ಕೋಟ: ಇಲ್ಲಿನ ಕೋಟ ಅಮೃತೇಶ್ವರಿ ದೇವಸ್ಥಾನದಲ್ಲಿ ಕಳೆದ 47 ವರ್ಷಗಳಿಂದ ಕೋಟ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಪೂಜಿಸಲ್ಪಡುವ ಗಣೇಶೋತ್ಸವಕ್ಕೆ ಇದೀಗ 48ನೇ ವರ್ಷದ ಸಂಭ್ರಮ. ಆ ಪ್ರಯುಕ್ತ ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಕೋಟದ ಅಮೃತೇಶ್ವರಿ ದೇವಳದಲ್ಲಿ ಶುಕ್ರವಾರ ನಡೆಯಿತು. ಶ್ರೀ ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷ ಹಾಗೂ ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ಆನಂದ್ ಸಿ ಕುಂದರ್ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಎಂ.ಸುಬ್ರಾಯ ಆಚಾರ್ಯ,ಚಂದ್ರ ಪೂಜಾರಿ, ಗೀತಾನಂದ ಟ್ರಸ್ಟ್ ನ ಗೀತಾ ಎ ಕುಂದರ್ ,ಗಣೇಶೋತ್ಸವ ಸಮಿತಿಯ ಪ್ರಮುಖರಾದ ಚಂದ್ರ ಆಚಾರ್ಯ,ಶೀಲರಾಜ್ ಕಾಂಚನ್,ಗಿರೀಶ್ ದೇವಾಡಿಗ,ಆನಂದ್ ದೇವಾಡಿಗ,ಶೀನ ಪೂಜಾರಿ ಹರ್ತಟ್ಟು,ಗುಂಡು ಪೂಜಾರಿ ಮತ್ತಿತರರು ಇದ್ದರು.
ಕೋಟ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ 48ನೇ ಶ್ರೀ ಗಣೇಶೋತ್ಸವದ ಆಮಂತ್ರಣವನ್ನು ಶ್ರೀ ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷ ಹಾಗೂ ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ಆನಂದ್ ಸಿ ಕುಂದರ್ ಬಿಡುಗಡೆಗೊಳಿಸಿದರು.














Leave a Reply