ಬೆಂಗಳೂರಿನಲ್ಲಿ ಪೌರಕಾರ್ಮಿಕರ ದಾಹ ಹಾಗೂ ಜನಸಾಮಾನ್ಯರಿಗೆ ನೀಗಿಸಲು ಯುಜನರು ಒಂದು ನೂತನ ಅಭಿಯಾನವನ್ನು ಶುರು ಮಾಡಿದ್ದಾರೆ. ಅವಿನಾಶ್ ಎಂಬ ಯುವಕ ಹಾಗೂ ತನ್ನ ಸಂಗಡಿಗರು , ಸುಮಾರು ಮೂರ್ನಾಲ್ಕು ತಿಂಗಳಿಂದ ಸುಮಾರು ೭ ವಾರ್ಡಗಳ ಅನೇಕ ಪೌರಕಾರ್ಮಿಕರನ್ನು ಭೇಟಿಯಾಗಿ ಅವರ ಸಮಸ್ಯೆಗಳನ್ನು ಆಲಿಸಿ ಈ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.
ತಮ್ಮದೇ ಆದ ಚಿಕ್ಕ ಗುಂಪನ್ನು ಕಟ್ಟಿಕೊಂಡು, ನಿನ್ನೆ ಮಡಿಕೆ ಒಂದನ್ನು ಇಟ್ಟು ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ನೀರಿನ ಮಡಿಕೆಯನ್ನು ನೋಡಿಕೊಳ್ಳುವ ಪ್ರಕಾಶ್ ( ಚಮ್ಮಾರರು), ನೀರು ಹಾಕುವ ಅಪಾರ್ಟ್ನೆಂಟ್ನ ಸೆಕ್ಯೂರಿಟಿ ಗಾರ್ಡ್, ಅಲ್ಲಿರುವ ತೃತೀಯಲಿಂಗಿಯರು ಹಾಗೂ ಆ ರಸ್ತೆಯನ್ನು ಗುಡಿಸುವ ಪೌರಕಾರ್ಮಿಕರು ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿರುವುದು ವಿಶೇಷವಾದ ಸಂಗತಿ. ಜೂನಿಯರ್ ಹೆಲ್ತ್ ಇನ್ಸ್ಪೆಕ್ಟರ್ ಕಾರ್ತಿಕ್, ಹಾಗೂ ವಾರ್ಡ್ನ ಸೂಪರ್ವೈಸರ್ಗಳಾದ ಮುನಿರಾಜು ಹಾಗೂ ರಮಾಂಜಿನೆಯವರು ಸಹ ಅವಿನಾಶ್ ಹಾಗೂ ಸಂಗಡಿಗರ ಬೆಂಬಲಕ್ಕೆ ನಿಂತು, ಪ್ರೋತ್ಸಾಹ ನೀಡಿದರು.
ಈ ಪುಟ್ಟ, ಅರ್ಥಪೂರ್ಣ ಕಾರ್ಯಕ್ರಮದಲ್ಲಿ ಕರಣ್, ಕುಪೆಂದ್ರ ಹಾಗೂ ಹೇಮಂತ್ ಅವರು ಉಪಸ್ಥಿತರಿದ್ದು, ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.














Leave a Reply