ಬೈಕ್ ಕಳತನ: ಕಳ್ಳರ ಹೆಡಿಮುರಿ ಕಟ್ಟಿದ ಸಾವಳಗಿ ಪೋಲಿಸರು
ವರದಿ : ಸಚೀನ ಜಾಧವ ಸಾವಳಗಿ: ವಿವಿಧ ಭಾಗಗಳಲ್ಲಿ ಬೈಕ್‌ಗಳನ್ನು ಕಳ್ಳತನ ಮಾಡಿದ ಆರೋಪದ ಮೇಲೆ ಜಮಖಂಡಿ ತಾಲೂಕಿನ ಸಾವಳಗಿ ಪೋಲಿಸ್ ಠಾಣೆಯ ಪಿಎಸ್ಐ ಜಿ. ಎಂ. ಪೂಜೇರಿ ಇವರ ನೇತೃತ್ವದಲ್ಲಿ, ಹಾಗೂ ಸಿಬ್ಬಂದಿಗಳು ಸೇರಿ ಇಬ್ಬರನ್ನು ಇಲ್ಲಿನ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಆರೋಪಿಗಳಾದ ಶಿವಾನಂದ ಸಿದ್ದರಾಯ ಉಮರಾಣಿ (21) ಹಾಗೂ ಶಿವರಾಜ್ ಬಸಪ್ಪ ಉಪ್ಪಾರ (21) ಬಂಧಿತ ಆರೋಪಿಗಳು ಇಬ್ಬರು ಸಾ||ಬಿಜ್ಜರಗಿ ತಾ|| ತಿಕೋಟಾ ಜಿ|| ವಿಜಯಪುರ ಎಂದು ತಿಳಿಸಿದು ಬಂದಿದೆ. ಇವರ ಬಗ್ಗೆ ಈಗಾಗಲೇ ಐಗಳಿ ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿದ್ದರ ಬಗ್ಗೆ ಇನ್ನೂ ಕೆಲವು ಬೈಕುಗಳು ಕಳ್ಳತನ ಮಾಡಿದ ಕುರಿತು ಒಪ್ಪಿಕೊಂಡಿದ್ದು ಇವರಿಂದ ₹2,90,000 ಲಕ್ಷ ಮೌಲ್ಯದ 08 ಬೈಕ್‌ಗಳನ್ನು ಆರೋಪಿತರ ಕಡೆಯಿಂದಾ ಪೊಲೀಸರು ಜಪ್ತಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು.
‘ಐಷಾರಾಮಿ ಜೀವನಕ್ಕಾಗಿ ಹಣ ಹೊಂದಿಸಲು ಆರೋಪಿಗಳು ನಕಲಿ ಕೀ ಬಳಸಿ ಹಾಗೂ ಹ್ಯಾಂಡಲ್ ಲಾಕ್ ಮುರಿದು ಬೈಕ್‌ಗಳನ್ನು ಕದಿಯುತ್ತಿದ್ದರು. ಪೆಟ್ರೋಲಿಂಗ ಮಾಡುತ್ತಿರುವಾಗ ಇಬ್ಬರೂ ಹುಡುಗರು ಒಬ್ಬನು ಶೈನ್ ಹೋಂಡಾ ಮೋಟರ್ ಸೈಕಲ್ ಇನ್ನೊಬ್ಬನು ಹೀರೋ ಸ್ಪ್ಲೆಂಡರ್ ಪ್ಲಸ್ ಮೋಟಾರ್ ಸೈಕಲ್ ನಡೆಸಿಕೊಂಡು ಬರುತ್ತಿದ್ದನ್ನು ನಾವು ಅವರನ್ನು ತಡೆದು ವಿಚಾರಿಸಲಾಗಿ ಸಮರ್ಪಕವಾದ ಉತ್ತರ ಹಾಗೂ ದಾಖಲಾತಿಗಳನ್ನು ತೋರಿಸದೆ ಇದ್ದು ನಾವು ಅವರು ಅವರನ್ನು ವಿಚಾರಣೆ ಮಾಡಿ ನಂತರ ತಿಳಿದು ಬಂದ ಮಾಹಿತಿ ಇವರು ಕಳ್ಳತನ ಮಾಡುತ್ತಿದ್ದಾರೆ ಎಂದು ಪೊಲೀಸರು ಹೇಳಿದರು.
ಆರೋಪಿಗಳನ್ನು ಬಂಧಿಸಿದ ಸಂದರ್ಭದಲ್ಲಿ ಎಸ್ಐ ಬಿ. ಬಿ. ಯಡವೆ, ಪೋಲಿಸ್ ಸಿಬ್ಬಂದಿಗಳಾದ ಆರ್. ಎಸ್. ಬಸಣ್ಣವರ, ಪಿ. ಎಸ್. ವಾಲೀಕಾರ, ಐ. ಎ. ನದಾಪ, ನೇದವರು ಸಿಬ್ಬಂದಿ ಜನರಾದ ಎಸ್, ಎಸ್, ಉತ್ನಾಳ, ಎಂ. ಜಿ. ವಗ್ಗೆನ್ನವರ, ಎಸ್. ಎನ್. ಹುಚ್ಚಗೌಡರ, ಬಿ. ಎಮ್. ಹೊಸಮನಿ, ಆರ್. ಪಡತಾರೆ, ಎಸ್.ಬಿ ಪೂಜಾರಿ, ಇನ್ನಿತರ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪೋಲಿಸ್ ಮನವಿ: ಮಾನ್ಯ ಎಸ್ ಪಿ ಬಾಗಲಕೋಟ, ಹಾಗೂ ಡಿವೈಎಸ್ಪಿ ಜಮಖಂಡಿ ಅವರು ಮೋಟರ್ ಸೈಕಲ್ ಗಳನ್ನು ಮನೆಯ ಮುಂದೆ ಮತ್ತು ರಸ್ತೆಯ ಬದಿ ನಿಲ್ಲಿಸುವಾಗ ಸರಿಯಾದ ರೀತಿಯಲ್ಲಿ ಹ್ಯಾಂಡಲ್ ಲಾಕ್ ಮಾಡುವಂತೆ. ಹಾಗೂ ಸಾಧ್ಯವಾದರೆ ಸಿಸಿ ಕ್ಯಾಮೆರಾಗಳು ಇರುವ ಕಡೆಗೆ ವಾಹನಗಳನ್ನು ನಿಲ್ಲಿಸುವಂತೆ ಸಾರ್ವಜನಿಕರಲ್ಲಿ ವಿನಂತಿ ಕೋರಿರುತ್ತಾರೆ.














Leave a Reply