Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಪ್ರಥಮ ಝೋನ್ ಸೋಷಿಯಲ್ ಆಯೋಜಿಸಿದ ಲಯನ್ಸ್ ಕ್ಲಬ್ ಬನ್ನಾಡಿ-ವಡ್ಡರ್ಸೆ

ಲಯನ್ಸ್ ಕ್ಲಬ್ ಬನ್ನಾಡಿ ವಡ್ಡರ್ಸೆಯ ಅಧ್ಯಕ್ಷರಾದ ಲ. ಸುರೇಂದ್ರ ಶೆಟ್ಟಿ ಕೊಮೆ ಇವರ ಅಧ್ಯಕ್ಷತೆಯಲ್ಲಿ ಪ್ರಥಮ ಝೋನ್ ಸೋಷಿಯಲ್ ಕಾರ್ಯಕ್ರಮ ಬನ್ನಾಡಿ ಸುಬ್ಬಣ್ಣ ಹೆಗ್ಡೆ ಸಭಾ ಭವನದಲ್ಲಿ ದಿನಾಂಕ 23-09-2023 ನೇ ಶನಿವಾರ ನಡೆಯಿತು.

ಝೋನ್ ಚಯರ್ ಪರ್ಸನ್ ಲ. ಶಂಕರ್ ಶೆಟ್ಟಿ ಬವಲಾಡಿ ಝೋನ್ ಅಡ್ವೈಸರಿ ಕಮಿಟಿ ಮೀಟಿಂಗನ್ನು ನಡೆಸಿದರು. ಸದ್ರಿ ಮೀಟಿಂಗ್ ನಲ್ಲಿ ಝೋನ್ ನ ಎಲ್ಲಾ ಕ್ಲಬ್ ಗಳ ಪಿ.ಎಸ್.ಟಿ ಹಾಗೂ ಫಸ್ಟ್ ವೈಸ್ ಪ್ರೆಸಿಂಡೆಂಟ್ ಗಳು ಹಾಜರಿದ್ದರು. ನಂತರ ಝೋನ್ ಸೋಷಿಯಲ್ ಸಭಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಲಯನ್ ಶಂಕರ್ ಶೆಟ್ಟಿ ಬವಲಾಡಿ ಇವರು ಲಯನ್ಸ್ ಕ್ಲಬ್ ಬನ್ನಾಡಿ-ವಡ್ಡರ್ಸೆಯ “ಸೇವಾ ಕಾರ್ಯ ವೈಖರಿಯ” ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದರು”.

ಸೇವಾ ಕಾರ್ಯಕ್ರಮದ ಅಂಗವಾಗಿ ವಡ್ಡರ್ಸೆ ಪ್ರೈಮರಿ ಸ್ಕೂಲ್ ಇದರ “ಪ್ರತಿಭಾ ಕಾರಂಜಿ” ಕಾರ್ಯಕ್ರಮಕ್ಕೆ ಧನ ಸಹಾಯ ನೀಡಲಾಯಿತು. ವಡ್ಡರ್ಸೆ ಅಂಗನವಾಡಿ ಮಕ್ಕಳಿಗೆ ಕುರ್ಚಿಗಳನ್ನು ನೀಡಲಾಯಿತು. ಮಂಗಳೂರು ಯುನಿವರ್ಸಿಟಿ ಯ ಕ್ರಿಕೆಟ್ ಕ್ಯಾಪ್ಟನ್ ಕ್ರೀಡಾ ಪ್ರತಿಭೆ ಬನ್ನಾಡಿ ಗ್ರಾಮದ ಉಪ್ಲಾಡಿ ಕು. ವರ್ಷಿತಾ ಇವರಿಗೆ ಕ್ರೀಡಾ ಪ್ರೋತ್ಸಾಹ ಧನ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿನಿ ಬನ್ನಾಡಿ ಯ ಕು. ಶ್ರಯಾಂಕ್ ಗೆ ವಿದ್ಯಾಭ್ಯಾಸಕ್ಕಾಗಿ ಪ್ರೋತ್ಸಾಹ ಧನ ನೀಡಲಾಯಿತು.

