
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್(ರಿ ) ಬ್ರಹ್ಮಾವರ ,ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮದಡಿಯಲ್ಲಿ ಕೋಟ ವಲಯದ ಪಾರಂಪಳ್ಳಿ ಕಾರ್ಯಕ್ಷೇತ್ರದ ಮಾರಿಯಮ್ಮ ಜ್ಞಾನವಿಕಾಸ ಕೇಂದ್ರದ 4ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಜನಜಾಗ್ರತಿ ವೇದಿಕೆಯ ತಾಲೂಕು ಮಾಜಿ ಅಧ್ಯಕ್ಷರಾದ ಅಚ್ಚುತ ಪೂಜಾರಿ ರವರು ಉದ್ಘಾಟಿಸಿ ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮ ಮಹಿಳೆಯರಿಗೆ ತಮ್ಮ ಪ್ರತಿಭೆ ವ್ಯಕ್ತಪಡಿಸಲು ವೇದಿಕೆಯಾಗಿದೆ ಈ ಕಾರ್ಯಕ್ರಮ ದಿಂದಾಗಿ ಎಷ್ಟೋ ಮಹಿಳೆಯರು ಸಮಾಜದ ಮುಖ್ಯ ವಾಹಿನಿಗೆ ಬಂದು ತಮ್ಮನ್ನು ತಾವು ಪರಿವರ್ತನೆ ಮಾಡಿಕೊಂಡಿರುವುದು ಸಂತೋಷದ ವಿಚಾರವಾಗಿದೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಈ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರಾದ ಗಣೇಶ್ ರವರು ಮಹಿಳೆಯರಿಗೆ ಸ್ವಉದ್ಯೋಗ ಕಲ್ಪಿಸಿಕೊಟ್ಟಿದ್ದೆ ಮಾತ್ರ ಶ್ರೀ ಹೇಮಾವತಿ ಅಮ್ಮನವರು ಇದರ ಸದುಪಯೋಗ ಪಡೆದುಕೊಂಡು ಏನಾದರೂ ಉದ್ಯೋಗ ಮಾಡಿ ತಮ್ಮ ಕಾಲು ಮೇಲೆ ತಾವು ನಿಲ್ಲುವಂತೆ ಆಗಬೇಕು ಹಾಗೂ ಮಕ್ಕಳ ಶಿಕ್ಷಣದ ಜೊತೆಗೆ ಜೀವನ ಶಿಕ್ಷಣಕೆ ಹೆಚ್ಚು ಪ್ರಾಮುಖ್ಯತೆ ನೀಡಬೇಕೆಂದು ತಿಳಿಸುತ್ತ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಒಕ್ಕೂಟದ ಅಧ್ಯಕ್ಷರರಾದ ಸವಿತಾ ರವರು ಈ ಕಾರ್ಯಕ್ರಮ ನಮ್ಮ ಗ್ರಾಮಕ್ಕೆ ಬಂದಿದ್ದು ನಮ್ಮೆಲ್ಲರ ಪುಣ್ಯದ ಫಲ ಇಂದು ನಾವು ಮನೆಯಲ್ಲಿ ಕುಳಿತುಕೊಳ್ಳಬೇಕಿತ್ತು ಆದರೆ ಜ್ಞಾನ ವಿಕಾಸದ ಮೂಲಕ ಕೆಲವೊಂದು ಕೌಶಲ್ಯಗಳನ್ನು ಕಲಿತುಕೊಂಡೆವು ವಿವಿಧ ರೀತಿಯ ಮಾಹಿತಿಗಳನ್ನು ಪಡೆದುಕೊಂಡು ತಮ್ಮ ಜೀವನದಲ್ಲಿ ಅದನ್ನು ಅಳವಡಿಸಿಕೊಂಡಿದ್ದೇವೆ ಎಂದು ಹೇಳುತ್ತಾ ಅಧ್ಯಕ್ಷೀಯ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ವಲಯದ ಮೇಲ್ವಿಚಾರಕರಾದ ನೇತ್ರಾವತಿಯವರು ಉಪಸ್ಥಿತರಿದ್ದರು .ಈ ಕಾರ್ಯಕ್ರಮದ ನಿರೂಪಣೆಯನ್ನು ತಾಲೂಕು ಸಮನ್ವ್ಯಾಧಿಕಾರಿ ಪುಷ್ಪಲತ ಶೆಟ್ಟಿ ,ಸ್ವಾಗತ ಕೇಂದ್ರದ ಸದಸ್ಯರಾದ ಶ್ವೇತ ಹಾಗೂ ವರದಿ ಮಂಡನೆಯನ್ನು ಕೇಂದ್ರದ ಸಂಯೋಜಕರಾದ ಸುಜಾತ, ಧನ್ಯವಾದಗಳು ಕೇಂದ್ರ ಸದಸ್ಯರಾದ ಮಾಲತಿ ರವರು ಮಾಡಿರುತ್ತಾರೆ. ಈ ಕಾರ್ಯಕ್ರಮದಲ್ಲಿ ಸುಮಾರು 78 ಮಂದಿ ಸದಸ್ಯರು ಭಾಗವಹಿಸಿದ್ದಾರೆ ಈ ಕಾರ್ಯಕ್ರಮದ ಪ್ರಯುಕ್ತ ಆಟೋ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ವಿತರಣೆ ಮಾಡಲಾಯಿತು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಲಾದ ಜನಪದ ಡ್ಯಾನ್ಸಹಾಗೂ ಕುಣಿತ ಭಜನೆಗಳನ್ನು ಮಾಡುವುದರ ಮೂಲಕ ಮನೋರಂಜನೆ ಕಾರ್ಯಕ್ರಮ ನೀಡಿದರು .
Leave a Reply