Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಜನ, ಮನ ಮೆಚ್ಚಿದ ಯಕ್ಷದೇಗುಲದ ‘ಕಂಸವಧೆ’

ಕೋಟ:ಕಳೆದ 45ವರ್ಷದಿಂದ ಸದಾ ಚಟುವಟಿಕೆಯಿಂದಿರುವ ಬೆಂಗಳೂರಿನ ಯಕ್ಷದೇಗುಲ ತಂಡದ ಕಂಸವಧೆ ಯಕ್ಷಗಾನ ಪ್ರದರ್ಶನ 500ಕ್ಕೂ ಹೆಚ್ಚು ಪ್ರಯೋಗ ಕಂಡರೂ, ತನ್ನ ತನವನ್ನು ಉಳಿಸಿಕೊಂಡಿದೆ. ಈವರೆಗೆ ನೂರಾರು ಕಲಾವಿದರು ಈ ಕಂಸವಧೆಯಲ್ಲಿ ಪ್ರದರ್ಶನ ನೀಡಿದ್ದಾರೆ.

ಸೆ.22ರಂದು ಬೆಂಗಳೂರಿನ ಕುಮಾರಸ್ವಾಮಿ ಲೇಔಟ್‍ನ ಗಾನ ರೆಸಿಡೆನ್ಸಿಯಲ್ಲಿ ನಡೆದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಯಕ್ಷದೇಗುಲದ ಕಂಸವಧೆ ಯಕ್ಷಗಾನ ಪ್ರದರ್ಶನ ಅಪಾರ ಜನರ ಮೆಚ್ಚುಗೆಗೆ ಪಾತ್ರವಾಯಿತು. ಕೆ. ಮೋಹನ್ ನಿರ್ದೇಶನದಲ್ಲಿ, ಸುದರ್ಶನ ಉರಾಳರ ಸಂಯೋಜನೆಯಲ್ಲಿ ಭಾಗವತರಾಗಿ ಲಂಬೋದರ ಹೆಗಡೆ, ಮದ್ದಲೆವಾದನದಲ್ಲಿ ಚಿನ್ಮಯಿ, ಚಂಡೆಯಲ್ಲಿ ಶ್ರೀನಿವಾಸ ಪ್ರಭು, ಹಾಗೇ ಮುಮ್ಮೇಳದಲ್ಲಿ ಕಂಸನಾಗಿ ತಮ್ಮಣ್ಣ ಗಾಂವ್ಕರ್, ಕೃಷ್ಣನಾಗಿ ಮನೋಜ್ ಭಟ್, ಅಕ್ರೂರನಾಗಿ ಬಾಲಕೃಷ್ಣ ಭಟ್, ಬಲರಾಮನಾಗಿ ಶ್ರೀನಿಧಿ ಹೊಳ್ಳ, ರಜಕನಾಗಿ ದೇವರಾಜ್ ಕರಬ, ಚಾಣುರನಾಗಿ ಆದಿತ್ಯ ಹೊಳ್ಳ, ಮುಷ್ಟಿಕನಾಗಿ ಪ್ರಕಾಶ್ ಉಳ್ಳೂರ, ಗೋಪಿಕೆಯರಾಗಿ ಶ್ರೀವಿದ್ಯಾ, ಅನಿಕ ಮತ್ತು ಪ್ರತ್ಯುಷ ಭಾಗವಹಿಸಿದರು. ಮೇಕಪ್‍ನಲ್ಲಿ ಪ್ರಿಯಾಂಕ ಕೆ. ಮೋಹನ್ ಸಹಕಾರ ನೀಡಿದರು.

ಬೆಂಗಳೂರಿನ ಯಕ್ಷದೇಗುಲ ತಂಡದ ಕಂಸವಧೆ ಯಕ್ಷಗಾನ ಪ್ರದರ್ಶನ ನಡೆಯಿತು.

Leave a Reply

Your email address will not be published. Required fields are marked *