ಝೋನ್ ಚಯರ್ ಪರ್ಸನ್ ಲಯನ್ ಶಂಕರ್ ಶೆಟ್ಟಿ ಇವರ ಧರ್ಮ ಪತ್ನಿ ಲಯನ್ ಪುಷ್ಪಾವತಿ ಶಂಕರ್ ಶೆಟ್ಟಿ, ಝೋನ್ ಕ್ಲಬ್ ಗಳಾದ ಲಯನ್ಸ್ ಕ್ಲಬ್ ಕೋಸ್ಟಲ್ ಕುಂದಾಪುರ ಇದರ ಅಧ್ಯಕ್ಷರಾದ ಲ. ವಸಂತರಾಜ್ ಶೆಟ್ಟಿ, ಲಯನ್ಸ್ ಕ್ಲಬ್ ಕುಂದಾಪುರ ಸಿಟಿ ಸೆಂಟರ್ ನ ಅಧ್ಯಕ್ಷರಾದ ಲ. ವೀಣಾ ರಾಜೀವ್ ಕೋಟ್ಯಾನ್, ಆರ್ಡಿ-ಬೆಳ್ವೆ- ಗೋಳಿಯಂಗಡಿ ಅಧ್ಯಕ್ಷರಾದ ಲ.ಪಟ್ಟಾಭಿರಾಮ್ ಭಟ್, ತೆಕ್ಕಟ್ಟೆ ಲಯನ್ಸ್ ಕ್ಲಬ್ ನ ಅಧ್ಯಕ್ಷರಾದ ಕರುಣಾಕರ್ ಶೆಟ್ಟಿ ಉಪಸ್ಥಿತರಿದ್ದರು.

ಲಯನ್ಸ್ ಕ್ಲಬ್ ಬನ್ನಾಡಿ-ವಡ್ಡರ್ಸೆಯ ಲ. ಬನ್ನಾಡಿ ಪ್ರಭಾಕರ್ ಶೆಟ್ಟಿ ಯವರ ಪ್ರಾರ್ಥನೆಯ ಮೂಲಕ ಕಾರ್ಯಕ್ರಮ ಆರಂಭ ಗೊಂಡಿತು. ಲ. ಟಿ.ಸಿ.ಬಿ. ಬನ್ನಾಡಿ ಸಂತೋಷ್ ಶೆಟ್ಟಿ ಫ್ಲ್ಯಾಗ್ ಸೆಲ್ಯುಟೇಶನ್, ಲ. ಸುಭಾಸ್ ಶೆಟ್ಟಿ ಮಧುವನ ಲಯನ್ ಕೋಡ್ ಆಫ್ ಎಥಿಕ್ಸ್ ವಾಚಿಸಿದರು.

ಝೋನ್ ವ್ಯಾಪ್ತಿಯ ಕ್ಲಬ್ ಗಳಾದ ಲಯನ್ಸ್ ಕ್ಲಬ್ ಕೋಸ್ಟಲ್ ಕುಂದಾಪುರ ದ ಕಾರ್ಯದರ್ಶಿ ಲ. ಉದಯ್ ಕುಮಾರ್ ಶೆಟ್ಟಿ ಮಚ್ಚಟ್ಟು, ಲಯನ್ಸ್ ಕ್ಲಬ್ ಕುಂದಾಪುರ ಸಿಟಿ ಸೆಂಟರ್ ನ ಕಾರ್ಯದರ್ಶಿ ಲ. ಶಂಕರ್ ಪೂಜಾರಿ, ಲಯನ್ಸ್ ಕಗಲಬ್ ಆರ್ಡಿ-ಬೆಳ್ವೆ-ಗೋಳಿಯಂಗಡಿ ಕಾರ್ಯದರ್ಶಿ ಲ. ಕೀರ್ತಿ ಕುಮಾರ್ ಶೆಟ್ಟಿ ಎ, ಲಯನ್ಸ್ ಕ್ಲಬ್ ತೆಕ್ಕಟ್ಟೆ ಯ ಕಾರ್ಯದರ್ಶಿ ಲ. ರಾಜೇಂದ್ರ ಶೆಟ್ಟಿ ಹಾಗೂ ಲಯನ್ ಕ್ಲಬ್ ಬನ್ನಾಡಿ-ವಡ್ಡರ್ಸೆ ಇದರ ಕಾರ್ಯದರ್ಶಿ ಲಯನ್ ಮಹೇಂದ್ರ ಆಚಾರ್ ಮಧುವನ ತಮ್ಮ ಕ್ಲಬ್ ಗಳ ಸೇವಾ ಕಾರ್ಯಕ್ರಮಗಳ ವರದಿ ವಾಚಿಸಿದರು. ಲಯನ್ಸ್ ಕ್ಲಬ್ ಬನ್ನಾಡಿ-ವಡ್ಡರ್ಸೆ ಇದರ ನಿಕಟಪೂರ್ವ ಕಾರ್ಯದರ್ಶಿ ಲಯನ್ ಅಜಿತ್ ಶೆಟ್ಟಿ ಕೊತ್ತಾಡಿ ಮುಖ್ಯ ಅತಿಥಿ ಲ. ಶಂಕರ್ ಶೆಟ್ಟಿ ಇವರ ಪರಿಚಯ ಮಾಡಿದರು.

