್ರಾವಿಡ ಬ್ರಾಹ್ಮಣ ಪರಿಷತ್ ಅಧ್ಯಕ್ಷ ಸುಭಾಶ್ಚಂದ್ರ ಹತ್ವಾರ್, ಕುಂಭಾಶಿ ವಲಯದ ಕಾರ್ಯದರ್ಶಿಗಳಾದ ರಾಘವೇಂದ್ರ ಪುರಾಣಿಕ್,ಮಹಿಳಾ ಅಧ್ಯಕ್ಷೆ ಸುಪ್ರೀತಾ ಪುರಾಣಿಕ್, ಮಹಿಳಾ ಕಾರ್ಯದರ್ಶಿ ನಾಗರತ್ನ ಆಚಾರ್ಯ,ಕೋಟೇಶ್ವರ ವಲಯದ ಮಹಿಳಾ ಅಧ್ಯಕ್ಷೆ ವಾಣಿಶ್ರೀ ಹೆಬ್ಬಾರ್ ಉಪಸ್ಥಿತರಿದ್ದರು.
ಶಂಕರ ಜಯಂತಿ ಭಜನಾ ಮಂಡಳಿ ಕೋಟೇಶ್ವರದವರೊಂದಿಗೆ ವಲಯದ ವಿಪ್ರ ವೃಂದದವರು ಭಜನಾ ಕಾರ್ಯಕ್ರಮ ನೆರವೆರಿಸಿದರು. ಮಹಿಳೆಯರು ಹೊಸ್ತಿಲು ಪೂಜೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.
ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಕೊರವಡಿ ಇದರ ಆಡಳಿತ ವರ್ಗದವರ ಸಹಕಾರದಿಂದ ಕುಂಭಾಶಿ ದ್ರಾವಿಡ ಬ್ರಾಹ್ಮಣ ಪರಿಷತ್ ಸೋಣೆ ತಿಂಗಳಲ್ಲಿ ಹೊಸ್ತಿಲು ಪೂಜೆ,
ಭಜನಾ ಸಿರಿ ಕಾರ್ಯಕ್ರಮ ಜರಗಿತು.














Leave a Reply