
ಭಾರತೀಯ ಜನತಾ ಪಾರ್ಟಿ ಜಿಲ್ಲಾ ಮಹಿಳಾ ಮೋರ್ಚದ ವತಿಯಿಂದ ಗಾಂಧಿ ಜಯಂತಿಯ ಪ್ರಯುಕ್ತ ಸ್ವಚ್ಛತಾ ಕಾರ್ಯಕ್ರಮ ಉಡುಪಿ ನಗರಸಭಾ ವ್ಯಾಪ್ತಿಯ ಪೆರಂಪಳ್ಳಿ ವಾರ್ಡಿನ ಅಂಗನವಾಡಿ ಕೇಂದ್ರ, ಬೊಬ್ಬರ್ಯ ಕಟ್ಟೆ ಬಸ್ ಸ್ಟ್ಯಾಂಡ್, ಮತ್ತು ಬೊಬ್ಬರ್ಯ ದೈವಸ್ಥಾನದ ವಠಾರದಲ್ಲಿ ನಡೆಯಿತು.

ಸ್ವಚ್ಛತಾ ಕಾರ್ಯಕ್ರಮದಲ್ಲಿ ಜಿಲ್ಲಾ ಮಹಿಳಾ ಮೋರ್ಚದ ಅಧ್ಯಕ್ಷ ವೀಣಾ ಎಸ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರಶ್ಮಿತಾ, ಬಾಲಕೃಷ್ಣ ಶೆಟ್ಟಿ, ನಗರ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಸುಜಲ, ಸತೀಶ ಸುಧಾ ಪೈ, ಅಶ್ವಿನಿ ಶೆಟ್ಟಿ, ಮಾಯಾ ಕಾಮತ್, ಉಡುಪಿ ನಗರಸಭೆಯ ನಾಮ ನಿರ್ದೇಶಿತ ಸದಸ್ಯೆ ಅರುಣ ಎಸ್ ಪೂಜಾರಿ, ಪೂರ್ಣಿಮ ರತ್ನಾಕರ್, ವಿದ್ಯಾ ಶಾಮ್ ಸುಂದರ್, ಸುಗುಣ, ಚಂದ್ರಿಕಾ, ಸುಜಾತ, ಯಶೋದಾ, ಶೆರ್ಲಿನ್, ಸುಮಾ, ಪ್ರೇಮ, ಪೂರ್ಣಿಮಾ, ಸುಮಿತ್ರ, ನಾಗರತ್ನ ಗೀತಾ, ವಿದ್ಯಾ ಭಟ್, ಪುಷ್ಪ ಮೊದಲಾದವರು ಉಪಸ್ಥಿತರಿದ್ದರು.
Leave a Reply