ಕೋಡಿ- ಕೋಟದ ಯಕ್ಷ ಸೌರಭ ಶ್ರೀ ಹಿರೇ ಮಹಾಲಿಂಗೇಶ್ವರ ಕಲಾರಂಗದ ವತಿಯಿಂದ ಕರ್ಣಾರ್ಜುನ ತಾಳಮದ್ದಳೆ
ಕೋಟ: ಶ್ರಾವಣ ಮಾಸದ ಪೂಜಾ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಶ್ರೀ ಶನೇಶ್ವರ ದೇವಸ್ಥಾನ ಕೋಡಿ ಕನ್ಯಾಣ ಇಲ್ಲಿ ಸೆ. 10ರ ಶನಿವಾರ ವಾಕ್ ವಚೋವೈಭವ ತಾಳಮದ್ದಳೆ ಕಾರ್ಯಕ್ರಮ ಜರುಗಿತು.
ಯಕ್ಷಸೌರಭ ಕೋಟ ಇದರ ಹವ್ಯಾಸಿ ಕಲಾವಿದರಿಂದ ಯಕ್ಷಗುರು ಪ್ರಸಾದ್ ಕುಮಾರ್ ಮೊಗೇಬೆಟ್ಟು ನಿರ್ದೇಶನದಲ್ಲಿ ಅದ್ದೂರಿಯ ತಾಳಮದ್ದಳೆ ಕರ್ಣಾರ್ಜುನ ಬಹಳ ಸೊಗಸಾಗಿ ಮೂಡಿಬಂದಿತು.
ಕರ್ಣನಾಗಿ ರಾಜೇಶ್ ಕರ್ಕೇರ ಕೋಡಿ, ಅರ್ಜುನ ಶ್ರೀನಾಥ್ ಊರಾಳ ಚಿತ್ರಪಾಡಿ, ಕೃಷ್ಣನಾಗಿ ಹರೀಶ್ ಭಂಡಾರಿ ಗಿಳಿಯಾರು, ಶಲ್ಯ ಮಂಜುನಾಥ್ ಭಂಡಾರಿ ಪಡುಕರೆ, ವಿಗ್ನೇಷ್ ದೇವಾಡಿಗ, ಸರ್ಪಸ್ತ್ರ ಮಾಧವ ಭಂಡಾರಿ, ಬ್ರಾಹ್ಮಣ ಗಿರೀಶ್ ಗಾಣಿಗ ಬೆಟ್ಲಾಕ್ಕಿ ನಿರ್ವಹಿಸಿದರು. ಭಾಗವತಿಕೆಯಲ್ಲಿ ಪ್ರಸಾದ್ ಕುಮಾರ್ ಮೊಗೇಬೆಟ್ಟು, ಪ್ರಶಾಂತ್ ಪಡುಕರೆ, ಮದ್ದಳೆ ದೇವದಾಸ್ ರಾವ್ ಕೂಡ್ಲಿ, ಚಂಡೆಯಲ್ಲಿ ರಾಹುಲ್ ಕುಂದರ್ ಕೋಡಿ ಭಾಗವಹಿಸಿದರು.ಈ ಹಿನ್ನಲ್ಲೆಯಲ್ಲಿ ಸಂಘದ ಪ್ರೋತ್ಸಾಹಕ ತಾಳಮದ್ದಳೆಗೆ ಅವಕಾಶ ಕಲ್ಪಿಸಿದ ದೇವಸ್ಥಾನದ ಗುರುಗಳಾದ ತಿಮ್ಮ ಕುಂದರ್ ರನ್ನು ಯಕ್ಷಸೌರಭದ ಅಧ್ಯಕ್ಷ ರಾಘವೇಂದ್ರ ಕರ್ಕೇರ ಕೋಡಿ ಮತ್ತು ಸಮಿತಿಯ ಸದಸ್ಯರು ಒಗ್ಗೂಡಿ ಗೌರವ ಸಂಮ್ಮಾನೀಡಿದರು.
ಕೋಟದ ಯಕ್ಷ ಸೌರಭ ಶ್ರೀ ಹಿರೇ ಮಹಾಲಿಂಗೇಶ್ವರ ಕಲಾರಂಗದ ವತಿಯಿಂದ ಶ್ರೀ ಶನೇಶ್ವರ ದೇವಸ್ಥಾನ ಕೋಡಿ ಕನ್ಯಾಣ ಇಲ್ಲಿ ಕರ್ಣಾರ್ಜುನ ತಾಳಮದ್ದಳೆ ಕಾರ್ಯಕ್ರಮದಲ್ಲಿ ದೇವಸ್ಥಾನದ ಗುರುಗಳಾದ ತಿಮ್ಮ ಸುವರ್ಣರನ್ನು ಸನ್ಮಾನಿಸಲಾಯಿತು.














Leave a Reply