Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

3 ವರ್ಷದ ಬಳಿಕ ಊರಿಗೆ ಬಂದು ಮೀನು ಮಾರುತ್ತಿದ್ದ ಅಮ್ಮನಿಗೆ ಸರ್ಪ್ರೈಸ್ ಕೊಟ್ಟ ಮಗ

ಉಡುಪಿ: ಮೂರು ವರ್ಷಗಳ ಬಳಿಕ ವಿದೇಶದಿಂದ ಊರಿಗೆ ಮರಳಿದ ಯುವಕ ತನ್ನ ತಾಯಿಗೆ ಸರ್ಪ್ರೈಸ್ ನೀಡಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗಿದೆ. ಗಂಗೊಳ್ಳಿ ನಿವಾಸಿ ರೋಹಿತ್ ಮೂರು ವರುಷಗಳ ನಂತರ ದುಬೈನಿಂದ ತಾಯ್ನಾಡಿಗೆ ಮರಳಿದ್ದರು. ಮನೆಯವರಿಗೆ, ಮಿತ್ರರಿಗೆ ಸರ್ಪ್ರೈಸ್ ನೀಡುವ ನಿಟ್ಟಿನಿಂದ ತಾವು ಬರುವ ಕುರಿತು ಯಾವುದೇ ಮಾಹಿತಿ ನೀಡಿರಲಿಲ್ಲ. ಅಂತೆಯೇ ಮನೆಗೆ ಮರಳಿದಾಗ ಮನೆಯವರೆಲ್ಲ ರೋಹಿತ್ ನನ್ನು ಎದುರುಗೊಂಡರು. ಆದರೆ ತಾಯಿ ಮಾತ್ರ ಮನೆಯಲ್ಲಿ ಇರದಿರುವುದನ್ನು ಕಂಡು ಬೇಸರಗೊಂಡಿದ್ದ ರೋಹಿತ್, ನೇರವಾಗಿ ಗಂಗೊಳ್ಳಿ ಬಂದರು ಬಳಿ ತಾಯಿ ಮೀನು ಮಾರುವ ಸ್ಥಳಕ್ಕೆ ತೆರಳಿದ್ದಾರೆ.

ತಾಯಿ ಮೀನು ಮಾರುವ ಸ್ಥಳಕ್ಕೆ ಅಪರಿಚಿತರಂತೆ ಅಂದರೆ ಮುಖವನ್ನು ಕರವಸ್ತ್ರದಿಂದ ಮುಚ್ಚಿ ಜೊತೆಗೆ ಕೂಲಿಂಗ್ ಗ್ಲಾಸ್ ಧರಿಸಿ ಮೀನು ಖರೀದಿಸಲು ಗ್ರಾಹಕರಂತೆ ಹೋಗಿದ್ದಾರೆ. ಕೆಲ ಹೊತ್ತಿನ ವರೆಗೆ ತಾಯಿಗೆ ಗುರುತಿಸಲು ಸಾಧ್ಯವಾಗಲಿಲ್ಲ. ಆದರೆ ಮಗನ ಧ್ವನಿ ಕೇಳುತ್ತಿದ್ದಂತೆ ತನ್ನ ಕರುಳಿನ ಕುಡಿ ಎಂದು ತಿಳಿದಿದ್ದು, ತಕ್ಷಣ ತನ್ನ ಮಗನನ್ನು ಬಿಗಿದಪ್ಪಿ ಆನಂದ ಬಾಷ್ಪ ಹರಿಸಿದ್ದಾರೆ. ಮಗ 3ವರ್ಷದ ಬಳಿಕ ಊರಿಗೆ ಬಂದು ತಾಯಿಗೆ ಸರ್ಪ್ರೈಸ್ ಕೊಟ್ಟ ವಿಡಿಯೋ ಇದೀಗಾಗಲೇ ಲಕ್ಷಾಂತರ ವೀಕ್ಷಣೆಯನ್ನು ಪಡೆದುಕೊಂಡಿದೆ.

Leave a Reply

Your email address will not be published. Required fields are marked *