ಕೋಟ: ಸರ್ವೋದಯ ಯುವಕ ಮಂಡಲ ಮತ್ತು ಮಹಿಳಾ ಮಂಡಳದ ಜಂಟಿ ಆಶ್ರಯದಲ್ಲಿ ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ಗ್ರಾಮೀಣ ಕ್ರೀಡಾಕೂಟ 2023 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಾಳ್ಕುದ್ರುವಿನಲ್ಲಿ ನಡೆಸಲಾಯಿತು. ಗ್ರಾಮೀಣ ಕ್ರೀಡಾಕೂಟ 2023ನ್ನು ಉದ್ಯಮಿ ಹೆಚ್. ರೆಹಮಾನ್ ಸಾಹೇಬ್ ಉದ್ಘಾಟಿಸಿ ಕ್ರೀಡೆಯು ನಮ್ಮ ಅವಿಭಾಜ್ಯ ಅಂಗ. ಕ್ರೀಡೆಯಲ್ಲಿತಮ್ಮನ್ನು ತಾವು ತೊಡಗಿಸಿಕೊಂಡರೆ ಮುಂದೊಂದು ದಿನ ಉಜ್ವಲ ಭವಿಷ್ಯದ ಜೊತೆ ಸಾಧನೆಗಳ ಮಜಲು ಏರಬಹುದು ಎಂದು ಹೇಳಿದರು.
ಸಭೆಯಲ್ಲಿ ಸ.ಹಿ.ಪ್ರಾ. ಶಾಲೆ ಬಾಳ್ಕುದ್ರುವಿನ ಹೆಸರಾಂತ ದೈಹಿಕ ಶಿಕ್ಷಣ ಶಿಕ್ಷಕ ಶ್ರೀಕಾಂತ್ ಸಾಮಂತ್ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ಹಂಗಾರಕಟ್ಟೆ ಬಾಳ್ಕುದ್ರು ಸರ್ವೋದಯ ಯುವಕ ಮಂಡಲದ ಅಧ್ಯಕ್ಷ ವಿಜೇತ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು ಅತಿಥಿ ಅಭ್ಯಾಗತರಾಗಿ ಸಕಾಲಿಕ ಎಂಟರ್ ಪ್ರೈಸಸ್ ಬಾಳ್ಕುದ್ರು ಇದರ ಮಾಲಿಕ ಗೋಪಾಲಕೃಷ್ಣ ಉಡುಪ ವಿಕೆಟ್ಗೆ ಚೆಂಡನ್ನು ಎಸೆಯುವ ಮೂಲಕ ಗ್ರಾಮೀಣ ಕ್ರೀಡಾಕೂಟ 2023ನ್ನು ಉದ್ಘಾಟಿಸಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಸಭೆಯಲ್ಲಿ ಸ್ಥಳೀಯರಾದ ಶ್ರೀಕಾಂತ್ ಮಧ್ಯಸ್ಥ, ಸ.ಹಿ.ಪ್ರಾ.ಶಾಲೆ. ಬಾಳ್ಕುದ್ರು ಮುಖ್ಯೋಪಾಧ್ಯಾಯಿನಿ ಕುಸುಮಾ, ಹೆಚ್ , ಶಾಲಾ ಶತಮಾನೋತ್ಸವ ಸಮಿತಿಯ ಅಧ್ಯಕ್ಷ ವಿನಯ್, ಐರೋಡಿ ಗ್ರಾಮ ಪಂಚಾಯತ್ ಸದಸ್ಯ ಸುಬ್ರಹ್ಮಣ್ಯ ಆಚಾರ್ಯ, ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷೆ ಕುಸುಮಾ ಪೂಜಾರಿ, ಬಿಲ್ಲವ ಸಂಘದ ಮುಂದಾಳು ರವೀಂದ್ರ ಸುವರ್ಣ,ಮಹಿಳಾ ಮಂಡಲದ ಅಧ್ಯಕ್ಷೆ ರೇಖಾ.ಪಿ. ಸುವರ್ಣ , ಮಹಿಳಾ ಮಂಡಳದ ಹೊಲಿಗೆ ತರಬೇತಿ ಸಮಿತಿ ಅಧ್ಯಕ್ಷೆ ಅನುಸೂಯ ಟೀಚರ್, ಸರ್ವೋದಯ ಯುವಕ ಸಂಘದ ಸರ್ವ ಸದಸ್ಯರು ಉಪಸ್ಥಿತರಿದ್ದರು.
ರಾಮ ದಂಡೆಬೆಟ್ಟು ಸ್ವಾಗತಿಸಿದರು.ಕಾರ್ಯಕ್ರಮವನ್ನು ಅಭಿಜಿತ್ ಪಾಂಡೇಶ್ವರ ನಿರೂಪಿಸಿ, ವಂದಿಸಿದರು.
ಸರ್ವೋದಯ ಯುವಕ ಮಂಡಲ ಮತ್ತು ಮಹಿಳಾ ಮಂಡಳದ ಜಂಟಿ ಆಶ್ರಯದಲ್ಲಿ ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ಗ್ರಾಮೀಣ ಕ್ರೀಡಾಕೂಟದಲ್ಲಿಸ.ಹಿ.ಪ್ರಾ. ಶಾಲೆ ಬಾಳ್ಕುದ್ರುವಿನ ಹೆಸರಾಂತ ದೈಹಿಕ ಶಿಕ್ಷಣ ಶಿಕ್ಷಕ ಶ್ರೀಕಾಂತ್ ಸಾಮಂತ್ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ಸ್ಥಳೀಯರಾದ ಶ್ರೀಕಾಂತ್ ಮಧ್ಯಸ್ಥ, ಸ.ಹಿ.ಪ್ರಾ.ಶಾಲೆ. ಬಾಳ್ಕುದ್ರು ಮುಖ್ಯೋಪಾಧ್ಯಾಯಿನಿ ಕುಸುಮಾ, ಹೆಚ್ , ಶಾಲಾ ಶತಮಾನೋತ್ಸವ ಸಮಿತಿಯ ಅಧ್ಯಕ್ಷ ವಿನಯ್, ಐರೋಡಿ ಗ್ರಾಮ ಪಂಚಾಯತ್ ಸದಸ್ಯ ಸುಬ್ರಹ್ಮಣ್ಯ ಆಚಾರ್ಯ ಉಪಸ್ಥಿತರಿದ್ದರು.














Leave a Reply