Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಉಡುಪಿ :ರಾಜಾಂಗಣದ ವೇದಿಕೆಯಲ್ಲಿ “ವರ್ಣಜತಿಮಾಲ)” ನೃತ್ಯ ಭರತನಾಟ್ಯ ಪ್ರದರ್ಶನ

ಪರ್ಯಾಯ ಶ್ರೀ ಕೃಷ್ಣಾಪುರ ಮಠ, ಶ್ರೀ ಕೃಷ್ಣ ಮಠ, ಉಡುಪಿ ಇದರ ಆಶ್ರಯದಲ್ಲಿ ಶ್ರೀ ಶ್ರೀ ಶ್ರೀ ವಿದ್ಯಾಸಾಗರ ತೀರ್ಥ ಶ್ರೀ ಪಾದಂಗಳವರ ಆಶೀರ್ವಾದದೊಂದಿಗೆ ರಾಧಾಕೃಷ್ಣ ನೃತ್ಯ ನಿಕೇತನ (ರಿ.) ಉಡುಪಿ ಇವರ ಮಾಸಿಕ ಸರಣಿ ನೃತ್ಯ ಕಾರ್ಯಕ್ರಮಗಳ ಅಂಗವಾಗಿ “ವರ್ಣಜತಿಮಾಲ” ಭರತನಾಟ್ಯ ನೃತ್ಯ ಮಾರ್ಗ ಪದ್ಧತಿಯ ಪ್ರಮುಖ ನೃತ್ಯ ಬಂದಗಳಾದ ಜತಿಸ್ವರ ಹಾಗೂ ಪದವರ್ಣಗಳ ಸಮ್ಮಿಲನ. ಈ ಕಾರ್ಯಕ್ರಮದಲ್ಲಿ ಸಂಸ್ಥೆಯ 40 ವಿದ್ಯಾರ್ಥಿಗಳು ರಾಜಾಂಗಣದ ವೇದಿಕೆಯಲ್ಲಿ ನೃತ್ಯ ಪ್ರದರ್ಶನವನ್ನು ಮಾಡಿದರು.

ವಿವಿಧ ರಾಗ, ತಾಳ, ರಚನೆಯಲ್ಲಿ ಹೊಂದಿದಂತಹ ಜತಿಸ್ವರ ಹಾಗೂ ಪದವರ್ಣಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು. ಈ ಕಾರ್ಯಕ್ರಮವನ್ನು ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ ಬಿ ಗುಣಾಕರ ಶೆಟ್ಟಿ ಅವರು ಉದ್ಘಾಟಿಸಿದರು. ಕಾರ್ಯಕ್ರಮದ ಹಿಮ್ಮೇಳದಲ್ಲಿ ನಟ್ವಾಂಗ – ಹಾಡುಗಾರಿಕೆ – ನೃತ್ಯ ನಿರ್ದೇಶನ ವಿದುಷಿ ಶ್ರೀಮತಿ ವೀಣಾ ಎಂ. ಸಾಮಗ , ಹಾಡುಗಾರಿಕೆ ವಿದುಷಿ ಅಶ್ವಿನಿ ಮನೋಹರ್, ಪಿಟೀಲು ವಾದನದಲ್ಲಿ ವಿದ್ವಾನ್ ಶ್ರೀಧರಾಚಾರ್ಯ ಉಡುಪಿ, ಮೃದಂಗ ವಾದನದಲ್ಲಿ ವಿದ್ವಾನ್  ಬಿ. ಮನೋಹರ್ ರಾವ್, ಮಂಗಳೂರು, ಕಾರ್ಯಕ್ರಮದ ನಿರ್ವಹಣೆ ವಿದುಷಿ ಪ್ರತಿಕ್ಷ
ಹಾಗೂ ವರ್ಣಾಲಂಕಾರದಲ್ಲಿ ರಮೇಶ್ ಪಣಿಯಾಡಿ ಸಹಕರಿಸಿದರು.

Leave a Reply

Your email address will not be published. Required fields are marked *