Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕೋಟ ಬ್ಲಾಕ್ ಕಾಂಗ್ರೆಸ್‍ನ ಇಂದಿರಾ ಭವನದಲ್ಲಿ ನಡೆದ ಮಹಾತ್ಮಾ ಗಾಂಧೀಜಿ, ಮಾಜಿ ಪ್ರಧಾನಿ ಭಾರತ ರತ್ನ ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮ ದಿನಾಚರಣೆ
ಸತ್ಯ, ಶಾಂತಿ ,ಅಹಿಂಸೆಯ ಮಹಾನ್ ಪ್ರತಿಪಾದಕ ಗಾಂಧೀಜಿ –
ಬಿ.ಎಂ.ಸಂದೀಪ್ ಕುಮಾರ್

ಕೋಟ: ಅಹಿಂಸಾತ್ಮಕ ರೀತಿಯಲ್ಲಿ ಅವಿರತವಾಗಿ ಹೋರಾಟ ನಡೆಸಿ ಬ್ರಿಟಿಷರ ಕಪಿಮುಷ್ಟಿಯಲ್ಲಿದ್ದ ಭಾರತವನ್ನು ಸ್ವತಂತ್ರ ರಾಷ್ಟ್ರವನ್ನಾಗಿಸುವ ಮೂಲಕ ಸತ್ಯ ,ಶಾಂತಿ , ಅಹಿಂಸೆಯೇ ಯಶಸ್ಸಿನ ಮೂಲಮಂತ್ರವೆಂದು ಜಗತ್ತಿಗೆ ತೋರಿಸಿಕೊಟ್ಟಿರುವ ಮಹಾತ್ಮ ಗಾಂಧೀಜಿಯವರು ಮಹಾನ್ ಅಹಿಂಸಾ ಪ್ರತಿಪಾದಕ ಎಂದು ರಾಷ್ಟ್ರೀಯ ಕಾಂಗ್ರೆಸ್‍ನ ಎಐಸಿಸಿ ಪ್ರಧಾನ ಮುಖ್ಯ ಕಾರ್ಯದರ್ಶಿ ಪ್ರಸ್ತುತ ಗುಜರಾತ್ ರಾಜ್ಯದ ಕಾಂಗ್ರೆಸ್ ಪಕ್ಷದ ಉಸ್ತುವಾರಿ
ಬಿ.ಎಂ.ಸಂದೀಪ್ ಕುಮಾರ್ ಹೇಳಿದರು.

ಸೋಮವಾರ ಕೋಟ ಬ್ಲಾಕ್ ಕಾಂಗ್ರೆಸ್‍ನ ಇಂದಿರಾ ಭವನದಲ್ಲಿ ನಡೆದ ಮಹಾತ್ಮಾ ಗಾಂಧೀಜಿಯವರ
ಹಾಗೂ ದೇಶದ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಗಾಗಿ ಶ್ರಮಿಸಿದ ಮಾಜಿ ಪ್ರಧಾನಿ ಭಾರತ ರತ್ನ ಲಾಲ್ ಬಹದ್ದೂರ್ ಶಾಸ್ತ್ರಿಯವರು ಜನ್ಮ ದಿನಾಚರಣೆಯ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ ಭಾವಚಿತ್ರಕ್ಕೆ ಕಾಂಗ್ರೆಸ್ ಮುಖಂಡರ ಸಮ್ಮುಖದಲ್ಲಿ ಪುಷ್ಪಾಚರಣೆ ಸಲ್ಲಿಸಲಾಯಿತು. ಹಿರಿಯ ಕಾಂಗ್ರೆಸ್ ಮುಖಂಡ ಶಿವರಾಮ್ ಶೆಟ್ಟಿ ಮಲ್ಯಾಡಿ, ಸಾಲಿಗ್ರಾಮ ಪಟ್ಟಣ ಪಂಚಾಯತ್ ವಿರೋಧ ಪಕ್ಷದ ನಾಯಕ ಶ್ರೀನಿವಾಸ್ ಅಮೀನ್, ಬ್ಲಾಕ್ ಕಾಂಗ್ರೆಸ್ ಮಹಿಳಾ ಅಧ್ಯಕ್ಷ ರೇಖಾ ಪಿ ಸುವರ್ಣ, ಉಡುಪಿ ಜಿಲ್ಲಾ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಅಧ್ಯಕ್ಷ ರೋಷನಿ ಒಲೆವೆರಾ, ರಾಜ್ಯ ಪ್ರಧಾನ ಯುವ ಕಾಂಗ್ರೆಸ್‍ನ ಕಾರ್ಯದರ್ಶಿ ಅಜಿತ್ ಶೆಟ್ಟಿ ಯಾಳಕ್ಲು, ಪಾಂಡೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷ ಸುಶೀಲ ಪೂಜಾರಿ, ಮಾಜಿ ಕೋಟ ಪಂಚಾಯತ್ ಸದಸ್ಯೆ ಸುಧಾ ಪೂಜಾರಿ ಉಪಸ್ಥಿತರಿದ್ದರು.

ಸಭೆನಲ್ಲಿ ಮುಂಬರುವ ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್, ಲೋಕಸಭಾ ಚುನಾವಣೆ ಹಾಗೂ ನೈರುತ್ಯ ಪದವಿಧರ ಶಿಕ್ಷಕರ ಕ್ಷೇತ್ರದ ಚುನಾವಣೆ ಬಗ್ಗೆ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ಚರ್ಚಿಸಲಾಯಿತು, ಅಲ್ಲದೆ ಬ್ರಹ್ಮವಾರ ಸಕ್ಕರೆ ಕಾರ್ಖಾನೆನಲ್ಲಿ ನಡೆದ ಬ್ರಷ್ಟಾಚಾರದ ಕುರಿತು ಮುಂದಿನ ಹೋರಾಟದ ಬಗ್ಗೆ ಚರ್ಚಿಸಲಾಯಿತು.

ದಿನೇಶ್ ಬಂಗೇರ ಗುಂಡ್ಮಿ, ಬಸವ ಪೂಜಾರಿ ಸಸ್ತಾನ, ಬಾಲಕೃಷ್ಣ ಪೂಜಾರಿ ಸಸ್ತಾನ, ಶ್ರೀನಿವಾಸ್ ಶೆಟ್ಟಿ ಕೊರ್ಗಿ, ರಮಾನಂದ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದು, ಗಣೇಶ್ ಕೆ ನೆಲ್ಲಬೆಟ್ಟು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಕೋಟ ಬ್ಲಾಕ್ ಕಾಂಗ್ರೆಸ್‍ನ ಇಂದಿರಾ ಭವನದಲ್ಲಿ ನಡೆದ ಮಹಾತ್ಮಾ ಗಾಂಧೀಜಿ, ಮಾಜಿ ಪ್ರಧಾನಿ ಭಾರತ ರತ್ನ ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮ ದಿನಾಚರಣೆ ಕಾರ್ಯಕ್ರಮ ನಡೆಯಿತು.

Leave a Reply

Your email address will not be published. Required fields are marked *