
ಕೋಟ: ಅಂತರಾಷ್ಟ್ರೀಯ ಹಿರಿಯ ವ್ಯಕ್ತಿಗಳ ದಿನದ ಅಂಗವಾಗಿ ಭಾನುವಾರ ಕೋಟ ಗ್ರಾಮ ಪಂಚಾಯತ್ ಮಣೂರು ಗ್ರಾಮದ ಹಿರಿಯ ಮತದಾರರಾದ ಶಾರದಾಬಾಯಿ ಪಡಿಯಾರ್ ಇವರನ್ನು ಸ್ವಗೃಹದಲ್ಲಿ ಪಂಚಾಯತ್ ನ ಅಧ್ಯಕ್ಷೆ ಜ್ಯೋತಿ ಭರತ್ ಕುಮಾರ್ ಶೆಟ್ಟಿಯವರು ಶಾಲು ಹೊದಿಸಿ ಸನ್ಮಾನಿಸಿ ಶುಭಹಾರೈಸಿದರು.
ಈ ಸಂದರ್ಭ ಉಪಾಧ್ಯಕ್ಷ ಪಾಂಡು ಪೂಜಾರಿ , ಸದಸ್ಯರಾದ ಅಜಿತ್ ದೇವಾಡಿಗ ,ಚಂದ್ರ ಪೂಜಾರಿ, ಶಿವರಾಮ್ ಶೆಟ್ಟಿ, ಸಂತೋಷ ಪ್ರಭು , ಲೆಕ್ಕ ಸಹಾಯಕ ಶೇಖರ್ ಮರವಂತೆ ,ಸಿಬ್ಬಂದಿ ನಿತಿನ್ ಹಾಜರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸತೀಶ್ ವಡ್ಡರ್ಸೆ ಕಾರ್ಯಕ್ರಮ ನಿರೂಪಿಸಿದರು .
ಅಂತರಾಷ್ಟ್ರೀಯ ಹಿರಿಯ ವ್ಯಕ್ತಿಗಳ ದಿನದ ಅಂಗವಾಗಿ ಭಾನುವಾರ ಕೋಟ ಗ್ರಾಮ ಪಂಚಾಯತ್ ಮಣೂರು ಗ್ರಾಮದ ಹಿರಿಯ ಮತದಾರರಾದ ಶಾರದಾಬಾಯಿ ಪಡಿಯಾರ್ ಇವರನ್ನು ಸ್ವಗೃಹದಲ್ಲಿ ಪಂಚಾಯತ್ ನ ಅಧ್ಯಕ್ಷೆ ಜ್ಯೋತಿ ಭರತ್ ಕುಮಾರ್ ಶೆಟ್ಟಿಯವರು ಶಾಲು ಹೊದಿಸಿ ಸನ್ಮಾನಿಸಿ ಶುಭಹಾರೈಸಿದರು.
Leave a Reply