Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಗುಂಡ್ಮಿ – ರಥಬೀದಿ ಗೆಳೆಯರಿಂದ ವಿಶೇಷ ಸೋಣೆ ಆರತಿ ಕಾರ್ಯಕ್ರಮ

ಕೋಟ; ಶ್ರೀ ಮಾಣಿ ಚನ್ನಕೇಶವ ದೇವಸ್ಥಾನ ಗುಂಡ್ಮಿ ಇಲ್ಲಿನ ಶ್ರೀ ದೇವರಿಗೆ ರಥಬೀದಿ ಗೆಳೆಯರು ಗುಂಡ್ಮಿ ಸಾಸ್ತಾನ ಇವರ ಆಶ್ರಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ವಿಶೇಷ ಸೋಣೆ ಆರತಿ ಕಾರ್ಯಕ್ರಮ ಇತ್ತೀಚಿಗೆ ಜರುಗಿತು. ದೇವಸ್ಥಾನದ ಅರ್ಚಕರಾದ ಅನಂತರಾಮ ಬಾಯರಿ,ಅನಂತ ಕೃಷ್ಣ ಬಾಯರಿ , ವಿಶ್ವನಾಥ ಐತಾಳರು,ಮೋಹನ ಶಾಸ್ತ್ರಿ, ಚಂದ್ರಶೇಖರ ಶಾಸ್ತ್ರಿಗಳ ಸಮ್ಮುಖದಲ್ಲಿ ವಿಧಿ ವಿಧಾನಗಳಿಂದ ದೇವರ ಪೂಜೆ ತುಂಬಾ ಅದ್ದೂರಿಮಯವಾಗಿ ನೆರವೆರಿತು.

ಧಾರ್ಮಿಕ ಕೈಂಕರ್ಯದಲ್ಲಿ ಸುಬ್ರಮಣ್ಯ ರಾವ್ ಪಾಂಡೇಶ್ವರ ಸಹಕರಿಸಿದರು. ಈ ಸಂದರ್ಭದಲ್ಲಿ ಶ್ರೀ ಶ್ರೀ ರವಿಶಂಕರ್ ಗುರೂಜಿಯವರ ಶಿಷ್ಯ ವೃಂದದವರಿಂದ ಸತ್ಸಂಗ ಭಜನಾ ಕಾರ್ಯಕ್ರಮ ಜರುಗಿತು.ಶಿವ ಕೃಪಾ ಚಂಡೆ ಬಳಗ ಸಾಸ್ತಾನ ಇವರಿಂದ ಚಂಡೆ ವಾದನ, ದೇವಸ್ಥಾನವನ್ನು ವಿಶೇಷ ಹೂಗಳಿಂದ ಅಲಂಕರಿಸಲಾಯಿತು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು,ಸದಸ್ಯರು, ಉತ್ಸವ ಸಮಿತಿಯ ಅಧ್ಯಕ್ಷರು, ಸದಸ್ಯರು, ಭಕ್ತಾಧಿಗಳು ದೇವರ ಈ ಪುಣ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಶ್ರೀ ಮಾಣಿ ಚನ್ನಕೇಶವ ದೇವಸ್ಥಾನ ಗುಂಡ್ಮಿ ಇಲ್ಲಿನ ಶ್ರೀ ದೇವರಿಗೆ ರಥಬೀದಿ ಗೆಳೆಯರು ಗುಂಡ್ಮಿ ಸಾಸ್ತಾನ ಇವರ ಆಶ್ರಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ವಿಶೇಷ ಸೋಣೆ ಆರತಿ ಕಾರ್ಯಕ್ರಮ ಇತ್ತೀಚಿಗೆ ಜರುಗಿತು.

Leave a Reply

Your email address will not be published. Required fields are marked *