ಲಯನ್ಸ್ ಕ್ಲಬ್ ಬನ್ನಾಡಿ ವಡ್ಡರ್ಸೆಯ ಎಕ್ಸಟೆನ್ಷನ್ ಚಯರ್ ಪರ್ಸನ್ ಲಯನ್ ದಿನಕರ್ ಶೆಟ್ಟಿ ಎಮ್ ಇವರು ದಿನಾಂಕ 01-10-2023 ರಂದು ಜಿಲ್ಲಾ ಲಯನ್ಸ್ ವತಿಯಿಂದ ಉಡುಪಿಯ ಅಮೃತ್ ಗಾರ್ಡನ್ ನಲ್ಲಿ ನಡೆಯಲಿರುವ “ನ್ಯೂ ಮೆಂಬರ್ಸ್ ಓರಿಯೆಂಟೇಷನ್” ಬಗ್ಗೆ ವಿವರವಾದ ಮಾಹಿತಿ ನೀಡಿದರು. ರೀಜನ್ ಚಯರ್ ಪರ್ಸನ್ ಲ. ದೀನಪಾಲ್ ಶೆಟ್ಟಿ, ಕ್ಯಾಬಿನೇಟ್ ಸದಸ್ಯರುಗಳಾದ ಲ. ಅರುಣ್ ಕುಮಾರ್ ಹೆಗ್ಡೆ, ಲ. ರಾಜೀವ ಕೋಟ್ಯಾನ್, ಲ.ಇಂಜಿನಿಯರ್ ಪ್ರಶಾಂತ್ ಹಾಗೂ ಲ. ಬಾಲಕೃಷ್ಣ ಹೆಗ್ಡೆ ಮುಂತಾದವರು ಉಪಸ್ಥಿತರಿದ್ದರು.

ಅಧ್ಯಕ್ಷರಾದ ಲ. ಸುರೇಂದ್ರ ಶೆಟ್ಟಿ ಕೊಮೆ ಅಚ್ಲಾಡಿ ಇವರು ಪ್ರಾಸ್ತಾವಿಕ ಮಾತನಾಡಿ ಅತಿಥಿ ಅಭ್ಯಾಗತರನ್ನು ಸ್ವಾಗತಿಸಿದರು. ಕೋಶಾಧಿಕಾರಿ ಲ. ವಸಂತ್ ವಿ ಶೆಟ್ಟಿ ಸೂರಿಬೆಟ್ಟು ಅಚ್ಲಾಡಿ ವಂದಿಸಿದರು. ಲ. Prof. ಕಲ್ಕಟ್ಟೆ ಚಂದ್ರ ಶೇಖರ್ ಶೆಟ್ಟಿ ಮತ್ತು ಲ. Adv ಬನ್ನಾಡಿ ಸೋಮನಾಥ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *