ಕೋಟ: ಕಾಮಧೇನು ವಿವಿಧೋದ್ದೇಶ ಸಹಕಾರಿ ಸಂಘ ಹಂದಟ್ಟು ಇದರ 24ನೇ ವಾರ್ಷಿಕ ಮಹಾಸಭೆಯು ಸೆ. 10 ರಂದು ಸಂಘದ ಪ್ರಧಾನ ಕಛೇರಿ ಅರ್ಥ ಇಲ್ಲಿನ ಆವರಣದಲ್ಲಿ ನಡೆಯಿತು.
ಸಹಕಾರಿ ಸಂಘದ ಅಧ್ಯಕ್ಷೆ ಪಾರ್ವತಿ ಇವರ ಅಧ್ಯಕ್ಷತೆಯಲ್ಲಿ ಸಂಸ್ಥೆಯು ಆರ್ಥಿಕ ವರ್ಷದಲ್ಲಿ 139.85 ಕೋಟಿ ವಾರ್ಷಿಕ ವ್ಯವಹಾರವನ್ನು ಸಾಧಿಸಿದ್ದು , ಒಟ್ಟು 24.23 ಕೋಟಿ ಠೇವಣಾತಿಯನ್ನು ಹಾಗೂ ಒಟ್ಟು 19.79 ಕೋಟಿ ಸಾಲದ ಹೊರಬಾಕಿ ಇದ್ದು ವರದಿ ಸಾಲಿನ ಅಂತ್ಯಕ್ಕೆ 10.07 ಲಕ್ಷ ಲಾಭ ಗಳಿಕೆಯನ್ನು ಮಾಡಿದ್ದು, ಸಂಸ್ಥೆಯ ಸದಸ್ಯರಿಗೆ ಕಳೆದ 8 ವರ್ಷಗಳಿಂದ 16% ಡಿವಿಡೆಂಡ್ ನೀಡುತ್ತಿದ್ದು, ಈ ವರ್ಷವು ಕೂಡ ಶೇ16% ಡಿವಿಡೆಂಡ್ ಘೋಷಣೆಯನ್ನು ಸಭೆಯಲ್ಲಿ ಪ್ರಕಟಿಸಲಾಯಿತು.
ಎಲ್.ಎ.ಎಂ.ಪಿ.ಎಸ್ ಸಹಕಾರಿಯ ನಿವೃತ್ತ ಅಧಿಕಾರಿ ಕೃಷ್ಣ ಪುತ್ರನ್ ಹಾಗೂ ಜೈ ಗಣೇಶ್ ಸೌಹಾರ್ದ ಸಹಕಾರಿಯ ಅಧ್ಯಕ್ಷ ಅಶೋಕ್ ಪ್ರಭು ಇವರ ಸಹಕಾರಿ ರಂಗದ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು. ಹಾಗೂ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ವಿಶಿಷ್ಠ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ಕುಮಾರಿ ಆತ್ಮಿಕಾ ಅವರ ಶೈಕ್ಷಣಿಕ ಸಾಧನೆಯನ್ನು ಗುರುತಿಸಿ ಅಭಿನಂದಿಸಲಾಯಿತು.
ಮುಖ್ಯ ಅತಿಥಿಗಳಾಗಿ ಸಹಕಾರಿಯ ಕಾಯ್ದೆ ಸಲಹೆಗಾರರಾದ ಮಂಜುನಾಥ್ ಎಸ್ ಕೆ, ಸಂಸ್ಥೆಯ ನಿರ್ದೇಶಕರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು. ಸಂಸ್ಥೆಯ ಸಿಇಓ ಸತೀಶ್ ಕೆ ನಾಯ್ಕ್ ಸ್ವಾಗತಿಸಿ ವಾರ್ಷಿಕ ಲೆಕ್ಕಪತ್ರಗಳನ್ನು ಮಂಡಿಸಿದರು,ಸಹಕಾರಿಯ ವ್ಯವಸ್ಥಾಪಕರಾದ ಸವಿತಾ ವಾರ್ಷಿಕ ವರದಿ ವಾಚಿಸಿದರು, ಸಹಕಾರಿಯ ವ್ಯವಸ್ಥಾಪಕರಾದ ಮಂಜುನಾಥ್ ಆಚಾರ್ ನಿರೂಪಿಸಿ,ಸಹಕಾರಿಯ ವ್ಯವಸ್ಥಾಪಕರಾದ ಶ್ಯಾಮಲ ವಂದಿಸಿದರು.
ಕಾಮಧೇನು ವಿವಿಧೋದ್ದೇಶ ಸಹಕಾರಿ ಸಂಘ ಹಂದಟ್ಟು ಇದರ 24ನೇ ವಾರ್ಷಿಕ ಮಹಾಸಭೆಯಲ್ಲಿ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ವಿಶಿಷ್ಠ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ಕುಮಾರಿ ಆತ್ಮಿಕಾ, ಎಲ್.ಎ.ಎಂ.ಪಿ.ಎಸ್ ಸಹಕಾರಿಯ ನಿವೃತ್ತ ಅಧಿಕಾರಿ ಕೃಷ್ಣ ಪುತ್ರನ್ ಹಾಗೂ ಜೈ ಗಣೇಶ್ ಸೌಹಾರ್ದ ಸಹಕಾರಿಯ ಅಧ್ಯಕ್ಷ ಅಶೋಕ್ ಪ್ರಭು ಇವರ ಸಹಕಾರಿ ರಂಗದ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು. ಸಹಕಾರಿಯ ಕಾಯ್ದೆ ಸಲಹೆಗಾರರಾದ ಮಂಜುನಾಥ್ ಎಸ್ ಕೆ, ಸಹಕಾರಿ ಸಂಘದ ಅಧ್ಯಕ್ಷೆ ಪಾರ್ವತಿ. ಸಂಸ್ಥೆಯ ಸಿಇಓ ಸತೀಶ್ ಕೆ ನಾಯ್ಕ್ ಮತ್ತಿತರರು ಇದ್ದರು.














Leave a Reply